ಬೆಂಗಳೂರು: ಹೈಕೋರ್ಟ್ ನಲ್ಲಿ ರೇಣುಕಾಸ್ವಾಮಿ ಕೊಲೆ ಆರೋಪಿ ದರ್ಶನ್ ಪವಿತ್ರಾಗೌಡ ಸೇರಿದಂತೆ 6 ಜನರ ಜಾಮೀನು ಅರ್ಜಿ ವಿಚಾರಣೆ ಶುರುವಾಗಿದೆ. ದರ್ಶನ್ ಪರ ಎರಡನೇ ದಿನ ವಾದ ಮುಂದುವರಿಸಿದ ಹಿರಿಯ ವಕೀಲ ಸಿ ವಿ ನಾಗೇಶ್ ತಮ್ಮ ಖಡಕ್ ವಾದ ಮುಂದುವರೆಸಿದ್ರು. ಹಾಗಾದ್ರೆ ಸಿವಿ ನಾಗೇಶ್ ವಾದದಲ್ಲಿ ಏನೆಲ್ಲಾ ಅಂಶಗಳನ್ನು ಉಲ್ಲೇಖಿಸಿ ವಾದ ಮಾಡಿದ್ರು ಅನ್ನೋ ಡಿಟೇಲ್ ರಿಪೋರ್ಟ್ ತೋರಿಸ್ತೀವಿ ನೋಡಿ..
ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಆರೋಪಿಯಾಗಿರುವ ನಟ ದರ್ಶನ್ ಜಾಮೀನು ಅರ್ಜಿ ವಿಚಾರಣೆ ಹೈಕೋರ್ಟ್ನ ನ್ಯಾಯಮೂರ್ತಿ ವಿಶ್ವಜಿತ್ ಶೆಟ್ಟಿ ಪೀಠದ ಮುಂದೆ ನಡೆಯಿತು. ಸದ್ಯಕ್ಕೆ ನಟ ದರ್ಶನ್ ಮಧ್ಯಂತರ ಜಾಮೀನು ಪಡೆದು ಹೊರಗೆ ಬಂದಿದ್ದಾರೆ.ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದೀಗ ನಟ ದರ್ಶನ್ ಪರವಾಗಿ ಹಿರಿಯ ವಕೀಲ ಸಿವಿ ನಾಗೇಶ್ ತಮ್ಮ ವಾದ ವನ್ನು ಮುಂದುವರೆಸಿದ್ರು. ಮಂಗಳವಾರ ವಾದ ಮಂಡನೆ ಪ್ರಾರಂಭಿಸಿದ್ದ ಸಿವಿಎನ್ ಅವರು 1 ಗಂಟೆಗಳ ಕಾಲ ವಾದ ಮಂಡಿಸಿದ್ರು. ಪೊಲೀಸರು ಕೊಟ್ಟ ಸಾಕ್ಷಿಗಳು ಸರಿಯಿಲ್ಲ.
ಕೆಲವೆಡೆ ಹೇಳಿಕೆ ತಿರುಚಲಾಗಿದೆ ಎಂದು ವಾದ ಮಂಡಿಸಿದ್ರು. ವಿಚಾರಣೆ ಆರಂಭವಾಗ್ತಿದ್ದಂತೆ ದರ್ಶನ್ ಪರ ವಕೀಲರಾದ ಸಿವಿ ನಾಗೇಶ್ ಅವರು ರೇಣುಕಾಸ್ವಾಮಿ ಕೇಸ್ನ ಹೈ-ವಿಟ್ನೆಸ್ಗಳ ಸ್ವಇಚ್ಚಾ ಹೇಳಿಕೆಗಳನ್ನು ಓದಿದ್ರು. ಇಬ್ಬರು ಸಾಕ್ಷಿಗಳ ಹೇಳಿಕೆ ನೋಡಿದ್ರೆ ಅವರು ಘಟನಾ ಸ್ಥಳದಲ್ಲೇ ಇರಲಿಲ್ಲ ಎನ್ನುವ ಅನುಮಾನ ಮೂಡಿದೆ ಎಂದಿದ್ದಾರೆ. ಕೆಲ ಸಾಕ್ಷಿಗಳ ಹೇಳಿಕೆಗಳು ಸಮಂಜಸವಾಗಿಲ್ಲ.
ಈ ಹಳೆ ನಾಣ್ಯಗಳು, ನೋಟುಗಳು ನಿಮ್ಮ ಹತ್ರ ಇದ್ಯಾ.? ಹಾಗಿದ್ದರೆ ಒಂದೇ ರಾತ್ರೀಲಿ ಲಕ್ಷಾಧಿಪತಿ ಆಗ್ತಿರಾ!
ಕಾರು ಬಂತು-ಹೋಯ್ತು ಎನ್ನುವ ರೀತಿ ಇದೆ. ಯಾವಾಗ, ಯಾರು ಬಂದರು? ಯಾರು ಇದ್ದರೂ ಅಂತ ಹೇಳಿಲ್ಲ. ಸಾಕ್ಷಿಯಾಗಿರುವ ಮಲ್ಲಿಕಾರ್ಜುನ ಅವರು ಮಂಗಳವಾರ ಕೆಲಸಕ್ಕೆ ಬಂದಾಗ ರೇಣುಕಾಸ್ವಾಮಿ ಕೊಲೆ ಆಗಿರೋದರ ಬಗ್ಗೆ ಗೊತ್ತಾಗಿದೆ ಅಂತಾರೆ. ಯಾರು ಕೊಲೆ ಮಾಡಿದ್ರು ಅನ್ನೋದು ಮಾಧ್ಯಮಗಳ ಮೂಲಕ ಗೊತ್ತಾಯಿತು ಅಂದಿದ್ದಾರೆ. ಸಾಕ್ಷಿಗಳು ಸರಿಯಾಗಿಲ್ಲ ಎಂದು ಸಿವಿ ನಾಗೇಶ್ ವಾದ ಮಂಡಿಸಿದ್ರು.
ಇನ್ನು ಪ್ರತ್ಯಕ್ಷದರ್ಶಿ ಮಧುಸೂದನ್ ಹೇಳಿಕೆ ಆಧರಿಸಿ ಸಿವಿ ನಾಗೇಶ್ ವಾದ ಮಂಡಿಸಿದ ಸಿವಿಎನ್ ಜೂನ್ 15 ರಂದು ಹೇಳಿಕೆ ದಾಖಲಿಸಲಾಗಿದೆ. ಕೆಲ ಕಾರು ಬರುತ್ತವೆ. ಅದರಲ್ಲಿ ದರ್ಶನ್ ಸರ್ ಇರ್ತಾರೆ. ಅಲ್ಲಿಗೆ ಹೋಗ್ಬೇಡಿ ಎಂದಿದ್ದೆ. ನಂತರ ಸಂಜೆ ಮನೆಗೆ ಹೋಗಿದ್ದೆ ಎಂದು ಮಧುಸೂದನ್ ಹೇಳಿಕೆ ನೀಡಿದ್ದಾರೆ. ಆದ್ರೆ ಆತ 10ನೇ ತಾರೀಖು ಕೊಲೆ ಬಗ್ಗೆ ಮೊಬೈಲ್ ನಲ್ಲಿ ನೋಡಿ ತಿಳಿದುಕೊಂಡೆ ಅಂದಿದ್ದಾರೆ ಎಂದು ನಾಗೇಶ್ ಹೇಳಿದ್ರು. ಇನ್ನು ಪ್ರಮುಖ ಪ್ರ್ಯಕ್ಷದರ್ಶಿ ಪುನೀತ್ ಹೇಳಿಕೆಯನ್ನೂ ನಂಬುವಂತೆ ಇಲ್ಲ. ಪುನೀತ್ ಹೇಳಿಕೆಯಲ್ಲಿ ನಾನು ಅಲ್ಲಿದ್ದೆ, ಇಲ್ಲಿದ್ದೆ, ತಿರುಪತಿ ಹೋಗಿದ್ದೇ ಫುಟ್ ಪಾತ್ ಮೇಲೆ ಮಲಗಿದ್ದೆ ಎಂದಿದ್ದಾನೆ. ತಮಿಳುನಾಡಿಗೆ ಹೋಗಿದ್ದೆ,
ಅದು-ಇದು ಅಂತ ಹೇಳಿದ್ದಾನೆ. ಬಳಿಕ ಜೂನ್ 19 ರಂದು ನಾನು ಬೆಂಗಳೂರಿಗೆ ವಾಪಸ್ ಬಂದೆ ಅಂದಿದ್ದಾನೆ. ಯಾಕೆ ಸುತ್ತಾಡ್ತಾ ಇದ್ದೆ ಅಂದ್ರೆ ಹೆದರಿಕೆ ಹಾಕ್ತಾ ಇತ್ತು ಅಂತಾರೆ. ಸಾಕ್ಷಿಗೆ ಯಾಕೆ ಹೆದರಿಕೆ ಆಗುತ್ತೆ? ಇದೆಲ್ಲ ನಂಬೋ ತರ ಇದೆಯಾ? ಪುನೀತ್ ಗೋವಾಗೆ ಹೋಗಲು ಟಿಕೆಟ್ ಬುಕ್ ಆಗಿರೋದು ಜೂನ್ 21, ಆದರೆ ರೇಣುಕಾಸ್ವಾಮಿ ಕೊಲೆ ಆಗಿರೋದು ಜೂನ್ 8, ಆದರೆ ಪುನೀತ್ ಗೋವಾಗೆ ಹೋಗಿದ್ದು ಜೂನ್ 11 ರಂದು, ಆತ ಹೆದರಿಕೊಂಡು ಗೋವಾಗೆ ಹೋಗಿಲ್ಲ. ಗೋವಾಗೆ ಹೇಗೋ ಫ್ಲಾನ್ ಮೊದಲೇ ಇತ್ತು ಎಂದು ನಾಗೇಶ್ ವಾದ ಮಾಡಿದ್ರು. ಬಳಿಕ ಪುನೀತ್ ಮೊಬೈಲ್ ನಲ್ಲಿ ರಿಟ್ರೀವ್ ಆದ ಪೋಟೋ ವನ್ನು ಜಡ್ಜ್ ಗೆ ನೀಡಿದ್ರು.
ತಮ್ಮ ಖಡಕ್ ವಾದ ಮುಂದುವರೆಸಿದ ಸಿವಿನಾಗೇಶ್ ಸಾಕ್ಷಿಗಳ ಹೇಳಿಕೆಯನ್ನು ಪೊಲೀಸರು ಬಹಳ ತಡವಾಗಿ ಪಡೆದಿದ್ದಾರೆ. ಪ್ರತ್ಯಕ್ಷ ದರ್ಶಿಯ ಹೇಳಿಕೆ ವಿಳಂಬದಿಂದ ಜಾಮೀನು ಕೊಟ್ಟ ಹಲವು ಪ್ರಕರಣಗಳಿವೆ. ಕೇಸ್ ಡೈರಿಯಲ್ಲಿ ಹೇಳಿಕೆ ನಮೂದಿಸಬೇಕಿರುವ ಅಗತ್ಯತೆ ಪ್ರಕ್ರಿಯೆಗಳ ಬಗ್ಗೆ ಸುಪ್ರೀಂಕೋರ್ಟ್ ತೀರ್ಪಿದೆ. ಸಿಆರ್ಪಿಸಿ 167 ಅಥವಾ 172 ಅಡಿಯಲ್ಲಿ ಪ್ರಕ್ರಿಯೆ ಪಾಲಿಸಬೇಕು. ಕೋಕಾ. ಯುಎಪಿಎ, ಎನ್ಐಎ ಕಾಯ್ದೆಯಡಿಯಲ್ಲಿ ಮಾತ್ರ ವಿನಾಯಿತಿ ಇದೆ. ಈ ಕೇಸ್ ಗಳಲ್ಲಿ ವಿನಾಯಿತಿ ಇಲ್ಲ ಆದರೆ ಪೊಲೀಸರು ಕೇಸ್ ದೈರಿಯನ್ನು ಸರಿಯಾಗಿ ನಮೂದು ಮಾಡಿಲ್ಲ .
ಪ್ರತ್ಯಕ್ಷ ಸಾಕ್ಷಿಯ ಹೇಳಿಕೆಗಳಲ್ಲಿ ವೈರುಧ್ಯಗಳಿವೆ. ಮರ್ಮಾಂಗಕ್ಕೆ ಹೊಡೆದ ಬಗ್ಗೆ ಮತ್ತೊಂದು ಹೇಳಿಕೆಯಲ್ಲಿ ಉಲ್ಲೇಖವಿಲ್ಲ. 161 ಹೇಳಿಕೆಗೂ, 164 ಹೇಳಿಕೆಗೂ ವ್ಯತ್ಯಾಸಗಳಿವೆ. 161 ಹೇಳಿಕೆ ಪಡೆದಾಗ ಕೇಸ್ ಡೈರಿಯಲ್ಲಿ ಎಂಟ್ರಿ ಮಾಡಬೇಕು. ಅದರ ಪ್ರತಿಯನ್ನು ಮ್ಯಾಜಿಸ್ಟ್ರೇಟ್ಗೆ ನೀಡಬೇಕು. ಈ ಪ್ರಕ್ರಿಯೆಗಳನ್ನು ತನಿಖಾಧಿಕಾರಿ ಪಾಲಿಸಿಲ್ಲ. ಮೊದಲ ರಿಮಾಂಡ್ ಅರ್ಜಿಗಳಲ್ಲಿ ಸಾಕ್ಷಿಗಳ ಹೇಳಿಕೆ ಉಲ್ಲೇಖವಿಲ್ಲ. ಜೂನ್ 22ರ ರಿಮಾಂಡ್ ಅರ್ಜಿಯಲ್ಲಿ ಮಾತ್ರ ಉಲ್ಲೇಖವಿದೆ. ಪ್ರಕರಣದಲ್ಲಿ ಪ್ರತ್ಯಕ್ಷ, ಪರೋಕ್ಷ ಸಾಕ್ಷಿದಾರರ ಹೆಸರುಗಳನ್ನು ನಮೂದಿಸಿಲ್ಲ. ಈ ಎಲ್ಲಾ ಕಾರಣಗಳಿಂದ ಎ 2 ದರ್ಶನ್ ಗೆ ಜಾಮೀನು ಮಂಜೂರು ಮಾಡಲು ಮನವಿ ಮಾಡಿ ಸಿವಿ ನಾಗೇಶ್ ತಮ್ಮ ವಾದ ಮುಗಿಸಿದ್ರು.
ಸಿವಿ ನಾಗೇಶ್ ವಾದ ಮುಗಿಸಿದ ಬಳಿಕ ನ್ಯಾಯಾಧೀಶರು ನಟ ದರ್ಶನ್ ಚಿಕಿತ್ಸೆ ಬಗ್ಗೆ ಪ್ರಶ್ನೆ ಮಾಡಿದ್ರು. ಮಧ್ಯಂತರ ಜಾಮೀನು ಕಥೆ ಏನಾಯ್ತು? ಅಪರೇಷನ್ ಆಯ್ತ? ಎಂದು ವಕೀಲರನ್ನು ಜಡ್ಜ್ ಪ್ರಶ್ನೆ ಮಾಡಿದ್ರು. ಇದಕ್ಕೆ ಉತ್ತರಿಸಿದ ವಕೀಲ ಸಿವಿ ನಾಗೇಶ್, ದರ್ಶನ್ಗೆ ವೈದ್ಯರು ಟ್ರೀಟ್ಮೆಂಟ್ ಕೊಡ್ತಾ ಇದ್ದಾರೆ. ಶಸ್ತ್ರಚಿಕಿತ್ಸೆ ಅಗತ್ಯವಿದೆ ಅಂತ ಹೇಳಿದ್ದಾರೆ ಎಂದ್ರು.ಯಾವಾಗ ಆಪರೇಷನ್ ಅನ್ನೋದು ವರದಿಯಲ್ಲಿ ಇಲ್ಲ ಎಂದು ಜಡ್ಜ್ ಮತ್ತೆ ಪ್ರಶ್ನೆ ಮಾಡಿದ್ರು. ಬಿ ಪಿ ವೇರಿಯೇಷನ್ ಇದೆ, ನಾರ್ಮಲ್ ಬಂದ ಬಳಿಕ ವೈದ್ಯರು ಅಪರೇಷನ್ ಮಾಡಲಿದ್ದಾರೆ ಎಂದು ವಕೀಲ ನಾಗೇಶ್ ಕೋರ್ಟ್ಗೆ ತಿಳಿಸಿದ್ರು..
ಇನ್ನು ದರ್ಶನ್ ಮ್ಯಾನೇಜರ್ ನಾಗರಾಜ್ ಪರ ಅವರು ವಾದ ಮಂಡಿಸಿದ ವಕೀಲ ಸಂದೇಶ್ ಚೌಟ ಆರೋಪಿಗಳಿಗೆ ಗ್ರೌಂಡ್ಸ್ ಆಫ್ ಅರೆಸ್ಟ್ ನೀಡಿಲ್ಲ. ಬಂಧನಕ್ಕೆ ಕಾರಣಗಳನ್ನು ನೀಡದಿರುವುದು ಗಂಭೀರ ಪ್ರಮಾದ. ಈ ಕಾರಣಕ್ಕೆ ಜಾಮೀನು ನೀಡಬೇಕೆಂದು ವಾದ ಮಾಡಿದ್ರು. ಸದ್ಯಕ್ಕೆ ದರ್ಶನ್ ಸೇರಿ 6 ಆರೋಪಿಗಳ ಜಾಮೀನು ಅರ್ಜಿ ವಿಚಾರಣೆ ನ್ಯಾಮೂರ್ತಿಗಳು ಇಂದಿಗೆ ಮುಂದೂಡಿಕೆ ಮಾಡಲಾಗಿದೆ.