ಬೆಂಗಳೂರು: ಬಿಜೆಪಿಯೊಳಗಿನ ಭಿನ್ನಮತ ಸದ್ಯಕ್ಕಂತು ಮುಗಿಯೋತರ ಕಾಣ್ತಿಲ್ಲ, ಎರಡು ಗುಂಪುಗಳ ನಡುವಿನ ಹೋರಾಟ ಜೋರಾಗ್ತಿದೆ. ವಿಜಯೇಂದ್ರ ಬೆಂಬಲಿಸಿ ರೇಣುಕಾಚಾರ್ಯ ನೇತೃತ್ವದ ಟೀಂ ಇಂದಿನಿಂದ ಹೋರಾಟ ಶುರುಮಾಡಿದೆ, ಯತ್ನಾಳ್ ರನ್ನೇ ಟಾರ್ಗೆಟ್ ಮಾಡಿರೋ ಟೀಂ ವೈಯಕ್ತಿಕ ಟಾಕ್ ವಾರ್ ಗಿಳಿದಿದೆ. ಈ ಮಧ್ಯೆ ಯತ್ನಾಳ್ ರೇಣುಕಾಚಾರ್ಯ ಟೀಂ ಅನ್ನ ಲಫಡಾ ಎಂದಿದ್ದು ರಕ್ತದಲ್ಲಿ ಪತ್ರ ಬರೆದವರ ವಿರುದ್ಧ ವ್ಯಂಗ್ಯವಾಡ್ತಾ ಸವಾಲು ಹಾಕಿದ್ದಾರೆ.
ಬಿಜೆಪಿಯ ಬಣ ಬಡಿದಾಟ ಇದೀಗ ಎರಡೂ ಬಣಗಳ ನಡುವೆ ಪ್ರತಿಷ್ಟೆಯ ಹೋರಾಟಕ್ಕೆ ವೇದಿಕೆ ಸಿದ್ದವಾಗಿದೆ. ಯತ್ನಾಳ್ ಬಣದ ವಕ್ಫ್ ಹೋರಾಟಕ್ಕೆ ಟಕ್ಕರ್ ಕೊಡಲು ವಿಜಯೇಂದ್ರ ಪರವಾಗಿ ರೇಣುಕಾಚಾರ್ಯ ಟೀಂ ಹೋರಾಟ ಆರಂಭಿಸಿದೆ. ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಅವರ ಸದಾಶಿವನಗರದ ಮನೆಯಲ್ಲಿ ಟಿಫನ್ ಗೆ ಸೇರಿದ ಸುಮಾರು 35 ಕ್ಕೂ ಹೆಚ್ಚು ಮಾಜಿ ಶಾಸಕರು ಶಕ್ತಿ ಪ್ರದರ್ಶನ ತೋರಿಸಿದ್ರು.
ಎಚ್ಚರ.. ಎಚ್ಚರ.. ಶನಿವಾರ ಈ ಕೆಲಸಗಳನ್ನು ಮಾಡಿದ್ರೆ ಶನಿ ದೋಷ ಬರೋದು ಗ್ಯಾರಂಟಿ!
ರೇಣುಕಾಚಾರ್ಯ ಟೀಂ ಸುದ್ದಿಗೋಷ್ಟಿ ನಡೆಸಿ ಆಕ್ರೋಶ ಹೊರಹಾಕ್ತು. ಯತ್ನಾಳ್ ರನ್ನೇ ಟಾರ್ಗೆಟ್ ಮಾಡಿದ ನಾಯಕರು ವೈಯಕ್ತಿಕ ವಿಚಾರಗಳನ್ನು ಎಳೆದು ತಂದು ಮಾತನಾಡಿದ್ರು ಈ ವೇಳೆ ಮಾತನಾಡಿದ ರೇಣುಕಾಚಾರ್ಯ ಸದಾನಂದಗೌಡ್ರು ಮಾತಾಡಿದ್ದಕ್ಕೆ ಬಿಚ್ಚೀಡ್ತೀನಿ ಅಂತೀಯಲ್ಲನೀನು ಏನು ಬ್ಲ್ಯಾಕ್ ಮೇಲ್ ಮಾಸ್ಟರಾ. ಅದೇನು ಬಿಚ್ಚಿಡು ನೋಡೋಣ ನಾವು ನಿಂದು ಬಿಚ್ಚಿಡ್ತೀವಿ, ಬೀದಿಯಲ್ಲಿ ತಮಡೆ ಹೊಡೆಯುತ್ತಾ ಹೋಗ್ತಿರೋ ನಾಗರಹಾವುಗಳು ನೀವು.
ಬಿಜೆಪಿ ಮುಗಿಸು ಅಂತಾ ಕಾಂಗ್ರೆಸ್ ನವರು ಸುಪಾರಿ ಕೊಟ್ಟಿದ್ದಾರಾ ನಿನಗೆ, ಸೋನಿಯಾ ಗಾಂಧಿ, ರಾಹುಲ್ ಗಾಂಧಿಯೇ ಯತ್ನಾಳ್ ಗೆ ಸುಫಾರಿ ಕೊಟ್ಟಿದ್ದಾರೆ. ಪಕ್ಷದ ವೇಧಿಕೆಯಲ್ಲಿ ನಾವು ಪ್ರವಾಸ ಮಾಡ್ತಿದ್ದೇವೆ ದಾವಣಗೆರೆ ಸಮಾವೇಶಕ್ಕೆ ರಾಷ್ಟ್ರೀಯ ನಾಯಕರನ್ನು ಕರೆಸುತ್ತೇವೆ. ವಿಜಯಪುರದ ಹಾಲಿ ಸಚಿವ ಹಾಗೂ ಪ್ರಭಾವಿ ಸಚಿವನ ಜೊತೆ ಹೊಂದಾಣಿಕೆಯನ್ನು ಮಾಡಿಕೊಂಡು ನೀನು ಗೆದ್ದು ಇಡೀ ಜಿಲ್ಲೆಯ ಬಿಜೆಪಿ ಶಾಸರನ್ನು ಸೋಲಿಸಿದ್ದೀಯಾ ಶಿಗ್ಗಾವ್ ನಲ್ಲಿ ಭರತ್ ಬೊಮ್ಮಾಯಿ ಸೋಲಿಗೂ ನೀನೇ ಕಾರಣ ಅಂತ ಯತ್ನಾಳ್ ವಿರುದ್ಧ ಕಿಡಿ ಕಾರಿದ್ದಾರೆ ರೇಣುಕಾಚಾರ್ಯ..
ರೇಣುಕಾಚಾರ್ಯ ಟೀಂ ಹೋರಾಟ ಹಾಗೂ ಆಕ್ರೋಶದ ಮಾತುಗಳಿಗೆ ರೆಬಲ್ ನಾಯಕ ಯತ್ನಾಳ್ ಟಾಂಗ್ ಕೊಟ್ಟಿದ್ದಾರೆ. ಲಪುಟ ನನ್ನ ಮಕ್ಕಳ ಪ್ರತಿಕ್ರಿಯೆ ನನಗೆ ಕೇಳಬೇಡಿ. ರಾಜಕಾರಣದಲ್ಲಿ ಏನಾದರೂ ಮಾನ ಮರ್ಯಾದ ಇದ್ದವರೆ ಬಗ್ಗೆ ಮಾತ್ರ ನನಗೆ ಕೇಳಿ. ನನ್ನ ವಿರುದ್ಧ ಮಂಡ್ಯದಲ್ಲಿ ರಕ್ತ ಚಳುವಳಿ ಮಾಡಿದ್ದಾರೆ ಮಂಡ್ಯದಲ್ಲಿ ಬಿಜೆಪಿ ಬೆಂಬಲಿತ ಒಬ್ಬ ಗ್ರಾಮ ಪಂಚಾಯಿತಿ ಸದಸ್ಯನನ್ನು ಆಯ್ಕೆ ಮಾಡಿಲ್ಲ. ಅವರಿಗೆ ನನ್ನ ಬಗ್ಗೆ ಮಾತನಾಡಲು ನೈತಿಕತೆ ಇಲ್ಲ. ಮೊದಲು ಮಂಡ್ಯದಲ್ಲಿ ನಮ್ಮ ಪಕ್ಷದ ನಾಲ್ಕು ಶಾಸಕರನ್ನಾಗಿ ಮಾಡಿ.
ಮಂಡ್ಯದಲ್ಲಿರುವ ಭೂಕನಕೆರೆ ವಿಜಯೇಂದ್ರನ ಅಪ್ಪನ ಊರು, ಬೂಕಕೆರೆಯಲ್ಲಿಯೇ ಬಿಜೆಪಿ ಬೆಂಬಲಿತ ಗ್ರಾಮ ಪಂಚಾಯಿತಿ ಸದಸ್ಯರೇ ಇಲ್ಲ ಅಂತವರು ನನ್ನ ವಿರುದ್ಧ ರಕ್ತದಲ್ಲಿ ಪತ್ರ ಬರೆಯುತ್ತಾರೆ. ನಾವು ವಕ್ಪ್ ಹೋರಾಟವನ್ನು ಕೈ ಬಿಡಲ್ಲ ಪ್ರಧಾನಿ ಅವರು ಹೇಳಿದಂತೆ ವಂಶವಾದ, ಭ್ರಷ್ಟಾಚಾರ, ರಾಜಕಾರಣದ ವಿರುದ್ಧ ಹೋರಾಡುವೆ ಎಂದು ಗುಡುಗಿದ್ದಾರೆ ಯತ್ನಾಳ್….