ಬೆಂಗಳೂರು:- ಜೂಜಿಗಾಗಿ ಕಳ್ಳತನಕ್ಕೆ ಇಳಿದವನನ್ನ ಬೆಂಗಳೂರು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬೀದರ್ ನಿಂದ ಬೆಂಗಳೂರಿಗೆ ರೈಲಿನಲ್ಲಿ ಬಂದು ಸರಗಳವು ಮಾಡುತ್ತಿದ್ದರು. ಇದೀಗ ಆರೋಪಿ ಖಾಕಿ ಬಲೆಗೆ ಬಿದ್ದಿದ್ದಾನೆ.
ಕಿರಣ್ ಬಂಧಿತ ಆರೋಪಿ
ಆನ್ಲೈನ್ ರಮ್ಮಿ ಜೂಜಿನ ಆಟಕ್ಕೆ ಕಿರಣ್ ದಾಸನಾಗಿದ್ದ. ರಮ್ಮಿ ಆಟ ಆಡಲು ಹಣವಿಲ್ಲದ್ದಕ್ಕೆ ಕೆಲಸ ಹುಡುಕಿ ಬೆಂಗಳೂರಿಗೆ ಬಂದಿದ್ದ. ಬೀದರ್ ನಿಂದ ಬೆಂಗಳೂರಿಗೆ ಬಂದವನಿಗೆ ಎಲ್ಲಿಯೂ ಕೆಲಸ ಸಿಕ್ಕಿರಲಿಲ್ಲ. ಕಳೆದ ಜನವರಿ 26 ರಂದು ಜಯನಗರದ ಶಾಕಾಂಬರಿನಗರದಲ್ಲಿ ವೃದ್ದೆಯ ಸರ ಕಸಿದು ಪರಾರಿಯಾಗಿದ್ದ.
ಸರ ಎಗರಿಸ್ತಿದ್ದಂತೆ ಬೆಂಗಳೂರಿನಿಂದ ರೈಲಿನ ಮೂಲಕ ಬೀದರ್ ಗೆ ತೆರಳಿದ್ದ. ಕಿರಣ್ ಕಳ್ಳತನದ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸರ ಕದ್ದು ಬ್ಯಾಗ್ ನಲ್ಲಿ ಇಟ್ಟುಕೊಂಡು ಕಿರಣ್ ಎಸ್ಕೇಪ್ ಆಗಿದ್ದ. ಬೆಂಗಳೂರಿನಲ್ಲಿ ಕದ್ದ ಸರವನ್ನ ಬೀದರ್ ನಲ್ಲಿ
ಅಡಮಾನವಿಟ್ಟಿದ್ದ. ಅಡಮಾನದಿಂದ ಬಂದ ದುಡ್ಡನ್ನ ಕಿರಣ್ ಆನ್ ಲೈನ್ ರಮ್ಮಿ ಜೂಜಾಡಿದ್ದ.
ಸದ್ಯ ಜಯನಗರ ಪೊಲೀಸರಿಂದ ಆರೋಪಿ ಬಂಧಿಸಿ ವಿಚಾರಣೆ ಮಾಡಲಾಗುತ್ತಿದೆ.