ಬೆಂಗಳೂರು: ಸ್ನೇಹಿತನ ಹುಟ್ಟಹಬ್ಬ ಅಂದ್ರೆ ಪ್ರತಿಯೋಬ್ಬರಿಗೂ ಸ್ವಲ್ಪ ಖುಷಿ ಜಾಸ್ತಿನೇ ಪಾರ್ಟಿ ಮಾಡೋದು ಕಾಮನ್ ಆದ್ರಲ್ಲೂ ಕ್ಲೋಸ್ ಪ್ರೆಂಡ್ ಆದ್ರೆ ಒಂದು ಕೈ ಸೆಲೆಬ್ರೇಷನ್ ಜೋರಾಗಿಯೇ ಇರುತ್ತೆ, ಇಲ್ಲೋಬ್ಬ ಅಸಾಮಿಯನ್ನ ಮನಗೆ ಕರೆಸಿಕೊಂಡು ಪಾರ್ಟಿ ಮಾಡಿದ್ದಾರೆ ಆದ್ರೆ ಮನೆಯಲ್ಲಿ ಆತ ಮಾಡಿದ್ದರಿಂದ ಪೋಲಿಸರ ಅತಿಥಿಯಾಗಿದ್ದಾನೆ. ಉಂಡು ಹೋದ ಕೊಂಡು ಹೋದ ಎಂಬ ಮಾತಿನಂತೆ ಪಾರ್ಟಿ ಮಾಡಲು ಬಂದ ಗೆಳೆಯನ ಮನೆಯಲ್ಲಿ ಚಿನ್ನಾಭರಣ ಕಳ್ಳತನ ಮಾಡಿದ್ದ ಸ್ನೇಹಿತನನ್ನ ಸುಬ್ರಮಣ್ಯಪುರ ಪೊಲೀಸರು ಬಂಧಿಸಿದ್ದಾರೆ.
ಈ ಪೋಟೊದಲ್ಲಿ ಭರತ್ , ಸ್ನೇಹಿತ ಮಣಿ ಇಬ್ಬರು ಆತ್ಮೀಯ ಸ್ನೇಹಿತರು .ಏರೋನಾಟಿಕ್ಸ್ ಇಂಜಿನಿಯರ್ ವ್ಯಾಸಂಗ ಮಾಡಿದ್ದ ಭರತ್, ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡಿ ಕೈ ತುಂಬಾ ಸಂಬಳ ಪಡೆಯುತ್ತಿದ್ದ. ಉತ್ತರಹಳ್ಳಿಯ ಮೂಕಾಂಬಿಕ ನಗರದ ಅಪಾರ್ಟ್ ಮೆಂಟ್ ನಲ್ಲಿ ವಾಸವಾಗಿದ್ದ ಡಿಸೆಂಬರ್ 4 ರಂದು ಭರತ್ ಬರ್ತಡೇ ಇದ್ದು ಮಣಿ ಮನೆಯಲ್ಲಿ ಯೇ ಸೆಲೆಬ್ರೇಷನ್ ಮಾಡೋದಕ್ಕೆ ಪ್ಲಾನ್ ಮಾಡಿದ್ದಾರೆ.
ಶನಿವಾರ ಈ ಕೆಲಸಗಳಲ್ಲಿ 1 ಕೆಲಸ ಮಾಡಿದರೂ ನಿಮ್ಮ ಖಜಾನೆ ತುಂಬುತ್ತದೆ..!
ಭರತ್ ರಾತ್ರಿ ಮಣಿಯ ಮನೆಯಲ್ಲಿ ವಾಸ್ತವ್ಯ ಹೂಡಿದ್ದ. ಮಣಿಗೆ ಮದುವೆ ನಿಗದಿಯಾಗಿದ್ದು ಇದಕ್ಕಾಗಿ ಮನೆಯವರು 453 ಗ್ರಾಂ ಖರೀದಿಸಿ ಇಟ್ಟಿದ್ದರು. ಇದನ್ನ ಅರಿತ ಆರೋಪಿಯು ಮಧ್ಯರಾತ್ರಿ ಎಲ್ಲರೂ ಮಲಗಿರುವಾಗ ಬೀರುವಿನಲ್ಲಿದ್ದ ಚಿನ್ನ ಎಗರಿಸಿದ್ದಾನೆ . ಚಿನ್ನಾಭರಣ ಕದ್ದು ಸ್ನೇಹಿತನ ಜೊತೆಯಲ್ಲೇ ಪುಷ್ಟ ಸಿನಿಮಾ ನೋಡಿದ..! ನಂತರ ವಾಪಸ್ ಮನೆಗೆ ಬಂದು ರಾತ್ರಿ ಅಲ್ಲೇ ಉಳಿದುಕೊಂಡಿದ್ದ, ಮಾರನೇ ದಿನ ಮಣಿ ಮನೆಯವರು ಬಂದು ನೋಡಿದಾಗ ಚಿನ್ನಾಭರಣ ಕಳ್ಳತನವಾಗಿರುವುದು ಬೆಳಕಿಗೆ ಬಂದಿತ್ತು.
ಮನೆಯಲ್ಲಿ ಚಿನ್ನಾಭರಣ ಕಳ್ಳತನ ಬಗ್ಗೆ ಮಣಿ , ಭರತ್ ಗೆ ತಿಳಿಸಿದ್ದ. ಖುದ್ದು ಆರೋಪಿಯೇ ಪೊಲೀಸ್ ಠಾಣೆಗೆ ತೆರಳಿ ಮಣಿಯಿಂದ ದೂರು ಕೊಡಿಸಿದ್ದ. ಪ್ರಕರಣ ದಾಖಲಿಸಿಕೊಂಡ ಇನ್ ಸ್ಪೆಕ್ಟರ್ ಎಂ.ಎಸ್.ರಾಜು ಅವರ ತಂಡವು ಪಾರ್ಟಿ ಮಾಡಲು ಮನೆಗೆ ಮೂವರು ಸ್ನೇಹಿತರನ್ನ ತೀವ್ರ ವಿಚಾರಣೆಗೊಳಪಡಿಸಿದಾಗ ಭರತ್ ದುರಾಸೆಗೆ ಒಳಪಟ್ಟು ಕಳ್ಳತನ ಮಾಡಿರುವುದನ್ನ ಒಪ್ಪಿಕೊಂಡಿದ್ದಾನೆ