ತೆಲಂಗಾಣ: ಸಂಧ್ಯಾ ಥಿಯೇಟರ್ ಕಾಲ್ತುಳಿತ ಪ್ರಕರಣದಲ್ಲಿ ಜೈಲು ಸೇರಿದ್ದ ಅಲ್ಲು ಅರ್ಜುನ್, ಇಂದು ಬೆಳಗ್ಗೆ ಜೈಲಿನಿಂದ ರಿಲೀಸ್ ಆಗಿದ್ದಾರೆ. ಇನ್ನೂ ಇದಕ್ಕೆ ಸಂಬಂಧ ಪಟ್ಟಂತೆ ನಟ ಅಲ್ಲು ಅರ್ಜುನ್ ಬಂಧನಕ್ಕೆ ಸಂಬಂಧಿಸಿದಂತೆ ತೆಲಂಗಾಣದ ಮುಖ್ಯಮಂತ್ರಿ ರೇವಂತ್ ರೆಡ್ಡಿ ಲೇವಡಿ ಮಾಡಿದ್ದಾರೆ. ಅದು ಸಿನಿಮಾ, ಸಿನಿಮಾ ಎಂದರೆ ವ್ಯಾಪಾರ, ದುಡ್ಡು ಹಾಕುತ್ತಾರೆ, ಹಣ ಸಂಪಾದಿಸುತ್ತಾರೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.
ಖಾಸಗಿ ಮಾಧ್ಯಮದ ಜೊತೆಗಿನ ಸಂವಾದದ ವೇಳೆ ಮಾತನಾಡುತ್ತಿದ್ದ ರೇವಂತ್ ರೆಡ್ಡಿ, ” ಸಿನಿಮಾ ಎನ್ನುವುದು ವ್ಯಾಪಾರ, ಸಿನಿಮಾ ತೆಗೆಯುವುದೇ ಹಣ ಸಂಪಾದಿಸಲು. ಅದೊಂದು ಪಕ್ಕಾ ಬ್ಯೂಸಿನೆಸ್, ಇಲ್ಲಿ ಲಾಭ ನಷ್ಟ ಮುಖ್ಯವೇ ಹೊರತು ಏನೂ ವೈಯಕ್ತಿಕವಿಲ್ಲ ಎಂದು ಅವರು ಹೇಳಿದ್ದಾರೆ.
ಶನಿವಾರ ಈ ಕೆಲಸಗಳಲ್ಲಿ 1 ಕೆಲಸ ಮಾಡಿದರೂ ನಿಮ್ಮ ಖಜಾನೆ ತುಂಬುತ್ತದೆ..!
ಅಲ್ಲು ಅರ್ಜುನ್ ಅವರು ಶೂಟಿಂಗ್ ವೇಳೆ ತಮ್ಮ ಸಿನಿಮಾವನ್ನು ನೋಡಿರಲಿಕ್ಕಿಲ್ಲ, ಅದಾದ ಮೇಲೆ ಸ್ಪೆಷಲ್ ಶೋ ಹಾಕಿ ನೋಡಬಹುದಿತ್ತು. ಇಲ್ಲವೇ, ಹೋಂ ಥಿಯೇಟರ ನಲ್ಲೇ ನೋಡಬಹುದಿತ್ತು. ಅದನ್ನು ಮಾಡದೇ, ಫ್ಯಾನ್ಸ್ ಮಧ್ಯೆ ಸಿನಿಮಾ ನೋಡಲು ಬಂದರು ಎಂದು ರೇವಂತ್ ರೆಡ್ಡಿ ಅಭಿಪ್ರಾಯ ಪಟ್ಟಿದ್ದಾರೆ.
ಪುಷ್ಪ 2 ಎನ್ನುವ ಸಿನಿಮಾ ರಿಲೀಸ್ ಆಗಿದೆ, ಇದರಲ್ಲಿ ನೂರಾರು ಕೋಟಿ ಬಂಡವಾಳ ಅಡಗಿದೆ. ಅದು ಅವರ ಬ್ಯೂಸಿನೆಸ್, ಇದರಲ್ಲಿ ನಮ್ಮದೇನು ಇದೆ, ತೆಲಂಗಾಣ ಸರ್ಕಾರದ ಪಾತ್ರವೇನಿದೆ? ಇಂಡಿಯಾ ಪಾಕಿಸ್ತಾನ ಯುದ್ದ ನಡೆದು, ಪಾಕಿಸ್ತಾನದ ಜಾಗವನ್ನು ಭಾರತಕ್ಕೆ ತಂದದ್ದೇನೂ ಅಲ್ಲವಲ್ಲಾ” ಎಂದು ರೇವಂತ್ ರೆಡ್ಡಿ ಹೇಳಿದ್ದಾರೆ.