ಶಿವಮೊಗ್ಗ: ಶಿಕ್ಷಣ ಸಚಿವ ಮಧು ಬಂಗಾರಪ್ಪ ವಿರುದ್ಧ ಟ್ವಿಟರ್ ನಲ್ಲಿ ವ್ಯಕ್ತಿಯೂರ್ವ ಅವಾಚ್ಯ ಶಬ್ದಗಳಿಂದ ನಿಂದಿಸಿ ವಿಡಿಯೋ ಪೋಸ್ಟ್ ಮಾಡಿದ ಹಿನ್ನಲೆ ಆತನ ವಿರುದ್ಧ ವಿನೊಬನಗರ ಪೊಲೀಸರು ಸ್ವಯಂ ಪ್ರೇರಿತ ಕೇಸ್ ದಾಖಲಿಸಿದ್ದಾರೆ. ಮೋಹಿತ್ ನರಸಿಂಹ ಎಂಬಾತ ಶಿಕ್ಷಣ ಸಚಿವರಾದ ಮಧುಬಂಗಾರಪ್ಪ ವಿರುದ್ಧ ಅವಾಚ್ಯ ಶಬ್ದ ಗಳಿಂದ ನಿಂದಿಸಿ ಟ್ವಿಟರ್ ಹಾಗೂ ಇನ್ಸ್ಟಾ ಗ್ರಾಂ ನಲ್ಲಿ ಪೋಸ್ಟ್ ಒಂದನ್ನು ಹರಿ ಬಿಟ್ಟಿದ್ದಾನೆ.
ಈ ಹಳೆ ನಾಣ್ಯಗಳು, ನೋಟುಗಳು ನಿಮ್ಮ ಹತ್ರ ಇದ್ಯಾ.? ಹಾಗಿದ್ದರೆ ಒಂದೇ ರಾತ್ರೀಲಿ ಲಕ್ಷಾಧಿಪತಿ ಆಗ್ತಿರಾ!
ಇದರಿಂದಾಗಿ.ಸಚಿವರನ್ನು ಹಾಗು ಸಂವಿಧಾನಾತ್ಮಕ ಹುದ್ದೆಯಲ್ಲಿರುವ ವ್ಯಕ್ತಿಯನ್ನು ಉದ್ದೇಶಿಸಿ, ಏಕವಚನದಲ್ಲಿ, ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿ ಸರ್ಕಾರದ ಘನತೆಗೆ ಧಕ್ಕೆ ತಂದಿದ್ದು ಹಾಗೂ ಸರ್ಕಾರದ ಯೋಜನೆಯ ವಿರುದ್ಧವಾಗಿ ಸುಳ್ಳು, ಮಾಹಿತಿಯನ್ನು ಪ್ರಸಾರ ಮಾಡಲಾಗಿದೆ ಎಂದು ಪೊಲೀಸರು ದೂರು ದಾಖಲಿಸಿದ್ದಾರೆ