ಕಾರಂಜಾ ಯೋಜನೆಯಲ್ಲಿ ಜಮೀನು ಕಳೆದುಕೊಂಡವರಿಗೆ ವೈಜ್ಞಾನಿಕ ಪರಿಹಾರ ಕೊಡಬೇಕು ಎಂದು ಆಗ್ರಹಿಸಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾದ ರೈತರನ್ನು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ತಡ ರಾತ್ರಿ ಭೇಟಿ ಮಾಡಿದರು .ಬೆಳಗಾವಿಯಿಂದ ಹೊರಟು ರಾತ್ರಿ ಬೀದರ ನಗರದ ಬ್ರಿಮ್ಸ್ಗೆ ಬಂದ ಸಚಿವ ಖಂಡ್ರೆ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಾರಂಜಾ ಮುಳುಗಡೆ ಸಂತ್ರಸ್ತರ ಹೋರಾಟ ಸಮಿತಿ ಅಧ್ಯಕ್ಷ ಚಂದ್ರಶೇಖರ ಪಾಟೀಲ,
ರೈತರಾದ ರಾಜಪ್ಪ ಕೋಸಂ ಹಾಗೂ ರಾಜಶೇಖರ ಅಲಗೋಲ ಅವರನ್ನು ಕಂಡು ಆರೋಗ್ಯ ವಿಚಾರಿಸಿ ಸಮಸ್ಯೆ ಬಗೆಹರಿಸುವ ಆಶ್ವಾಸನೆ ನೀಡಿದರು.ಡಿಸೆಂಬರ್ 16ರಂದು ಮಧ್ಯಾಹ್ನ 3ಗಂಟೆಗೆ ಬೆಳಗಾವಿಯಲ್ಲಿ ಮುಖ್ಯಮಂತ್ರಿ ಸಿದ್ದ ರಾಮಯ್ಯನವರೊಂದಿಗೆ ಸಭೆ ನಿಗದಿಪಡಿಸಿದ್ದೇನೆ.
ಅಬ್ಬಬ್ಬಾ.. ಲವಂಗ ಕೃಷಿ ಮಾಡಿ ಗಳಿಸಬಹುದು 1.80 ಲಕ್ಷ ಲಾಭ..! ಈ ಗಿಡ ಹಿತ್ತಲಿನಲ್ಲಿ ಬೆಳೆದ್ರೂ ಸರಿ
ಉಪಮುಖ್ಯಮಂತ್ರಿ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ ಸೇರಿದಂತೆ ಉನ್ನತ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಳ್ಳುವರು. ಜಿಲ್ಲೆಯ ಸಚಿವರು, ಶಾಸಕರು ಕೂಡ ಭಾಗವಹಿಸುವರು. ಐದು ಜನ ಕಾರಂಜಾ ಹೋರಾಟದ ರೈತ ಮುಖಂಡರು ಸಭೆಗೆ ಬರಬೇಕು. ನಿಮ್ಮ ಬೇಡಿಕೆಗಳ ಸಂಬಂಧ ಸಭೆಯಲ್ಲಿ ಚರ್ಚಿಸಲಾಗುವುದು. ನಾನು ಕೂಡ ನಿಮ್ಮ ಪರ ಸಭೆಯಲ್ಲಿ ಮಾತನಾಡುತ್ತೇನೆ ಖಂಡ್ರೆ ರೈತರಿಗೆ ಭರವಸೆ ನೀಡಿದರು…