ನವದೆಹಲಿ:- ದೆಹಲಿ ವಿಧಾನಸಭಾ ಚುನಾವಣಾ ಫಲಿತಾಂಶ ಪ್ರಕಟವಾಗುತ್ತಿದ್ದು, ಬಹುತೇಕ ಬಿಜೆಪಿ ಗೆಲ್ಲುವ ಸಾಧ್ಯತೆ ಇದೆ. ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಗೆಲುವು ಬಹುತೇಕ ಖಚಿತವಾಗಿದ್ದು, ಇದರ ಬೆನ್ನಲ್ಲೇ ಪಕ್ಷದಿಂದ ಮುಖ್ಯಮಂತ್ರಿ ಯಾರಾಗಲಿದ್ದಾರೆ ಎಂಬ ಚರ್ಚೆಗಳು ಶುರುವಾಗಿವೆ
ಸಿಎಂ ಅಭ್ಯರ್ಥಿಗಳು ಯಾರೆಲ್ಲ?
ಪರ್ವೇಶ್ ವರ್ಮಾ: ದೆಹಲಿಯ ಮಾಜಿ ಸಿಎಂ ಸಾಹಿಬ್ ಸಿಂಗ್ ವರ್ಮಾ ಅವರ ಪುತ್ರ. ನವದೆಹಲಿ ಕ್ಷೇತ್ರದಿಂದ ಎಎಪಿ ರಾಷ್ಟ್ರೀಯ ಸಂಚಾಲಕ ಮತ್ತು ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ವಿರುದ್ಧ ಸ್ಪರ್ಧಿಸಿದ್ದಾರೆ.
ರಮೇಶ್ ಬಿಧುರಿ: ಬಿಜೆಪಿಯ ಸಿಎಂ ಫೇಸ್ ಎಂದು ರಮೇಶ್ ಬಿಧುರಿಯವರನ್ನು ಎಎಪಿ ಹೇಳಿತ್ತು. ಹಾಗೆಂದು ಚುನಾವಣಾ ಪ್ರಚಾರದ ಸಮಯದಲ್ಲಿ ಅವರನ್ನು ಚರ್ಚೆಗೂ ಆಹ್ವಾನಿಸಿತ್ತು. ಆದರೆ ಮಾತ್ರ ಪಕ್ಷದ ಸಿಎಂ ಫೇಸ್ ಅನ್ನು ನಿರ್ಧರಿಸಲಾಗಿಲ್ಲ ಎಂದಿತ್ತು. ದೆಹಲಿ ಸಿಎಂ ಅತಿಶಿ ವಿರುದ್ಧ ಬಿಧುರಿ ಕಲ್ಕಾಜಿ ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ.
ಕೈಲಾಶ್ ಗಹ್ಲೋಟ್: ಬಿಜ್ವಾಸನ್ನಿಂದ ಸ್ಪರ್ಧಿಸಿದ ಗಹ್ಲೋಟ್, ಬಿಜೆಪಿಯ ಮತ್ತೊಬ್ಬ ಸಂಭಾವ್ಯ ಸಿಎಂ ಅಭ್ಯರ್ಥಿ.
ಕಪಿಲ್ ಮಿಶ್ರಾ: ಕರವಾಲ್ ನಗರದಿಂದ ಸ್ಪರ್ಧಿಸಿರುವ ಮಿಶ್ರಾ, ಆರಂಭಿಕ ಟ್ರೆಂಡ್ಗಳ ಪ್ರಕಾರ ಮುನ್ನಡೆಯಲ್ಲಿದ್ದಾರೆ.
ವಿಜೇಂದರ್ ಗುಪ್ತಾ: ದೆಹಲಿಯಲ್ಲಿ ಪಕ್ಷ ಗೆಲುವು ಸಾಧಿಸಿದರೆ ಬಿಜೆಪಿಯ ಈ ಹಿರಿಯ ನಾಯಕ ಮುಖ್ಯಮಂತ್ರಿ ಹುದ್ದೆಗೆ ಪ್ರಬಲ ಸ್ಪರ್ಧಿ. ದೆಹಲಿ ಬಿಜೆಪಿಯ ಮಾಜಿ ಮುಖ್ಯಸ್ಥರಾಗಿರುವ ಅವರು, ಎಎಪಿ ಪ್ರಾಬಲ್ಯದ ಹೊರತಾಗಿಯೂ 2015 ಮತ್ತು 2020 ಎರಡರಲ್ಲೂ ರೋಹಿಣಿ ಕ್ಷೇತ್ರದಿಂದ ಗೆಲುವು ಸಾಧಿಸಿದ್ದಾರೆ. ಗುಪ್ತಾ ದೆಹಲಿ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿಯೂ ಸೇವೆ ಸಲ್ಲಿಸಿದ್ದಾರೆ.