ಬೆಂಗಳೂರು:- ಮಹಿಳೆಯ ಸರ ಕಿತ್ತುಕೊಂಡು ಎಸ್ಕೇಪ್ ಆಗಿದ್ದ ಸರಗಳ್ಳರನ್ನು ಬಂಧಿಸಲಾಗಿದೆ
ಒಡಿಸ್ಸಾದ ಬಾಲಸೂರು ಜಿಲ್ಲೆಯವರಾದ ದೇಬಸಿಸ್ ದಾಸ್, ಮಧುಸೂದನ್ ಬಂಧಿತ ಆರೋಪಿಗಳು ಎನ್ನಲಾಗಿದೆ. ಇದೇ ತಿಂಗಳು 21 ರಂದು ಘಟನೆ ನಡೆದಿದೆ.
ನಿರ್ಮಲಾ ಎಂಬುವವರು ರಸ್ತೆಯಲ್ಲಿ ನಡೆದು ಹೋಗುತ್ತಿದ್ದರು. ಈ ವೇಳೆ ಎದುರಿನಿಂದ ಬೈಕ್ ನಲ್ಲಿ ಬಂದು ಸರ ಕಿತ್ತುಕೊಂಡು ಎಸ್ಕೇಪ್ ಆಗಿದ್ರು. ಸರಗಳ್ಳತನದ ದೃಶ್ಯ ಸಿಸಿಟಿಯಲ್ಲಿ ಸೆರೆಯಾಗಿತ್ತು. ಸದ್ಯ ಕಾರ್ಯಾಚರಣೆ ನಡೆಸಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ್ದ ಬೈಕ್, 60 ಗ್ರಾಂ ಮೌಲ್ಯದ ಚಿನ್ನದ ಸರ ಸೀಜ್ ಮಾಡಿದ್ದಾರೆ. ಬಂಧಿತರ ಮೇಲೆ ಓಡಿಸ್ಸಾದ ವಿವಿಧ ಠಾಣೆಗಳಲ್ಲಿ 12 ಸರಗಳ್ಳತನ, ರಾಬರಿ ಪ್ರಕರಣ ಪತ್ತೆ ಆಗಿದೆ.
ಮಹಾದೇವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.