ರಾಜಾ ರಾಣಿ’, ಹೂ ಮಳೆ ಮತ್ತು ಲಕ್ಷ್ಮಿ ನಿವಾಸ ಧಾರಾವಾಹಿಗಳಲ್ಲಿ ಮಿಂಚುತ್ತಿರುವ ಬಿಗ್ ಬಾಸ್ ಮಾಜಿ ಸ್ಪರ್ಧಿ ಚಂದನಾ ಅನಂತಕೃಷ್ಣ ಉದ್ಯಮಿ ಪ್ರತ್ಯಕ್ಷ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ನಟಿ ಲಲಿತಾಂಜಲಿ ಅವರ ಪುತ್ರ ಪ್ರತ್ಯಕ್ಷ್ ಹಾಗೂ ನಟಿ ಚಂದನಾ ಅನಂತಕೃಷ್ಣ ಅವರ ಮದುವೆ ಬೆಂಗಳೂರಿನಲ್ಲಿ ಅದ್ಧೂರಿಯಾಗಿ ನೆರವೇರಿದೆ.
ಬೆಂಗಳೂರಿನ ಚಾಮರಾಜ ಪೇಟೆಯಲ್ಲಿ ಇರುವ ಗುರು ನರಸಿಂಹ ಕಲ್ಯಾಣ ಮಂದಿರಲ್ಲಿ ಅದ್ಧೂರಿಯಾಗಿ ಹಿರಿಯರ ಸಮ್ಮುಖದಲ್ಲಿ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ. ಸಿನಿಮಾ ಹಾಗೂ ಕಿರುತೆರೆ ಸ್ನೇಹಿತರು ಮದುವೆಯಲ್ಲಿ ಭಾಗಿಯಾಗಿ ನವ ದಂಪತಿಗಳಿಗೆ ಶುಭ ಹಾರೈಸಿದ್ದಾರೆ.
ಚಂದನಾ, ಬಿಕಾಂ ಓದಿದ್ದು ರಾಜಾ ರಾಣಿ, ಮುದ್ದು ಮಣಿಗಳು ಸೀರಿಯಲ್ಗಳಲ್ಲಿ ಈ ಮೊದಲು ನಟಿಸಿದ್ದರು. ಬಿಗ್ ಬಾಸ್ ಸೀಸನ್ 7ರಲ್ಲಿ ಸ್ಫರ್ಧಿ ಕೂಡ ಆಗಿದ್ದರು.
ಪ್ರತ್ಯಕ್ಷ ಮೂಲತಃ ಚಿಕ್ಕಮಗಳೂರಿನವರು. ಎಂಟೆಕ್ ವಿದ್ಯಾಭ್ಯಾಸ ಮಾಡಿದ್ದು, ಸದ್ಯ ಬೆಂಗಳೂರಿನಲ್ಲೇ ಸ್ವಂತ ಉದ್ಯಮ ಹೊಂದಿದ್ದಾರೆ. ಸಿನಿಮಾ ಕುಟುಂಬದ ಹಿನ್ನಲೆ ಹೊಂದಿರುವ ಪ್ರತ್ಯಕ್ಷ, ನಟ ದಿವಂಗತ ಉದಯ್ ಹುತ್ತಿನಗದ್ದೆ ಹಾಗೂ ತಾಯಿ ಲಲಿತಾಂಜಲಿ ಉದಯ್ ಅವರ ಮಗ.
ನಟಿ ಚಂದನಾ ಅನಂತಕೃಷ್ಣ ಮತ್ತು ಪ್ರತ್ಯಕ್ಷ್ ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಮದುವೆ ದಿನಾಂಕ ಫಿಕ್ಸ್ ಆಗುವವರೆಗೂ ತಮ್ಮ ಪ್ರೀತಿ ವಿಚಾರವನ್ನು ಸೀಕ್ರೆಟ್ ಆಗಿಟ್ಟಿದ್ದರು ಎನ್ನಲಾಗಿದೆ.
ಚಂದನಾ ಮದುವೆಯ ದಿನವೇ ತಮ್ಮ ಪ್ರಿ ವೆಡ್ಡಿಂಗ್ ವಿಡಿಯೋ ಶೇರ್ ಮಾಡಿಕೊಂಡಿದ್ದರು. ಸ್ನೇಹಿತರು ಅವರ ಮೆಹೆಂದಿ, ಸಂಗೀತ ಕಾರ್ಯಕ್ರಮಗಳ ಫೋಟೋಗಳನ್ನು ಸೋಷಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದರು. ಈ ಆಚರಣೆಯಲ್ಲಿ ಕಿರುತೆರೆ ನಟ ನಟಿಯರು ಭಾಗಿಯಾಗಿದ್ದರು.