ಬೆಂಗಳೂರು, ಫೆಬ್ರವರಿ 2025 –ಕಿಡ್ನಿ ನಮ್ಮ ದೇಹದ ಬಹು ಮುಖ್ಯ ಅಂಗ. ಪ್ರತಿ ಕ್ಷಣ ನಾವು ಕಿಡ್ನಿ ಆರೋಗ್ಯದ ಬಗ್ಗೆ ಚಿಂತಿಸಬೇಕಾದ ಅಗತ್ಯವಿದೆ. ಹೀಗಿರುವಾಗ ಬೆಂಗಳೂರಿನ ವೈಟ್ ಫೀಲ್ಡ್ ನಲ್ಲಿ ಇರುವ ಮೆಡಿಕವರ್ ಆಸ್ಪತ್ರೆ ಕಿಡ್ನಿ ತಪಾಸಣೆಗಾಗಿ ವಿಶೇಷ ಪ್ಯಾಕೇಜ್ ಆರಂಭಿಸಿದೆ. ಮುಂಚಿತವಾಗಿ ಕಿಡ್ನಿಗೆ ಸಂಬಂಧಿಸಿದ ತಪಾಸಣೆ ನಡೆಸಲು ಮತ್ತು ಯಾವುದೇ ಸಮಸ್ಯೆ ಆಗದಂತೆ ತಡೆಯಲು ಈ ಪ್ಯಾಕೇಜ್ ಸಹಾಯವಾಗಲಿದೆ.
ಈ ವಿಶೇಷ ಆರೋಗ್ಯ ಯೋಜನೆ 10ನೇ ಫೆಬ್ರವರಿ ರಿಂದ 28ನೇ ಫೆಬ್ರವರಿ ರವರೆಗೆ, ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ (ಭಾನುವಾರಗಳು ಮತ್ತು ಸಾರ್ವಜನಿಕ ರಜಾದಿನಗಳು ಹೊರತುಪಡಿಸಿ) ಲಭ್ಯವಿರುತ್ತದೆ.
ಕಿಡ್ನಿ ಆರೋಗ್ಯ ನಮ್ಮ ದೇಹದ ಸಂಪೂರ್ಣ ಸುರಕ್ಷತೆಯ ಸಂಕೇತವಾಗಿದೆ. ಕಿಡ್ನಿ ಸಮಸ್ಯೆಯನ್ನು ಮುಂಚಿತ ಪತ್ತೆ ಮಾಡುವುದರಿಂದ ಗಂಭೀರ ಸಮಸ್ಯೆಗಳನ್ನು ತಪ್ಪಿಸಬಹುದು. ಈ ತಪಾಸಣೆ ಪ್ಯಾಕೇಜ್ ಕಡಿಮೆ ದರದಲ್ಲಿ ಸಮಗ್ರ ತಪಾಸಣೆಯನ್ನು ಒದಗಿಸಲು ವಿನ್ಯಾಸಗೊಳಿಸಲಾಗಿದೆ. ಇದರಿಂದ ಅಪಾಯದಲ್ಲಿರುವ ವ್ಯಕ್ತಿಗಳು ಸಕಾಲದಲ್ಲಿ ವೈದ್ಯಕೀಯ ಸಲಹೆ ಪಡೆಯಬಹುದು.
ಪ್ಯಾಕೇಜ್ ವಿವರಗಳು:
ಈ ತಪಾಸಣೆ ಪ್ಯಾಕೇಜ್ ಒಳಗೊಂಡಿದೆ:
-ಸಂಪೂರ್ಣ ಮೂತ್ರ ಪರೀಕ್ಷೆ
-ಸೀರಮ್ ಕ್ರಿಯಾಟಿನಿನ್ ಪರೀಕ್ಷೆ
-ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ (KUB)
-ನಫ್ರೋಲಾಜಿಸ್ಟ್ ಸಮಾಲೋಚನೆ
-ಆಹಾರ ತಜ್ಞರ ಸಮಾಲೋಚನೆ
ಈ ಪ್ಯಾಕೇಜ್ನ ಪ್ರಾರಂಭಿಕ ದರ 4140ರೂ ಆಗಿದ್ದು, ಇದನ್ನು ಈಗ ವಿಶೇಷ ರಿಯಾಯಿತಿ ದರದಲ್ಲಿ ₹1000 ಗೆ ನೀಡಲಾಗುತ್ತಾ ಇದೆ .
ಯಾರು ತಪಾಸಣೆ ಮಾಡಿಸಿಕೊಳ್ಳಬೇಕು?
ಕೆಳಕಂಡ ಲಕ್ಷಣಗಳು ಅಥವಾ ಸ್ಥಿತಿಯುಳ್ಳವರು ಈ ತಪಾಸಣೆಯನ್ನು ಮಾಡಿಸಿಕೊಳ್ಳುವುದು ಉತ್ತಮ
ಮಧುಮೇಹ, ರಕ್ತದೊತ್ತಡ
ಪೆಲ್ವಿಕ್ ನೋವು ಹಾಗೂ ಮೂತ್ರದಲ್ಲಿ ರಕ್ತ
ಅಸಹಜ ಬಣ್ಣದ ಮೂತ್ರ ವಿಸರ್ಜನೆ ಉರಿಯುವುದು.ಈ ಎಲ್ಲಾ ರೋಗ ಲಕ್ಷಣಗಳು ಇರುವವರು ಬಂದು ಪರೀಕ್ಷೆ ಮಾಡಿಕೊಳ್ಳ ಬಹುದು.
ಹಿರಿಯ ತಜ್ಞ ನಫ್ರೋಲಾಜಿಸ್ಟ್ ಮತ್ತು ಕಿಡ್ನಿ ಟ್ರಾನ್ಸ್ಪ್ಲಾಂಟೇಷನ್ ವೈದ್ಯರಾದ ಡಾ. ರವಿ ಶಂಕರ್ ರವರನ್ನಜ ಭೇಟಿಯಾಗಿ ಸಲಹೆ ಪಡೆಯಬಹುದಾಗಿದೆ .
ಸಂದರ್ಶನಕ್ಕೆ ಅಥವಾ ಹೆಚ್ಚಿನ ಮಾಹಿತಿಗಾಗಿ 040 68334455 ಅನ್ನು ಸಂಪರ್ಕಿಸಿ