ಇಂದು ಮಹಾರಾಷ್ಟ್ರದಲ್ಲಿ ನಡೆಯಬೇಕಿದ್ದ ಮಹಾಯುತಿ ಸಭೆಯೂ ಏಕಾಏಕಿ ರದ್ದಾಗಿದೆ. ಮಹಾರಾಷ್ಟ್ರದಲ್ಲಿ ಮಹಾಯುತಿ ಸ್ಪಷ್ಟ ಬಹುಮತ ಪಡೆದಿತ್ತು. ಇಂದು ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿಯ ಹೆಸರು ಸಹ ಘೋಷಣೆಯಾಗಬೇಕಿತ್ತು. ಆದರೆ ಇದಕ್ಕೂ ಮುನ್ನ ನಡೆಯಬೇಕಿದ್ದ ಮಹಾಯುತಿ ಮಹಾಮೈತ್ರಿಕೂಟದ ಸಭೆ ರದ್ದು ಮಾಡಲಾಗಿದೆ. ಮುಂದಿನ 2 ದಿನಗಳ ಕಾಲ ಈ ಸಭೆ ನಡೆಯುವುದಿಲ್ಲ ಎನ್ನಲಾಗುತ್ತಿದೆ. ಅದರೆ ಸಭೆ ರದ್ದಿಗೆ ಕಾರಣ ಇನ್ನೂ ಗೊತ್ತಾಗಿಲ್ಲ. ಮಹಾರಾಷ್ಟ್ರದಲ್ಲಿ ಬಿಜೆಪಿಯ ನಾಯಕನ ಆಯ್ಕೆ ಮಾಡಲಾದ ಬಳಿಕ ಮಹಾಮೈತ್ರಿಕೂಟ ಸಭೆ ನಡೆಯಬಹುದು. ನಿನ್ನೆ ಮಹಾಯುತಿಯ ನಾಯಕರು ದೆಹಲಿಯಲ್ಲಿ ಸಭೆ ನಡೆಸಿದ್ದಾರೆ. ಗೃಹ ಸಚಿವ ಅಮಿತ್ ಶಾ ನಿವಾಸದಲ್ಲಿ ನಡೆದಿರುವ ಈ ಸಭೆಯಲ್ಲಿ ಮಹಾಯುತಿ ಮುಖ್ಯಮಂತ್ರಿಯನ್ನು ಆಯ್ಕೆ ಮಾಡಿದ್ದಾರೆ ಎನ್ನಲಾಗುತ್ತಿದೆ.
ಮಹಾಯುತಿ ಸಭೆ ಏಕಾಏಕಿ ರದ್ದು: ಸದ್ಯಕ್ಕಿಲ್ಲ ಮಹಾರಾಷ್ಟ್ರ ನೂತನ ಸಿಎಂ ಹೆಸರು ಘೋಷಣೆ
By Author AIN