ಬಹುನಿರೀಕ್ಷಿತ ಐಸಿಸಿ ಚಾಂಪಿಯನ್ಸ್ ಟ್ರೋಫಿ 2025ಯನ್ನು ತಾನೇ ಆತಿಥ್ಯವಹಿಸಬೇಕು ಎಂದು ಪಾಕಿಸ್ತಾನ ನಿರ್ಧಾರ ಮಾಡಿದೆ. ಆದ್ರೆ ಇದರ ಬಗ್ಗೆ ಐಸಿಸಿ ಹಾಗೂ ಬಿಸಿಸಿಐ ಹಲವು ಆಕ್ಷೇಪಣೆಗಳನ್ನು ಎತ್ತಿವೆ. ಇದೇ ವಿಚಾರಕ್ಕೆ ಪಾಕಿಸ್ತಾನ್ ತಂಡದ ಮಾಜಿ ನಾಯಕ ಶಾಹಿದ್ ಅಫ್ರಿದಿ ಕೂಡ ಬೆಂಬಲ ವ್ಯಕ್ತಪಡಿಸಿದ್ದಾರೆ.
ಕ್ರೀಡೆಯೊಂದಿಗೆ ರಾಜಕೀಯವನ್ನು ಹೆಣೆದುಕೊಂಡಿರುವ ಬಿಸಿಸಿಐ ಅಂತರಾಷ್ಟ್ರೀಯ ಕ್ರಿಕೆಟ್ ಅನ್ನು ಅತಂತ್ರ ಸ್ಥಿತಿಯಲ್ಲಿರಿಸಿದೆ ಎಂದು ಪಾಕ್ ಆಟಗಾರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೈಬ್ರಿಡ್ ಮಾದರಿಯ ವಿರುದ್ಧ ಪಾಕಿಸ್ತಾನ್ ಕ್ರಿಕೆಟ್ ಮಂಡಳಿಯ ನಿಲುವನ್ನು ನಾನು ಸಂಪೂರ್ಣವಾಗಿ ಬೆಂಬಲಿಸತ್ತೇನೆ. ಏಕೆದರೆ 26/11ರ ಘಟನೆಯ ನಂತರ ಭದ್ರತಾ ಕಾಳಜಿಗಳ ಹೊರತಾಗಿಯೂ ಪಾಕಿಸ್ತಾನ್ ತಂಡವು ದ್ವಿಪಕ್ಷೀಯ ವೈಟ್-ಬಾಲ್ ಸರಣಿ ಸೇರಿದಂತೆ ಐದು ಬಾರಿ ಭಾರತ ಪ್ರವಾಸ ಮಾಡಿದೆ.
ಎಚ್ಚರ.. ಎಚ್ಚರ.. ಶನಿವಾರ ಈ ಕೆಲಸಗಳನ್ನು ಮಾಡಿದ್ರೆ ಶನಿ ದೋಷ ಬರೋದು ಗ್ಯಾರಂಟಿ!
ಹೀಗಾಗಿ ಈ ಬಾರಿ ಭಾರತ ಪಾಕಿಸ್ತಾನದಲ್ಲಿ ಬಂದು ಆಡಬೇಕೆಂದು ಶಾಹಿದ್ ಅಫ್ರಿದಿ ಆಗ್ರಹಿಸಿದ್ದಾರೆ. ಅಷ್ಟೇ ಅಲ್ಲದೆ ಚಾಂಪಿಯನ್ಸ್ ಟ್ರೋಫಿ ವಿಷಯದಲ್ಲಿ ಐಸಿಸಿ ಮತ್ತು ಅದರ ನಿರ್ದೇಶಕರ ಮಂಡಳಿಯು ನ್ಯಾಯಸಮ್ಮತತೆಯನ್ನು ಎತ್ತಿಹಿಡಿಯಲು ಇದು ಸಕಾಲ. ಈ ಮೂಲಕ ತಮ್ಮ ಅಧಿಕಾರವನ್ನು ಚಲಾಯಿಸಬೇಕೆಂದು ಅಫ್ರಿದಿ ಸೋಷಿಯಲ್ ಮೀಡಿಯಾದಲ್ಲಿ ಹೇಳಿದ್ದಾರೆ.