ಬೆಳಗಾವಿ: ಸಚಿವ ಸಂಪುಟ ವಿಸ್ತರಣೆ ಹೈಕಮಾಂಡ್ ಮತ್ತು ಮುಖ್ಯಮಂತ್ರಿಗಳಿಗೆ ಬಿಟ್ಟ ವಿಚಾರ ಎಂದು ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಪ್ರತಿಕ್ರಿಯಿಸಿದ್ದಾರೆ. ಬೆಳಗಾವಿಯಲ್ಲಿ ಮಾತನಾಡಿದ ಅವರು, ನಾನು ಭವಿಷ್ಯಗಾರನಂತೂ ಅಲ್ಲವೇ ಅಲ್ಲ. ನನ್ನನ್ನು ಕೇಳಿದರೆ ಅದಕ್ಕೆ ಸರಿಯಾದ ಉತ್ತರ ಸಿಗುವದಿಲ್ಲ. ಅದಕ್ಕೆ ಮುಖ್ಯ ಮಂತ್ರಿ ಇದ್ದಾರೆ. ಹೈ ಕಮಾಂಡ್ ಇದೆ. ಅವರ ತೀರ್ಮಾನದ ಪ್ರಕಾರ ನಡೆಯುತ್ತದೆ. ಸಂಪುಟ ವಿಸ್ತರಣೆ ಅವರಿಗೆ ಬಿಟ್ಟ ವಿಚಾರವೆಂದರು. ಇದೇ ವೇಳೆ ನೀವೂ ಕೂಡ ಸಚಿವ ಸ್ಥಾನದ ಆಕಾಂಕ್ಷಿ ಅನ್ನುವ ಪ್ರಶ್ನೆಗೆ ಪ್ರತಿಕ್ರಿಯಿಸಿ, ನಿಮ್ಮ ಮನಸ್ಸಿನಲ್ಲಿ ಏನಿದೆ ಹೇಳಿ ನೀವು ಬೇಡಿಕೆ ಇಡು ಅಂದರೆ ಇಡುವೆ , ಬೇಡ ಅಂದರೆ ಬಿಡುವೆ, ಹೇಳಿ ಏನ್ ಮಾಡ್ಲಿ ಎಂದು ಮಾಧ್ಯಮದವರನ್ನು ಕೇಳಿದ್ದಾರೆ. ನೋಡೋಣ ನಮ್ಮ ಸರ್ಕಾರ ಮುಖ್ಯಮಂತ್ರಿಗಳು ಮತ್ತು ಪಕ್ಷದ ವರಿಷ್ಠರು ಈ ಭಾಗದ ಜನರ ಒತ್ತಾಸೆಯನ್ನು ಗಮನಕ್ಕೆ ತೆಗೆದುಕೊಳ್ಳಲಿ ಎಂದಿದ್ದಾರೆ.
ಮಂಡ್ಯ ಅಬಕಾರಿ ಅಧಿಕಾರಿಗಳ ಲಂಚಾವತಾರ ಪ್ರಕರಣ: ಸಚಿವ ಚಲುವರಾಯಸ್ವಾಮಿಗೂ ಕಾದಿದ್ಯಾ ಸಂಕಷ್ಟ..?
ಕಾಗವಾಡ ಮತಕ್ಷೇತ್ರದಲ್ಲಿ ಬಸವೇಶ್ವರ ಏತ ನೀರಾವರಿ ಯೋಜನೆ ನೆನೆಗುದಿಗೆ ಬಿದ್ದಿರುವ ವಿಚಾರವಾಗಿ ಕಾಗವಾಡ ಶಾಸಕ ರಾಜುಕಾಗೆ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ರಾಜು ಕಾಗೆ ಏನೂ ಆತ್ಮಹತ್ಯೆ ಮಾಡಿಕೊಳ್ಳುವ ಅಗತ್ಯ ಇಲ್ಲ. ಬಾಗಲಕೋಟೆ ಅಧಿಕಾರಿಗಳ ಜೊತೆಗೆ ಮಾತನಾಡಿದ್ದೇನೆ. ವಿದ್ಯುತ್ ಸರಬರಾಜು ವಿಚಾರವಾಗಿ ತಾಂತ್ರಿಕ ತೊಂದರೆ ಇತ್ತು. ಅದನ್ನು ಆದಷ್ಟು ಬೇಗ ಸರಿಪಡಿಸಿ ಮೊದಲ ಹಂತದ ಕಾಮಗಾರಿ ಅತಿಶೀಘ್ರದಲ್ಲಿ ಚಾಲನೆ ನೀಡುವ ಕೆಲಸ ಮಾಡುತ್ತೇವೆ ಎಂದರು.
ಇನ್ನೂ ಬೆಳಗಾವಿ ಜಿಲ್ಲೆಯ ವಿಭಜನೆ ಕುರಿತು ಮಾತನಾಡಿ, ಗೋಕಾಕ, ಚಿಕ್ಕೋಡಿ, ಅಥಣಿ ಜಿಲ್ಲೆ ಮಾಡುವದರಲ್ಲಿ ಯಾವುದೇ ತಪ್ಪಿಲ್ಲ. ಈ ಭಾಗದ ಜನರ ಆಶಯವನ್ನು ಮುಖ್ಯಮಂತ್ರಿ ಗಳ ಗಮನಕ್ಕೆ ತರುವ ಕೆಲಸ ಮಾಡುತ್ತೇನೆ ಎಂದರು.