ನಟ ಡಾಲಿ ಧನಂಜಯ್ ಮದುವೆ ಸಂಭ್ರಮದಲ್ಲಿದ್ದಾರೆ. ಡಾಲಿ ಹಾಗೂ ಧನ್ಯತಾ ಮದುವೆಗೆ ಇನ್ನೂ ಕೆಲವೇ ಕೆಲವು ದಿನಗಳ ಮಾತ್ರವೇ ಭಾಕಿ ಇದ್ದು ಈಗಾಗಲೇ ಹಲವು ಗಣ್ಯರಿಗೆ ಮದುವೆ ಆಮಂತ್ರಣ ತಲುಪಿದೆ. ಅಂತೆಯೇ ಪರಭಾಷೆಯ ಮಂದಿಗೂ ಡಾಲಿ ಮದುವೆ ಪತ್ರಿಕೆ ನೀಡಿ ಆಹ್ವಾನಿಸಿದ್ದಾರೆ.
ನಟ ಡಾಲಿ ಕನ್ನಡದ ಜೊತೆಗೆ ಪರಭಾಷೆಯಲ್ಲೂ ಮಿಂಚುತ್ತಿದ್ದಾರೆ. ಇತ್ತೀಚೆಗೆ ತೆರೆಕಂಡ ಪುಷ್ಪ 2 ಸಿನಿಮಾದಲ್ಲೂ ಡಾಲಿ ನಟಿಸಿದ್ದರು. ಹೀಗಾಗಿ ಪರಭಾಷೆಯ ಕಲಾವಿದರ ಜೊತೆಯೂ ಡಾಲಿ ಉತ್ತಮ ಒಡನಾಟ ಹೊಂದಿದ್ದಾರೆ. ಇದೀಗ ಡಾಲಿ ಮದುವೆ ಪತ್ರಿಕೆಯನ್ನು ನಟ ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣ ಅವರಿಗೆ ನೀಡಿದ್ದಾರೆ.
ನಟಿ ರಶ್ಮಿಕಾ ಮಂದಣ್ಣ ಅವರಿಗೂ ಡಾಲಿ ಧನಂಜಯ್ ಆಮಂತ್ರಣ ನೀಡಿದ್ದಾರೆ. ಇಷ್ಟು ವರ್ಷಗಳ ಕಾಲ ಕನ್ನಡ ಚಿತ್ರರಂಗದಿಂದ ದೂರವೇ ಉಳಿದಿದ್ದ ರಶ್ಮಿಕಾ ಇದೀಗ ಸ್ಯಾಂಡಲ್ವುಡ್ ವಿವಾಹಕ್ಕೆ ಆಗಮಿಸುತ್ತಾರಾ ಎನ್ನುವ ಕುತೂಹಲ ಇದೆ.
‘ಪುಷ್ಪ 2’ ಚಿತ್ರದ ನಿರ್ದೇಶಕ ಸುಕುಮಾರ್ ಅವರಿಗೂ ವಿವಾಹ ಆಮಂತ್ರಣ ತಲುಪಿದೆ. ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಗಮನ ಸೆಳೆದಿವೆ. ‘ಪುಷ್ಪ 3’ ಚಿತ್ರವನ್ನು ಅವರು ಮಾಡುವುದಾಗಿ ಸೂಚನೆ ಕೊಟ್ಟಿದ್ದಾರೆ.
‘ಮೈತ್ರಿ ಮೂವೀ ಮೇಕರ್ಸ್’ ‘ಪುಷ್ಪ 2’ ಚಿತ್ರ ನಿರ್ಮಾಣದಲ್ಲಿ ಪ್ರಮುಖ ಪಾತ್ರವಹಿಸಿದೆ. ಇದರ ನಿರ್ಮಾತೃರಿಗೂ ಡಾಲಿ ಮದುವೆ ಪತ್ರಿಕೆ ನೀಡಿದ್ದಾರೆ. ಸ್ವತಃ ಧನಂಜಯ್ ಅವರೇ ಕಚೇರಿಗೆ ಮದುವೆಗೆ ಆಹ್ವಾನಿಸಿದ್ದಾರೆ.
ಡಾಲಿ ಧನಂಜಯ್ ಅವರು ವಿವಾಹ ಆಗ್ತಿರೋದು ಧನ್ಯತಾ ಅವರನ್ನು. ಅವರು ವೃತ್ತಿಯಲ್ಲಿ ವೈದ್ಯೆ. ಫೆಬ್ರವರಿ 16ರಂದು ಧನಂಜಯ್ ಅವರು ಮೈಸೂರಿನಲ್ಲಿ ಮದುವೆ ಆಗುತ್ತಿದ್ದಾರೆ.