ಇತ್ತೀಚೆಗೆ ಸಮಂತಾ ಜೀವನದಲ್ಲಿ ಯಾಕೋ ಒಂದಿಲ್ಲ ಒಂದು ಕಷ್ಟಗಳು ಬರುತ್ತಲೇ ಇದ್ದು, ಅವರ ವೈವಾಹಿಕ ಜೀವನದಲ್ಲಿ ಆದ ಬಿರುಗಾಳಿ ಬಳಿಕ ಬಹಳ ಕಂಗೆಟ್ಟು ಹೋಗಿದ್ದಾರೆ. ಇದೀಗ ಮತ್ತೆ ಸಮಂತಾಗೆ ಶಾಕ್ ಎದುರಾಗಿದೆ
ಬೆಂಗಳೂರಿನಲ್ಲಿ ಪ್ರಿಯಕರನಿಂದ ಪ್ರಿಯತಮೆ ಬರ್ಬರ ಹತ್ಯೆ ಕೇಸ್: ಹಂತಕ ಅರೆಸ್ಟ್!
ಸೌತ್ ನಟಿ ಸಮಂತಾ ತಂದೆ ಜೋಸೆಫ್ ಪ್ರಭು ನಿಧನ ಹೊಂದಿದ್ದಾರೆ. ಸೌತ್ ನಟಿ ಸಮಂತಾ ರುತ್ ಪ್ರಭು ಅವರ ತಂದೆ ಜೋಸೆಫ್ ಪ್ರಭು ಅವರು ಇಂದು ವಿಧಿವಶರಾಗಿದ್ದಾರೆ. ದುಃಖದ ಈ ವಿಚಾರವನ್ನು ಸ್ವತಃ ನಟಿ ಇನ್ಸ್ಟಾಗ್ರಾಂ ಖಾತೆಯಲ್ಲಿ ಅಧಿಕೃತವಾಗಿ ತಿಳಿಸಿದ್ದಾರೆ.
ಮತ್ತೆ ನಾವು ಸಿಗವವರೆಗೆ ಅಪ್ಪ’ ಎಂದು ಸಮಂತಾ ಅವರು ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಪೋಸ್ಟ್ ಮಾಡಿದ್ದಾರೆ. ಜೊತೆಗೆ, ಒಡೆದ ಹೃದಯದ ಎಮೋಜಿ ಬಳಸಿದ್ದಾರೆ. ಹಲವು ದಿನಗಳಿಂದ ಅನಾರೋಗ್ಯದಿಂದ ನಟಿಯ ತಂದೆ ಬಳುತ್ತಿದ್ದರು. ಇದೀಗ ನಟಿಯ ತಂದೆಯ ನಿಧನಕ್ಕೆ ಆಪ್ತರು, ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ.