ಗಂಡ ಮತ್ತು ಹೆಂಡತಿಯ ನಡುವಿನ ಸಂಬಂಧವು ಅತ್ಯಂತ ವಿಶೇಷ ಮತ್ತು ಮಹತ್ವದ್ದಾಗಿದೆ. ಚಾಣಕ್ಯ ನೀತಿಯಲ್ಲಿ ಮದುವೆಯಾಗುವಾಗ ಯಾವ ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು? ವೈವಾಹಿಕ ಸಂಬಂಧವನ್ನು ಪ್ರವೇಶಿಸುವ ಮೊದಲು ಪುರುಷ ಮತ್ತು ಮಹಿಳೆ ಯಾವ ಗುಣಗಳನ್ನು ಹೊಂದಿರಬೇಕು ಎಂಬುದನ್ನು ವಿವರವಾಗಿ ಉಲ್ಲೇಖಿಸಲಾಗಿದೆ. ಇದರಲ್ಲಿ ಪ್ರಮುಖ ಅಂಶವೆಂದರೆ ಇಬ್ಬರ ನಡುವಿನ ವಯಸ್ಸಿನ ಅಂತರ.
ಮದುವೆ ಒಂದು ಆಧ್ಯಾತ್ಮಿಕ ಅನುಭವ:
ಆಚಾರ್ಯ ಚಾಣಕ್ಯ ವೈವಾಹಿಕ ಜೀವನದಲ್ಲಿ ಪುರುಷ ಮತ್ತು ಮಹಿಳೆಯ ಚಿಂತೆಗಳನ್ನು ಹೋಗಲಾಡಿಸಲು ಅನೇಕ ವಿಷಯಗಳನ್ನು ಹೇಳಿದ್ದಾರೆ. ಆಚಾರ್ಯ ಚಾಣಕ್ಯ ಮದುವೆಯನ್ನು ಆದರ್ಶ ಸಾಮಾಜಿಕ-ಧಾರ್ಮಿಕ ಸಂಬಂಧ ಎಂದು ಬಣ್ಣಿಸಿದ್ದಾರೆ. ಮದುವೆಯೂ ಒಂದು ಆಧ್ಯಾತ್ಮಿಕ ಅನುಭವ. ಆಚಾರ್ಯ ಚಾಣಕ್ಯ ಹೇಳುವಂತೆ ಪತಿ-ಪತ್ನಿ ದೈಹಿಕವಾಗಿ ಮತ್ತು ಮಾನಸಿಕವಾಗಿ ಒಬ್ಬರನ್ನೊಬ್ಬರು ಸಂತೃಪ್ತಿಗೊಳಿಸುವುದೇ ಯಶಸ್ವಿ ದಾಂಪತ್ಯ.
ಸಾಮಾನ್ಯವಾಗಿ ಗಂಡನ ವಯಸ್ಸು ಜಾಸ್ತಿ ಇರುತ್ತದೆ. ಆದರೆ ಅತಿಯಾಗಿ ಇರಬಾರದು. ಏಕೆಂದರೆ ಚಾಣಕ್ಯರ ಪ್ರಕಾರ ದೈಹಿಕವಾಗಿ ಸಮರ್ಥ ಪುರುಷನು ತನ್ನ ಹೆಂಡತಿಯ ದೈಹಿಕ ಆಸೆಗಳನ್ನು ಪೂರೈಸಬಹುದು. ಇಲ್ಲದಿದ್ದರೆ ಕಷ್ಟವಾಗುತ್ತದೆ. ಮತ್ತೊಂದು ಮುಖ್ಯವಾದ ವಿಚಾರ ಎಂದರೆ ಇಬ್ಬರ ಆಲೋಚನೆಗಳು ಬಹಳ ವಿಭಿನ್ನವಾಗಿರುತ್ತದೆ.
ಇದರಿಂದ ಸಂಸಾರದಲ್ಲಿ ಜಗಳ ಹೆಚ್ಚಾಗುತ್ತದೆ. ಇದು ಮುಂದಿನ ದಿನಗಳಲ್ಲಿ ದಾಂಪತ್ಯದಲ್ಲಿ ಬಿರುಕು ಮೂಡಿಸಬಹುದು. ಹಾಗಾಗಿ ಚಾಣಕ್ಯರ ಪ್ರಕಾರ 5 ರಿಂದ 6 ವರ್ಷಗಳ ಅಂತರ ಒಳ್ಳೆಯದು. ಅದಕ್ಕಿಂತ ಹೆಚ್ಚಿನ ವಯಸ್ಸಿನ ಅಂತರ ಇದ್ದರೆ ಕಷ್ಟವಾಗುತ್ತದೆ. ಮದುವೆಯಾಗುವ ಮೊದಲು ಇದನ್ನ ನೀವು ಅನುಸರಿಸುವುದು ಉತ್ತಮ.