ಮಂಡ್ಯ: ಹಾಸನದಲ್ಲಿ ನಡೆಯಲಿರುವ ಸ್ವಾಭಿಮಾನಿ ಸಮಾವೇಶದ ಸಿದ್ದತೆ ಕುರಿತು ಮಂಡ್ಯದಲ್ಲಿ ಸಚಿವ ಚಲುವರಾಸ್ವಾಮಿ ನೇತೃತ್ವದಲ್ಲಿ ಸಭೆ ನಡೆಯಿತು. ಸಭೆಯಲ್ಲಿ ಮಾತನಾಡಿದ ಸಚಿವ ಚಲುವರಾಯಸ್ವಾಮಿ, ಸಿದ್ದರಾಮಯ್ಯ, ಡಿಕೆಶಿ ವಿರುದ್ದದ ಟೀಕೆ ಗೆ ಉತ್ತರವೇ ಈ ಸಮಾವೇಶ. ಹೀಗಾಗಿ ಸಮಾವೇಶ ಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಮಂಡ್ಯದಿಂದ ಜನರು ಕರೆತರಬೇಕು. ಹಾಸನದಲ್ಲಿ ಬೃಹತ್ ಬೃಹತ್ ಸಮಾವೇಶ ನಡೆಯುತ್ತಿದೆ. ಉಪ ಚುನಾವಣೆಯಲ್ಲಿ ನಾವು ಜಯ ಗಳಿಸಿದ್ದೇವೆ. ಬಿಜೆಪಿ-ಜೆಡಿಎಸ್ ನವರು ತರಲೆ ವಿಚಾರದ ಬಗ್ಗೆ ಮಾತನಾಡ್ತಾರೆ. ಕಾರ್ಯಕ್ರಮದ ಬಗ್ಗೆ ಅವರು ಮಾತನಾಡಲ್ಲ. ಟೀಕೆ ಮಾಡಿದ್ರೆ ಮಾತ್ರ ಮಾಧ್ಯಮದಲ್ಲಿ ಪ್ರಸಾರ ಮಾಡ್ತಾರೆ. ಕಾಂಗ್ರೆಸ್ ಬಗ್ಗೆ ಅಪಪ್ರಚಾರ ಮಾಡ್ತಾರೆ. ಮುಡಾ ವಿಚಾರ ತಂದರೂ, ಪಾದಯಾತ್ರೆ ಮಾಡಿದರೂ ಫ್ಲಾಪ್ ಆಯ್ತು. ಮೂರು ಕ್ಷೇತ್ರದಲ್ಲಿ ಗೆದ್ದಿದ್ದೇವೆ. ಸಿದ್ದರಾಮಯ್ಯ ಕೆಲಸ ಮಾಡ್ತಿದ್ದಾರೆ ನೀವು ಬಾಯಿ ಮುಚ್ಚಿಕೊಳ್ಳಿ ಅಂತ ಬಿಜೆಪಿ-ಜೆಡಿಎಸ್ ಜನರು ಸಂದೇಶ ಕೊಟ್ಟಿದ್ದಾರೆ. ಡಿ.5 ರಂದು ನಡೆಯುತ್ತಿರುವ ಸಮಾವೇಶ ಯಶಸ್ವಿಯಾಗಬೇಕು. ಜಿಲ್ಲೆಯಿಂದ 30 ಸಾವಿರ ಜನರು ಬರಬೇಕು ಎಂದು ಸಮಾವೇಶ ಯಶಸ್ವಿಯಾಗಿ ನಡೆಸಿಕೊಡಲು ಕಾರ್ಯಕರ್ತರಿಗೆ ಕರೆ ನೀಡಿದರು.
ಸೋತಿದ್ದೇವೆ ಸತ್ತಿಲ್ಲ.. ಯಾರೂ ಧೃತಿಗೆಡಬೇಡಿ : ಕಾರ್ಯಕರ್ತರಿಗೆ ಬಲ ನೀಡಿದ ನಿಖಿಲ್ ಕುಮಾರಸ್ವಾಮಿ
ಇನ್ನೂ ಇದೇ ವೇಳೆ ಮಂಡ್ಯದ ಅಬಕಾರಿ ಇಲಾಖೆಯಲ್ಲಿ ಲಂಚವಾತರ ವಿಚಾರವಾಗಿ ಮಾತನಾಡಿ, ಈ ಬಗ್ಗೆ ನಾನು ಲೋಕಾಯುಕ್ತ ಎಸ್ಪಿ ಜೊತೆ ಮಾತಾಡಿದ್ದೇನೆ. ಈ ಬಗ್ಗೆ ತನಿಖೆ ಮಾಡಿ ಅಂತಾ ಹೇಳಿದ್ದೇನೆ. ಮುಂದೆ ಈ ರೀತಿ ಆಗದಂತೆ ಕ್ರಮ ಆಗಬೇಕು ಅಂತಾನೂ ಹೇಳಿದ್ದೇನೆ.ಹೀಗಾಗಲೇ ಲೋಕಾಯುಕ್ತ ತನಿಖೆ ಮಾಡ್ತಾ ಇದ್ದಾರೆ. ಅಬಕಾರಿ ಡಿಸಿ ರಜೆ ಇದ್ದಾರಂತೆ ಎಂದರು.
ಬಿಜೆಪಿಯಲ್ಲಿ ಎರಡು ಬಣಗಳ ವಿಚಾರವಾಗಿ ಮಾತನಾಡಿ, ಇದನ್ನು ನೋಡಿದ್ರೆ ತಮಾಷೆ ಅನ್ನಿಸುತ್ತೆ. ಈಗ ವಿಜಯೇಂದ್ರ, ಅಶೋಕ್, ಸಿ.ಟಿ.ರವಿ ಈಗ ಉತ್ತರ ಹೇಳಬೇಕು. ನಮ್ಮ ಬಗ್ಗೆ ಇವರು ಅನಾವಶ್ಯಕವಾಗಿ ಮಾತಾಡ್ತಾ ಇದ್ರು. ಅವರ ಪಕ್ಷದಲ್ಲಿ ದೊಡ್ಡ ಬಿರುಕು ಆಗಿದೆ. ಇದನ್ನು ಯಾರು ಸಮಾಧಾನ ಮಾಡಿ ಸರಿಪಡಿಸೋರು. ಅದಕ್ಕೆ ಇನ್ನೊಬ್ಬರ ಬಗ್ಗೆ ಮಾತಾಡಿದ್ರೆ ಏನೇಲ್ಲಾ ಅನುಭವಿಸಬೇಕು ಅನ್ನೋದಕ್ಕೆ ಸಾಕ್ಷಿ ಎಂದು ತಿರುಗೇಟು ನೀಡಿದರು. ವಕ್ಫ್ ವಿಚಾರದಲ್ಲಿ 16 ಸಾವಿರ ನೋಟಿಸ್ನ್ನು ಬಿಜೆಪಿ ಕಾಲದಲ್ಲೇ ಕೊಟ್ಟ ಇದ್ದು. ವಕ್ಫ್ ಬಗ್ಗೆ ಯತ್ನಾಳ್ ಮಾತಾಡುತ್ತಾ ಇದ್ದಾರೆ.ಬಿಜೆಪಿ ಅವರು ನಮ್ಮ ಬಣ್ಣ ಬದಲಾಗುತ್ತೆ ಬೇಡಾ ಅಂತಾ ಇದ್ದಾರೆ ಎಂದರು.
ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆ, ಸಚಿವರ ಬದಲಾವಣೆ ವಿಚಾರವಾಗಿ ಪ್ರತಿಕ್ರಿಯಿಸಿ,ಬದಲಾವಣೆ ಎಲ್ಲಾ ಹೈಕಮಾಂಡ್ಗೆ ಬಿಟ್ಟ ವಿಚಾರ. ಮಂತ್ರಿ ಮಂಡಲ ಪುನಾರಚನೆ, ಖಾತೆ ಬದಲಾವಣೆ, ಅಧ್ಯಕ್ಷ ಬದಲಾವಣೆ ಎಲ್ಲಾ ಅವರಿಗೆ ಬಿಟ್ಟಿದ್ದು. ರಾಜಣ್ಣ ಅವರು ನನ್ನನ್ನು ಮಾಡಿದ್ರೆ ನಾನು ರೆಡಿ ಅಂದಿದ್ದಾರೆ. ಪಕ್ಷದಲ್ಲಿ ನನ್ನ ಮಾಡ್ತಾ ಇದಾರೆ ಅಂತ ಹೇಳಿಲ್ಲ. ಮಾಡಿದ್ರೆ ನಾನು ರೆಡಿ ಅಂದಿದ್ದಾರೆ. ನಾನೊಂತು ಅಧ್ಯಕ್ಷ ಸ್ಥಾನದ ರೇಸ್ನಲ್ಲಿ ಇಲ್ಲ. ನಮ್ಮ ಪಕ್ಷ ನಮ್ಮನ್ನು ಮಂತ್ರಿ ಮಾಡಿದೆ. ಮಾರ್ಕ್ಸ್ ಕಾರ್ಡ್ ಕೇಳಿದ್ರೆ ತಪ್ಪೇನು. ನಮಗೆ ಎಚ್ಚರಿಕೆನೂ ಕೊಡಬಹುದು, ಬದಲಾವಣೆನೂ ಮಾಡಬಹುದು ಎಂದರು.
ಇದೇ ವೇಳೆ ಶ್ರೀ ಚಂದ್ರಶೇಖರ್ ಸ್ವಾಮೀಜಿ ಮೇಲೆ ಎಫ್ಐಆರ್ ವಿಚಾರವಾಗಿ ಮಾತನಾಡಿ, ಈ ಎಫ್ಐಆರ್ ಬಗ್ಗೆ ನನಗೆ ಮಾಹಿತಿ ಇಲ್ಲ. ಹಿಂದೆ ಬಾಲಗಂಗಾಧರನಾಥ ಶ್ರೀಗಳ ಮೇಲೆ ಎಫ್ಐಆರ್ ಹಾಕಿದ್ರು. ಆಗ ಸಿಎಂ, ಅರಣ್ಯ ಸಚಿವ ಯಾರು ಇದ್ರು ಅಂತಾ ನೋಡಬೇಕು. ದೊಡ್ಡ ಸ್ವಾಮೀಜಿಗಳ ಮೇಲೆ ಎಫ್ಐಆರ್ ಹಾಕಿದಾಗ ಯಾರ ಸರ್ಕಾರ ಇತ್ತು.ಅವೆಲ್ಲವನ್ನೂ ತೆಗೆದು ನೋಡಬೇಕು ಎಂದು ಬಿಜೆಪಿಗೆ ತಿರುಗೇಟು ನೀಡಿದರು.