ಬೆಳಗಾವಿ : ಬೆಳಗಾವಿಯಲ್ಲಿ ಯೋಧನ ವಿರುದ್ಧ ರಾಜ್ಯ ಮಹಿಳಾ ಹೋರಾಟಗಾರ್ತಿಯನ್ನು ಪ್ರೀತಿಯ ಹೆಸರಲ್ಲಿ ವಂಚಿಸಿರುವ ಆರೋಪ ಕೇಳಿ ಬಂದಿದೆ. ನ್ಯಾಯಕ್ಕಾಗಿ ಯೋಧನ ಮನೆ ಮುಂದೆ ಇದೀಗ ಮಹಿಳೆ ಹೋರಾಟಕ್ಕೆ ಕುಳಿತಿದ್ದಾರೆ. ಬಿಜಗರ್ಣಿ ಗ್ರಾಮದ ಯೋಧ ಅಕ್ಷಯ್ ನಲವಡೆ ವಿರುದ್ದ ಹೋರಾಟಗಾರ್ತಿ ಪ್ರಮೋದಾ ಹಜಾರೆ ಆರೋಪ ಮಾಡಿದ್ದಾರೆ. ಆರು ವರ್ಷದ ಹಿಂದೆ ಪ್ರಮೋದಾ ಮತ್ತು ಅಕ್ಷಯ್ ನಲವಡೆ ಫೇಸ್ ಬುಕ್ ಮೂಲಕ ಪರಿಚಯವಾಗಿದ್ದರು. ತನಗಿಂತ ಹದಿನಾಲ್ಕು ವರ್ಷ ಮೇಲ್ಪಟ್ಟ ಮಹಿಳೆ ಜೊತೆಗೆ ಪ್ರೀತಿಯಲ್ಲಿ ಬಿದಿದ್ದ ಅಕ್ಷಯ್ ಮದುವೆ ಆಗುವುದಾಗಿ ಹೋರಾಟಗಾರ್ತಿಗೆ ನಂಬಿಸಿದ್ದಾರೆ. ಆರು ವರ್ಷದ ಹಿಂದೆ ಇಬ್ಬರು ಮದುವೆಯಾಗಿದ್ದರು. ಸೇನೆಯಿಂದ ರಜೆಗೆ ಬಂದಾಗ ಪ್ರಮೋದಾ ಜೊತೆಗೆ ಇರ್ತಿದ್ದ ಎಂದು ಪ್ರಮೋದಾ ಆರೋಪಿಸಿದ್ದಾರೆ.
ಮೊನ್ನೆ ಅಕ್ಷಯ್ ರಜೆಗೆ ಬಂದಾಗ ಬೇರೊಬ್ಬ ಯುವತಿ ಜೊತೆಗೆ ಎಂಗೆಜ್ಮೆಂಟ್ ಮಾಡಿಕೊಂಡಿರುವುದಾಗಿ ಪ್ರಮೋದ ಆರೋಪಿಸಿದ್ದಾರೆ. ಅಕ್ಷಯ್ ನಿಶ್ಚಿತಾರ್ಥ ವಿಚಾರ ಗೊತ್ತಾಗಿ ಅಕ್ಷಯ್ ಮನೆಗೆ ಹೋಗಿದ್ದ ಪ್ರಮೋದಾಗೆ ಹಿರಿಯರು, ಕುಟುಂಬಸ್ಥರು ಕೂಡಿಕೊಂಡು ಸರಿಪಡಿಸುವುದಾಗಿ ಹೇಳಿ ಕಳುಹಿಸಿದ್ದರು. ಆದರೆ ಆ ಬಳಿಕ ಅಕ್ಷಯ್ ಮದುವೆ ಆಗಲ್ಲ ಅಂತಾ ಉಲ್ಟಾ ಹೊಡೆದಿದ್ದು, ಇಂದು ಅಕ್ಷಯ್ ಮದುವೆ ಆಗಿದ್ದಾನೆ ಅಂತಾ ಆತನ ಮನೆಗೆ ಪ್ರಮೋದಾ ದೇವಿ ಬಂದಿದ್ದು, ಮನೆಯಲ್ಲಿ ಬೀಗ ಹಾಕಿಕೊಂಡು ಹೋಗಿದ್ದಾರೆ. ಸಾಯುವವರೆಗೂ ಮನೆ ಮುಂದೆ ಕುಡ್ತೇನಿ ಎಂದು ಕಣ್ಣೀರಿಟ್ಟ ಪ್ರಮೋದಾ ನಾನು, ಸಾಕಷ್ಟು ಮಹಿಳೆಯರಿಗೆ ನ್ಯಾಯ ಕೊಡಿಸಿದ್ದೇನೆ, ಈಗ ತನಗೆ ನ್ಯಾಯ ಕೊಡಿಸಿ ಅಂತಾ ಮನವಿ ಮಾಡಿದ್ದಾರೆ.