ರಾಮನಗರ: ನಾನೂ ಸಚಿವ ಸ್ಥಾನ ನೀಡಿ ಎಂದು ನಾನು ಕೇಳಿಲ್ಲ, ಆದರೆ ಪಕ್ಷ ಜವಾಬ್ದಾರೆ ಕೊಟ್ಟರೆ ನಿಭಾಯಿಸುವೆ ಎಂದು ಶಾಸಕ ಸಿ.ಪಿ.ಯೋಗೇಶ್ವರ್ ಸಚಿವ ಸ್ಥಾನದ ಬಗ್ಗೆ ಪರೋಕ್ಷವಾಗಿ ಇಂಗಿತ ವ್ಯಕ್ತಪಡಿಸಿದ್ದಾರೆ. ಚನ್ನಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅವಕಾಶ ಸಿಕ್ಕಿದ್ರೆ ಜನಪರ ಕೆಲಸ ಮಾಡುತ್ತೇನೆ. ನನಗೆ ಸಚಿವ ಸ್ಥಾನ ಬೇಕೆಂದು ನಾನೇನೂ ಒತ್ತಾಯ ಮಾಡಿಲ್ಲ. ಆದರೆ ಪಕ್ಷ ಜವಾಬ್ದಾರಿ ಕೊಟ್ಟರೆ ನಿಭಾಯಿಸುತ್ತೇನೆ ಎಂದಿದ್ದಾರೆ. ರಾಜ್ಯ ಸರ್ಕಾರ ಹಾಲಿನ ದರ ಹೆಚ್ಚಳ ಮಾಡುವ ವಿಚಾರವಾಗಿ ಮಾತನಾಡಿ, ಚನ್ನಪಟ್ಟಣ ತಾಲೂಕು ಹಾಲು ಉತ್ಪಾದನೆಯಲ್ಲಿ ನಂಬರ್ 1 ಇದೆ. ಹಾಲಿನ ದರ ಹೆಚ್ಚಳ ಮಾಡಲು ಸಿದ್ದರಾಮಯ್ಯ ಗಮನಕ್ಕೆ ತಂದಿದ್ದೆ. ಹೀಗಾಗಿ ಚುನಾವಣೆ ಸಂದರ್ಭದಲ್ಲೂ ಗಮನ ಸೆಳೆದಿದ್ದೇನೆ. ಬೆಳಗಾವಿಯ ಅಧಿವೇಶನದಲ್ಲೂ ಹಾಲಿನ ದರ ಬಗ್ಗೆ ಪ್ರಸ್ತಾಪಿಸುವ 5 ರೂ. ಹೆಚ್ಚಳ ಮಾಡಲು ಸರ್ಕಾರಕ್ಕೆ ಮನವಿ ಮಾಡಿದ್ದೇನೆ ಎಂದರು.
ಸಿದ್ದರಾಮಯ್ಯ ಸಿಎಂ ಆಗಿ ಐದು ವರ್ಷ ಪೂರೈಸೋದು ಡೌಟು..? : ಸಿಎಂ ಆಪ್ತ ಹೊಸ ಬಾಂಬ್