ಗದಗ: ಗೃಹಲಕ್ಷ್ಮೀ ಹಣದಿಂದ ಕೆಲ ಮಹಿಳೆಯರಯ ಟಿವಿ, ಫ್ರಿಜ್ ತೆಗೆದುಕೊಂಡಿದ್ದು ಸುದ್ದಿಯಾಗಿದ್ದರು. ಇತ್ತೀಚೆಗೆ ಉತ್ತರ ಕರ್ನಾಟಕದ ಮಹಿಳೆಯೊಬ್ಬಳು ಇಡೀ ಊರಿಗೆ ಹೋಳಿಗೆ ಊಟವನ್ನೂ ಹಾಕಿಸಿದ್ದರು. ಕೆಲ ದಿನಗಳ ಹಿಂದೆ ಮಗನಿಗೆ ಬೈಕ್ಅನ್ನು ಗೃಹಲಕ್ಷ್ಮೀ ಹಣದಲ್ಲಿ ಖರೀದಿ ಮಾಡಿದ್ದರು.
ಇದೀಗ ಗದಗ ಜಿಲ್ಲೆ ಗಜೇಂದ್ರಗಡ ಪಟ್ಟಣದ ಮಾಲಧಾರ ಓಣಿಯ ಅತ್ತೆ ಹಾಗೂ ಸೊಸೆ ಕೊಳವೆ ಬಾವಿ ಕೊರೆಸಿದ್ದಾರೆ. ಬೋರ್ವೆಲ್ನಲ್ಲಿ ಅವರಿಗೆ ನೀರು ಕೂಡ ದೊರೆತಿದೆ. ಇದೀಗ ಈ ಬಗ್ಗೆ ಅತ್ತೆ ಮಾಬುಬೀ ಹಾಗೂ ಸೊಸೆ ರೋಷನ್ ಬೇಗಂ ಹರ್ಷ ವ್ಯಕ್ತಪಡಿಸಿದ್ದಾರೆ.
ಶನಿವಾರ ಈ ಕೆಲಸಗಳಲ್ಲಿ 1 ಕೆಲಸ ಮಾಡಿದರೂ ನಿಮ್ಮ ಖಜಾನೆ ತುಂಬುತ್ತದೆ..!
ಅತ್ತೆ ಹಾಗೂ ಸೊಸೆ ಸೇರಿ ಗೃಹಲಕ್ಷ್ಮಿ ಯೋಜನೆಯಿಂದ ದೊರೆತ 44 ಸಾವಿರ ರೂ. ಕೊಳವೆ ಬಾವಿ ಕೊರೆಸಲು ನೀಡಿದ್ದಾರೆ. ಒಟ್ಟು 60 ಸಾವಿರ ರೂಪಾಯಿ ಖರ್ಚು ಆಗಿದೆ. ಅದರ ಗೃಹಲಕ್ಷ್ಮಿ ಯೋಜನೆಯ 44 ಸಾವಿರ ರೂ. ಬಳಕೆ ಮಾಡಿದ್ದಾರೆ. ಇನ್ನುಳಿದ್ದ ಹಣ ಮಗ ನೀಡಿದ್ದಾನೆ ಎಂದು ಮಾಬುಬೀ ತಿಳಿಸಿದ್ದಾರೆ. ಸಿದ್ದರಾಮಯ್ಯ ಅವರು ನೀಡಿದ ಗೃಹಲಕ್ಷ್ಮಿ ಯೋಜನೆಯಿಂದ ತುಂಬಾ ಅನುಕೂಲವಾಗಿದೆ. ಸಿಎಂ ಸಿದ್ದರಾಮಯ್ಯ ಅವರಿಗೆ ನಾವು ಕೃತಜ್ಞತೆ ಸಲ್ಲಿಸುತ್ತೇವೆ ಎಂದು ಮಾಬುಬೀ ಹೇಳಿದ್ದಾರೆ.