ಬೆಂಗಳೂರು:- ಬಿಎಂಟಿಸಿ ಬಸ್ ಚಾಲಕ ನಿರ್ಲಕ್ಷ್ಯ ವಹಿಸಿದ್ದು, ಸ್ವಲ್ಪ ಯಾಮಾರಿದ್ರೂ ಹೋಗ್ತಿತ್ತು ಮೂವರ ಪ್ರಾಣಪಕ್ಷಿ ಹೋಗುತ್ತಿತ್ತು.
ಬೇಕು ಬೇಕು ಅಂತ ಬಿಎಂಟಿಸಿ ತರ್ಲೆ ಚಾಲಕ ಹಾರ್ನ್ ಮಾಡಿದ್ದಾನೆ. ಅವರು ತಿರುಗಿ ನೋಡಲಿಲ್ಲ ಎನ್ನುವ ಏಕೈಕ ಕಾರಣಕ್ಕೆ ಸ್ಕೂಟರ್ಗೆ ಡಿಕ್ಕಿ ಹೊಡೆದಿದ್ದಾನೆ.
ಅವರು ತಿರುಗಿ ನೋಡಲಿಲ್ಲ ಎನ್ನುವ ಏಕೈಕ ಕಾರಣಕ್ಕೆ ಸ್ಕೂಟರ್ಗೆ ಡಿಕ್ಕಿ ಹೊಡೆದಿದ್ದಾನೆ. ಚಾಲಕನ ನಿರ್ಲಕ್ಷ್ಯದಿಂದು ಸ್ವಲ್ಪ ಯಾಮಾರಿದರೂ ಇಂದು ಮೂವರು ಪ್ರಾಣ ಕಳೆದುಕೊಳ್ಳಬೇಕಾಗಿತ್ತು.
ಇಂದು ಮಧ್ಯಾಹ್ನ 2-20 ರ ಸುಮಾರಿಗೆ ಜಾಲಹಳ್ಳಿ ಟು ಕೆ.ಆರ್ ಮಾರ್ಕೆಟ್ ಗೆ ಹೋಗ್ತಿದ್ದ ಡಿಪೋ- 22 ಕ್ಕೆ ಬಿಎಂಟಿಸಿ ಎಲೆಕ್ಟ್ರಿಕ್ ಬಸ್ – KA-51 AK4215 ಸುಮ್ಮನಹಳ್ಳಿ ಬಳಿ ಸ್ಕೂಟರ್ನಲ್ಲಿ ಹೋಗುತ್ತಿದ್ದ ಮಹಿಳೆಗೆ ಡಿಕ್ಕಿ ಹೊಡೆದಿದೆ. ಮಹಿಳೆ ಕೆಳಗೆ ಬಿದ್ದ ಪರಿಣಾಮ ಕೈಗೆ ಗಾಯವಾಗಿದೆ. ಸ್ಕೂಟರ್ ಹಿಂಭಾಗದಲ್ಲಿ ಇಬ್ಬರು ಮಕ್ಕಳು ಇದ್ರಂತೆ. ಇದರಿಂದ ಆಕ್ರೋಶಗೊಂಡ ಮಹಿಳೆ ಬಸ್ ಹತ್ತಿ ಡ್ರೈವರ್ ಅಂಬರೀಶ್ ಮೇಲೆ ಹಲ್ಲೆ ಮಾಡಿದ್ದಾರೆ.
ನನ್ನ ಮತ್ತು ನನ್ನ ಮಕ್ಕಳನ್ನು ಕೊಲೆ ಮಾಡಲು ಹೀಗೆ ಮಾಡಿದ್ದಾನೆ. ಚೂರು ಯಾಮಾರಿದರೂ ಇಬ್ಬರು ಮಕ್ಕಳು ಪ್ರಾಣ ಕಳೆದುಕೊಳ್ಳುತ್ತಿದ್ದರು ಎಂದು ಕೂಗಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಂತರ ತನ್ನ ಸಹೋದರನನ್ನು ಕರೆಸಿ ಡ್ರೈವರ್ಗೆ ಥಳಿಸಿದ್ದಾರೆ. ಆ ವೇಳೆ ಡ್ರೈವರ್ ಕುಸಿದು ಬಿದಿದ್ದು, ನಂತರ ಡ್ರೈವರ್ನನ್ನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ.