ಪಾಕ್: ನಾವು ಈಗ ಚಾಂಪಿಯನ್ಸ್ ಟ್ರೋಫಿಯನ್ನು ಬಹಿಷ್ಕರಿಸಬೇಕು ಎಂದು ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ ಮಾಜಿ ಕೋಚ್ ರಶೀದ್ ಲತೀಫ್ ಹೇಳಿದ್ದಾರೆ. ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಲತೀಫ್, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಮುಂದಿನ ಹೆಜ್ಜೆ ಇಡುವ ಮೊದಲು ಪಾಕಿಸ್ತಾನ ಚಾಂಪಿಯನ್ಸ್ ಟ್ರೋಫಿಯನ್ನ ಬಾಯ್ಕಾಟ್ ಮಾಡಬೇಕು. ಇನ್ಮುಂದೆ ಚಾಂಪಿಯನ್ ಟ್ರೋಫಿ ನಡೆಯಬಾರದು ಎಂದು ಹೇಳಿದ್ದಾರೆ.
ಚಾಂಪಿಯನ್ಸ್ ಟ್ರೋಫಿ ಪೂರ್ಣ ಪಂದ್ಯಗಳು ಪಾಕಿಸ್ತಾನದಲ್ಲಿ (Pakistan) ನಡೆಯಬೇಕಿತ್ತು. ಆದ್ರೆ ಭದ್ರತಾ ಕಾಳಜಿಯನ್ನು ಉಲ್ಲೇಖಿಸಿ, ಭಾರತ ತನ್ನ ಪಂದ್ಯಗಳನ್ನಾಡಲು ನಿರಾಕರಿಸಿದೆ. ಐಸಿಸಿ ಹೈಬ್ರಿಡ್ ಮಾದರಿಗೆ ಒಪ್ಪಿಗೆ ಸೂಚಿಸಿದ್ದರೂ ಬಿಸಿಸಿಐ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ನಮ್ಮನ್ನು ಯಾವಾಗಲೂ ಬಲಿಪಶುಗಳಾಗಿ ಮಾಡುತ್ತಿದ್ದಾರೆ ಎಂದು ಅಸಮಾಧಾನ ಹೊರಹಾಕಿದ್ದಾರೆ.
Friday Remedy: ಶುಕ್ರವಾರ ಅಪ್ಪಿತಪ್ಪಿಯೂ ಈ ಕೆಲಸಗಳನ್ನು ಮಾಡಬೇಡಿ.! ಬಡತನ ಕಾಡುತ್ತೆ
ಪಾಕಿಸ್ತಾನ ಕ್ರಿಕೆಟ್ ಬೋರ್ಡ್ (PCB), ಅಫ್ಘಾನಿಸ್ತಾನ ಕ್ರಿಕೆಟ್ ಬೋರ್ಡ್ (ACB) ಆಗಿರಲಿ ಅಥವಾ ಐಸಿಸಿ ಆಗಿರಲಿ, ಬಿಸಿಸಿಐ ಎದುರು ಫೈಟ್ ಮಾಡೋಕೆ ಸಾಧ್ಯವಿಲ್ಲ. ಭಾರತ ಬಹಿಷ್ಕರಿಸಿದ್ರೆ, ನಾವು ಎಲ್ಲಿಗೆ ಹೋಗಿ ನಿಲ್ಲಬೇಕಾಗುತ್ತೆ ಅನ್ನೋ ಭಯ ಇದೆ. ಅದಕ್ಕಾಗಿ ಪಾಕಿಸ್ತಾನವನ್ನು ಬಲಿಪಶುಗಳಾಗಿ ಮಾಡ್ತಾರೆ. ಆದ್ದರಿಂದ ಬಿಸಿಸಿಐ ಮುಂದಿನ ನಡೆದ ತೆಗೆದುಕೊಳ್ಳುವ ಮೊದಲು ಪಾಕಿಸ್ತಾನ ಟೂರ್ನಿಯನ್ನ ಬಹಿಷ್ಕರಿಸಬೇಕು ಎಂದು ಕರೆ ಕೊಟ್ಟಿದ್ದಾರೆ.