ಚೈತ್ರಾ ಕುಂದಾಪುರ ಒಂದಲ್ಲ ಒಂದು ಕಾರಣಕ್ಕೆ ಬಿಗ್ ಬಾಸ್ ಮನೆಯಲ್ಲಿ ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳುತ್ತಲೆ ಇದ್ದಾರೆ. ಮೂರನೇ ಬಾರಿಗೆ ಬಿಗ್ ಬಾಸ್ ಮನೆ ಸೇರಿರುವ ಚೈತ್ರಾ ಇದೀಗ ಕಳಪೆ ಆಟವಾಡಿ ಬಿಗ್ ಬಾಸ್ ಮನೆಯಲ್ಲಿ ಜೈಲು ಸೇರಿದ್ದಾರೆ. ಈ ಹಿಂದೆಲ್ಲಾ ಕಳಪೆ ಪಟ್ಟ ಸಿಕ್ಕಾಗ ಕೂಗಾಡಿ ಅಸಮಾಧಾನ ಹೊರ ಹಾಕಿದ್ದ ಚೈತ್ರಾ ಕುಂದಾಪುರ ಇದೀಗ ಅದನ್ನೇ ಮುಂದುವರೆಸಿದ್ದಾರೆ.
ಈ ವಾರ ಯಾರು ಕಳಪೆ ಯಾರು ಉತ್ತಮ ಎಂಬುದನ್ನು ನಿರ್ಧರಿಸುವಾಗ ಮಾತಿನ ಚಕಮಕಿ ನಡೆದಿದೆ. ಈ ವಾರ ತಾವು ಕಳಪೆ ಆಗಬಾರದು ಎಂದು ಚೈತ್ರಾ ಅವರು ತುಂಬ ಪ್ರಯತ್ನಿಸಿದ್ದರು. ಆದರೆ ಅವರಿಗೆ ಈ ವಾರ ಕೂಡ ಕಳಪೆ ಪಟ್ಟದಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಿಲ್ಲ. ಹನುಮಂತ, ತ್ರಿವಿಕ್ರಮ್, ಮಂಜು ಮತ್ತು ಭವ್ಯಾ ಅವರು ಚೈತ್ರಾಗೆ ಕಳಪೆ ನೀಡಿದ್ದಾರೆ. ಆದ್ದರಿಂದ ಚೈತ್ರಾ ಜೈಲು ಸೇರುವುದು ಅನಿವಾರ್ಯ ಆಯಿತು.
ಚೈತ್ರಾ ರೀತಿಯೇ ತ್ರಿವಿಕ್ರಮ್ ಅವರಿಗೆ ನಾಲ್ಕು ಜನರಿಂದ ಕಳಪೆ ಎಂಬ ಅಭಿಪ್ರಾಯ ಬಂತು. ಹಾಗಾಗಿ ಚೈತ್ರಾ ಜೊತೆ ತ್ರಿವಿಕ್ರಮ್ ಕೂಡ ಜೈಲು ಸೇರಿದರು. ಇಬ್ಬರಿಗೂ ಪರಸ್ಪರ ಕಂಡರೆ ಆಗುವುದಿಲ್ಲ. ಆದರೆ ಜೈಲಿನ ಕೋಣೆಯನ್ನು ಹಂಚಿಕೊಳ್ಳುವ ಅನಿವಾರ್ಯ ಸಂದರ್ಭ ಎದುರಾಯಿತು. ಚೈತ್ರಾ ಮತ್ತು ತ್ರಿವಿಕ್ರಮ್ ಜೈಲಿಗೆ ಹೋದಾಗ ಇನ್ನುಳಿದ ಸದಸ್ಯರು ಬಂದು ಅಲ್ಲಿ ಮಾತನಾಡುತ್ತಿದ್ದರು. ಅದರಿಂದ ಚೈತ್ರಾ
ಬಿಗ್ ಬಾಸ್ ಮನೆಯ ನಿಯಮದ ಪ್ರಕಾರ ಲೈಟ್ ಆಫ್ ಆಗುವುದಕ್ಕೂ ಮುನ್ನ ಯಾರೂ ಕೂಡ ಮಲಗುವಂತಿಲ್ಲ. ಆದರೆ ಚೈತ್ರಾ ಅವರು ಜೈಲಿನಲ್ಲಿ ಮಲಗಿದ್ದಾರೆ. ಅದನ್ನು ಕ್ಯಾಪ್ಟನ್ ಸುರೇಶ್ ಅವರು ಪ್ರಶ್ನೆ ಮಾಡಿದ್ದಕ್ಕೆ, ‘ನಾನು ಬಿಗ್ ಬಾಸ್ ಮನೆಯ ಎಲ್ಲ ನಿಯಮ ಮುರಿಯುತ್ತೇನೆ’ ಎಂದು ಚೈತ್ರಾ ಉದ್ಧಟತನ ತೋರಿದ್ದಾರೆ. ಅಲ್ಲದೇ, ಶಿಕ್ಷೆ ಮುಗಿಯುವುದಕ್ಕೂ ಮುನ್ನ ಅವರು ಜೈಲಿನಿಂದ ಹೊರಗೆ ಬರಲು ಪ್ರಯತ್ನಿಸಿದ್ದಾರೆ ಎಂಬ ರೀತಿಯಲ್ಲಿ ಡಿ.14ರ ಸಂಚಿಕೆಯ ಪ್ರೋಮೋ ಕೂಡ ತೋರಿಸಲಾಗಿದೆ.