ಬೆಂಗಳೂರು: ಅನುದಾನ ಕೊಡ್ತಿಲ್ಲ,ಅಭಿವೃದ್ಧಿ ಯೋಜನೆಗಳಿಗೆ ಹಣ ನೀಡ್ತಿಲ್ಲ.ಕ್ಷೇತ್ರದಲ್ಲಿ ಜನರಿಂದ ಥೂಛೀ ಅನ್ನಿಸಿಕೊಳ್ಬೇಕು ಅಂತ ಕೆಲವು ಶಾಸಕರು ಅಸಮಾಧಾನ ಹೊರಹಾಕಿದ್ದರು.ಕೆಲವು ಹಿರಿಯ ಶಾಸಕರು ಬೇಸರ ಪಟ್ಟಿದ್ದರು.ಬೇಸರ ಹೊರಹಾಕಿದ್ದವರು ಆಪರೇಷನ್ ಕಮಲಕ್ಕೆ ತುತ್ತಾಗಬಹುದು,ಸರ್ಕಾರಕ್ಕೆ ಡ್ಯಾಮೇಜ್ ಆಗುತ್ತೆ ಅನ್ನೋ ಕಾರಣಕ್ಕೆ ಸಿಎಂ ಪುನಾರಚನೆ ಮಾಡಿ ಕೆಲವರಿಗೆ ಅವಕಾಶ ನೀಡೋಣ ಅಂದುಕೊಂಡಿದ್ರು.
ಅದ್ರಂತೆ ಪುನಾರಚನೆ ಸದ್ದು ಜೋರಾಗಿತ್ತು.ಈಗ ಹೈಕಮಾಂಡ್ ಬ್ರೇಕ್ ಹಾಕಿದೆ.ಇದ್ರಿಂದ ಬೇಸರಗೊಂಡಿರುವ ಶಾಸಕರನ್ನ ಸಮಾಧಾನ ಮಾಡೋಕೆ ಸಿಎಂ ಮುಂದಾಗಿದ್ದಾರೆ.ಹಾಗಾಗಿ ಶಾಸಕರಿಗೆ ವಿಶೇಷ ಯೋಜನೆಯಡಿ ಅನುದಾನ ನೀಡೋಕೆ ಪ್ಲಾನ್ಮಾಡಿದ್ದಾರೆ.ಬಜೆಟ್ ನಲ್ಲೂಹೆಚ್ಚಿನ ಅನುದಾನ ನೀಡೋಕೆಯೋಚಿಸ್ತಿದ್ದಾರೆ.
ಎಚ್ಚರ.. ಎಚ್ಚರ.. ಶನಿವಾರ ಈ ಕೆಲಸಗಳನ್ನು ಮಾಡಿದ್ರೆ ಶನಿ ದೋಷ ಬರೋದು ಗ್ಯಾರಂಟಿ!
ಒಟ್ನಲ್ಲಿ ,ಸಂಪುಟ ಪುನಾರಚನೆಗೆ ಯಾವಾಗ ಮುಹೂರ್ತ ಕೂಡಿ ಬರುತ್ತೋ ಗೊತ್ತಿಲ್ಲ.. ಇಷ್ಟು ದಿನ ಮಂತ್ರಿಗಿರಿ ಕಳೆದುಕೊಳ್ಳೋ ಭೀತಿಯಲ್ಲಿದ್ದ ಸಚಿವರು ಹೈಕಮಾಂಡ್ ನಿರ್ಧಾರದಿಂದ ಫುಲ್ಖುಷ್ ಆಗಿದ್ದಾರೆ.ಆದ್ರೆ ಸಚಿವ ಸ್ಥಾನ ಸಿಗುತ್ತೆ,ಗೂಟದ ಕಾರಿನಲ್ಲಿ ಓಡಾಡಬಹುದು ಅನ್ನೋ ಕನಸುಕಂಡಿದ್ದವರಿಗೆ ನಿರಾಸೆಯಾಗಿದೆ.