ಯಾದಗಿರಿ : ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ನಿರ್ಮಿಸಿದ ಯಿಮ್ಸ್ ಆಸ್ಪತ್ರೆಯಲ್ಲಿ ಬ್ಲಡ್ ಬ್ಯಾಂಕ್ ಇಲ್ಲವಾಗಿದೆ. ಯಿಮ್ಸ್ ಆಸ್ಪತ್ರೆ ಉದ್ಘಾಟನೆಯಾಗಿ ನಾಲ್ಕು ವರ್ಷಗಳಾದರೂ ಬ್ಲಡ್ ಬ್ಯಾಂಕ್ ಮಾತ್ರ ಆರಂಭವಾಗಿಲ್ಲ. ಹೀಗಾಗಿ ಜೀವ ಹನಿಗಾಗಿ ರೋಗಿಗಳ ಪರದಾಡುವಂತಾಗಿದ್ದು, ಆಸ್ಪತ್ರೆಗೆ ಬರುವ ರೋಗಿಗಳು ಹೊರಗಡೆ ರಕ್ತ ಖರೀದಿಸುವ ಅನಿವಾರ್ಯತೆ ಎದುರಾಗಿದೆ. ಯಾದಗಿರಿ ನಗರದ ಹೊರಭಾಗದಲ್ಲಿರುವ ಯಿಮ್ಸ್ ಆಸ್ಪತ್ರೆ 2021 ಜ. 7 ರಂದು ಯಿಮ್ಸ್ ಆಸ್ಪತ್ರೆ ಉದ್ಘಾಟನೆಯಾಗಿದ್ದು, ಬ್ಲಡ್ ಬ್ಯಾಂಕ್ ಸ್ಥಾಪನೆ ಮಾಡದೇ ವಿಳಂಬ ಮಾಡುತ್ತಿದ್ದಾರೆ.
ಹೆಸ್ಕಾಂ ಹೈಟೆನ್ಷನ್ ವಿದ್ಯುತ್ ತಂತಿ ತಗುಲಿ ಬೆಂಕಿ ಅವಘಡ : ಬೆಂಕಿ ನಂದಿಸಲು ಗ್ರಾಮಸ್ಥರ ಹರಸಾಹಸ
ರಕ್ತನಿಧಿ ಕೇಂದ್ರ ಆರಂಭಕ್ಕೆ ಅಗತ್ಯ ಉಪಕರಣಗಳ ಅಳವಡಿಕೆ ಮಾಡಿದ್ದಾರೆ. ಒಂದು ಕೋಟಿಗೂ ಅಧಿಕ ಹಣ ಖರ್ಚು ಮಾಡಿ ಯಂತ್ರೋಪಕರಣಗಳನ್ನು ಅಳವಡಿಸಲಾಗಿದೆ. ಆದರೆ ಲೈಸೆನ್ಸ್ ಇಲ್ಲದೇ ಇರೋದ್ರಿಂದ ಬ್ಲಡ್ ಬ್ಯಾಂಕ್ ಓಪನ್ ಮಾಡದೇ ಇದ್ದಾರೆ. ಬ್ಲಡ್ ಬ್ಯಾಂಕ್ ಆರಂಭದ ಅನುಮತಿಗೆ ಪತ್ರ ಬರೆದಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಲೈಸೆನ್ಸ್ ಗಾಗಿ ಕಾಯುತ್ತಿದೆ. ಜೊತೆಗೆ ಬ್ಲಡ್ ಬ್ಯಾಂಕ್ ನಲ್ಲಿ ಕಾರ್ಯನಿರ್ವಹಿಸಲಯ ಸಿಬ್ಬಂದಿ ಕೊರತೆ ಸಹ ಇದೆ. ನಾಲ್ಕು ಜನ ಟೆಕ್ನಿಷಿಯನ್, 4 ಜನ ಸ್ಟಾಪ್ ನರ್ಸ್ ಸೇರಿದಂತೆ 10 ಜನ ಸಿಬ್ಬಂದಿಗಳ ಅಗತ್ಯವಿದೆ ಎಂದ ಡಾ.ಸಿದ್ದಲಿಂಗರೆಡ್ಡಿ ಮಾಹಿತಿ ನೀಡಿದ್ದಾರೆ.