ಹೃದಯಾಘಾತ ಮತ್ತು ಮಿದುಳಿನ ರಕ್ತಸ್ರಾವದ ಪ್ರಕರಣಗಳು ಚಳಿಗಾಲದಲ್ಲಿ ಹಲವು ಪಟ್ಟು ಹೆಚ್ಚಾಗುತ್ತವೆ.ಚಳಿಗಾಲದಲ್ಲಿ ರಕ್ತನಾಳಗಳು ಕುಗ್ಗಿ ರಕ್ತ ಪೂರೈಕೆ ಕುಂಠಿತವಾಗುತ್ತದೆ ಎನ್ನುತ್ತಾರೆ.
ಚಳಿಗಾಲದಲ್ಲಿ ಅತಿಯಾದ ಚಳಿಯಿಂದಾಗಿ ರಕ್ತ ಸಂಚಾರದ ಮೇಲೆ ಪರಿಣಾಮ ಬೀರುವ ಕಾರಣದಿಂದಾಗಿ ಹೃದಯಾಘಾತದ ಅಪಾಯವು ಹೆಚ್ಚು. ಇಂತಹ ಸಂದರ್ಭದಲ್ಲಿ ರಾತ್ರಿ ವೇಳೆ ದೇಹದಲ್ಲಿ ಕೆಲವು ಲಕ್ಷಣಗಳು ಕಾಣಿಸಿಕೊಳ್ಳಬಹುದು. ಇದು ಹೃದಯಾಘಾತದ ಲಕ್ಷಣಗಳಾಗಿರಬಹುದು ಎಂದು ಅಧ್ಯಯನಗಳು ಹೇಳಿವೆ.
ಚಳಿಗಾಲದ ಸಂದರ್ಭದಲ್ಲಿ ಹೃದಯಾಘಾತವು ರಾತ್ರಿ ವೇಳೆ ಆಗುವುದು ಎಂದು ಅಧ್ಯಯನಗಳು ತಿಳಿಸಿವೆ. ಅಧಿಕ ರಕ್ತದೊತ್ತಡ, ಮಧುಮೇಹ ಮತ್ತು ಅಧಿಕ ಕೊಲೆಸ್ಟ್ರಾಲ್ ಇರುವವರಿಗೆ ಅಪಾಯವು ಹೆಚ್ಚಾಗಿರುವುದು. ಹೀಗಾಗಿ ಚಳಿಗಾಲದಲ್ಲಿ ಕಂಡುಬರುವ ಹೃದಯಾಘಾತದ ಲಕ್ಷಣಗಳನ್ನು ತಿಳಿದುಕೊಂಡು ಅಪಾಯವನ್ನು ತಡೆಯಬಹುದು. ಅದು ಹೇಗೆ ಎಂದು ತಿಳಿಯಿರಿ. ಅದರಲ್ಲೂ ರಾತ್ರಿ ಊಟದ ಬಳಿಕ, ಈ ರೀತಿಯ ಲಕ್ಷಣಗಳು ಕಂಡುಬರುತ್ತಲಿದ್ದರೆ, ಆಗ ಇದು ಹೃದಯಾಘಾತದ ಲಕ್ಷಣವೆಂದು ಹೇಳಬಹುದು
ಎದೆಯಲ್ಲಿ ಅಹಿತಕರ ಅನಿಸುವುದು ಹೃದಯಾಘಾತದ ಪ್ರಮುಖ ಲಕ್ಷಣವಾಗಿದೆ. ಇದು ಎದೆಯ ಎಡಭಾಗದಲ್ಲಿ ಒತ್ತಡ, ತುಂಬಿದಂತಹ ಅನುಭವ ಉಂಟು ಮಾಡಬಹುದು. ಇಂತಹ ಅಹಿತಕರವಿದ್ದರೆ ಆಗ ವೈದ್ಯರ ನೆರವು ತಕ್ಷಣ ಪಡೆಯಿರಿ.
ಎದೆಯಲ್ಲಿ ಯಾವುದೇ ಅಹಿತಕರವಿಲ್ಲದೆ, ಉಸಿರಾಟದ ತೊಂದರೆ ಆಗುತ್ತಲಿದ್ದರೆ ಆಗ ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಉಸಿರಾಡಲು ಸಾಧ್ಯವಾಗದೆ ಮತ್ತು ಎದೆಯು ಬಿಗಿಯಾದಂತೆ ಅನಿಸಬಹುದು. ರಾತ್ರಿ ಹತ್ತು ಗಂಟೆ ಬಳಿಕ ಇದು ಕಾಣಿಸಿಕೊಂಡೆ ಆಗ ಇದು ಹೃದಯಾಘಾತದ ಪ್ರಮುಖ ಲಕ್ಷಣವೆಂದು ತಿಳಿಯಿರಿ.
ಹಠಾತ್ ಆಗಿ ಅತಿಯಾಗಿ ಬೆವರುವುದು ಕೂಡ ಹೃದಯಾಘಾತದ ಲಕ್ಷಣಗಳಲ್ಲಿ ಒಂದಾಗಿದೆ. ಚಳಿಗಾಲದಲ್ಲಿ ಕೂಡ ಅತಿಯಾಗಿ ಬೆವರುತ್ತಲಿದ್ದರೆ, ಆಗ ಇದು ಹೃದಯಾಘಾತದ ಲಕ್ಷಣವೆಂದು ತಿಳಿದು ವೈದ್ಯರನ್ನು ಭೇಟಿ ಮಾಡಬೇಕು.
ವಾಕರಿಕೆ ಅಥವಾ ತಲೆನೋವು ಕೂಡ ಹೃದಯಾಘಾತದ ಲಕ್ಷಣಗಳಲ್ಲಿ ಸೇರಿಕೊಂಡಿದೆ. ಸಂಜೆ ವೇಳೆ ವಾಕರಿಕೆ ಅಥವಾ ತಲೆನೋವು ಕಾಣಿಸಿ ಕೊಂಡರೆ ಆಗ ಇದು ಹೃದಯಾಘಾತದ ಸಮಸ್ಯೆ ಎಂದು ತಿಳಿಯಿರಿ.
ಎದೆಗೆ ಮಾತ್ರ ಹೃದಯಾಘಾತದ ನೋವು ಸೀಮಿತವಾಗಿಲ್ಲ. ಇದು ಕೈ, ಬೆನ್ನು, ಕುತ್ತಿಗೆ, ಹೊಟ್ಟೆ ಅಥವಾ ದವಡೆಗೆ ಕೂಡ ಹಬ್ಬಬಹುದು. ಈ ಭಾಗದಲ್ಲಿ ಅಹಿತಕರ ಎಂದು ಅನಿಸುತ್ತಿದ್ದರೆ ಆಗ ನೀವು ವೈದ್ಯರನ್ನು ಬೇಗನೆ ಸಂಪರ್ಕಿಸುವುದು ಒಳ್ಳೆಯದು.
ಯಾವುದೇ ಕಾರಣವಿಲ್ಲದೆ ಅತಿಯಾಗಿ ಬಳಲಿಕೆ ಅಥವಾ ನಿಶ್ಯಕ್ತಿ ಕಂಡು ಬರುತ್ತಲಿದ್ದರೆ ಆಗ ಇದು ಕೂಡ ಹೃದಯದ ಸಮಸ್ಯೆಯ ಕಾರಣವೆಂದು ತಿಳಿಯಿರಿ. ಇಂತಹ ಲಕ್ಷಣಗಳನ್ನು ತುಂಬಾ ಎಚ್ಚರಿಕೆಯಿಂದ ಗಮನಿಸ ಬೇಕು.
ಅತಿಯಾದ ಆತಂಕ ಅಥವಾ ಅಂತಹ ಭಾವನೆಯು ಹೃದಯಾಘಾತದ ಲಕ್ಷಣವಾಗಿರಬಹುದು. ತುಂಬಾ ಆತಂಕವಾಗುತ್ತಲಿದ್ದರೆ ಆಗ ನೀವು ಇದನ್ನು ಗಂಭೀರವಾಗಿ ಪರಿಗಣಿಸಿ, ವೈದ್ಯರ ಸಲಹೆ ಪಡೆಯಿರಿ.