ಬಟರ್ ಫ್ರೂಟ್ ಭಾರತದಲ್ಲಿ ಈ ಹಣ್ಣನ್ನು ಶ್ರೀಲಂಕಾದಿಂದ ಪರಿಚಯಿಸಲ್ಪಟ್ಟಿತು ಎನ್ನಲಾಗಿದೆ. ಸದ್ಯ ಕರ್ನಾಟಕ, ತಮಿಳುನಾಡು, ಕೇರಳ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಈ ಬಟರ್ ಫ್ರೂಟ್ನ್ನು ಬೆಳೆಯಲಾಗುತ್ತದೆ.
IPL 2025: RCB ಮಾಜಿ ಆಟಗಾರನ ಪತ್ನಿ ಸಿನಿ ರಂಗಕ್ಕೆ ಎಂಟ್ರಿ! ಹೀರೋ ಯಾರು!?
ಪಿಯರ್ ಹಣ್ಣಿನ ಆಕಾರದಲ್ಲಿರುವ ಈ ಹಣ್ಣು ಮೆಕ್ಸಿಕೊ ದೇಶದಲ್ಲಿ ಹೆಚ್ಚು ಕಂಡು ಬರುತ್ತದೆ. ಸಾಮಾನ್ಯವಾಗಿ ಈ ಹಣ್ಣನ್ನು ಮಿಲ್ಕ್ ಶೇಕ್ ಮಾಡಿ ಕುಡಿಯುವವರೇ ಹೆಚ್ಚು, ಆದರೆ ಈ ಹಣ್ಣಿನಲ್ಲಿರುವ ಆರೋಗ್ಯಕಾರಿ ಗುಣಗಳ ಬಗ್ಗೆ ಹಲವರಿಗೆ ತಿಳಿದಿಲ್ಲ. ಬಟರ್ ಫ್ರೂಟ್ ಹಣ್ಣಿನಿಂದ ಸಿಗುವ ಕೆಲ ಪ್ರಯೋಜನಗಳನ್ನು ಇಲ್ಲಿ ತಿಳಿಸಲಾಗಿದೆ
ಬಟರ್ ಫ್ರೂಟ್ ಹಣ್ಣನ್ನು ನಿತ್ಯವು ಸೇವಿಸುವುದರಿಂದ ಅನೇಕ ರೀತಿಯ ಆರೋಗ್ಯ ಪ್ರಯೋಜನಗಳಿವೆ. ಇದನ್ನು ನಿಸರ್ಗವೇ ನಮಗೆ ನೀಡಿದ ಶ್ರೇಷ್ಠ ಬೆಣ್ಣೆ ಎಂದೇ ಗುರುತಿಸಲಾಗುತ್ತದೆ. ಇದನ್ನು ಜೀವಪೋಷಕಗಳ, ಜೀವಸತ್ವಗಳ ಶಕ್ತಿ ಕೇಂದ್ರ ಅಂತಲೇ ಕರೆಯುತ್ತಾರೆ. ಪ್ರತಿದಿನವೂ ಒಂದು ಹಣ್ಣನ್ನು ಸೇವಿಸುವುದರಿಂದ ಆಗಲಿರುವ ಆರೋಗ್ಯದ ಪ್ರಯೋಜನಗಳು ಮಾತ್ರ ನೂರಾರು.
ಹೃದಯದ ಆರೋಗ್ಯವನ್ನು ಸದೃಢವಾಗಿ ಇಡುವುದರೊಂದಿಗೆ ಚರ್ಮದ ಕಾಂತಿಗೆ ಚೈತನ್ಯ ನೀಡುವುವರೆಗೂ ಇದರ ಪ್ರಯೋಜನಗಳಿವೆ. ವಿಟಮಿನ್ ಮಿನರಲ್ಗಳ ಪ್ಯಾಕ್ ಇದು ಎಂದು ಕೂಡ ಇದನ್ನು ಕರೆಯಲಾಗುತ್ತದೆ. ನಮ್ಮ ಆಹಾರ ಕ್ರಮದಲ್ಲಿ ಇದನ್ನೂ ಕೂಡ ಮೀಸಲಿಟ್ಟಿದ್ದೇ ಆದಲ್ಲಿ ನಾವು ಅನೇಕ ಸಮಸ್ಯೆಗಳನ್ನು ದೂರ ಮಾಡಿಕೊಳ್ಳಬಹುದು. ಅದರಲ್ಲೂ ಈ 8 ಪ್ರಯೋಜನಗಳು ನಮಗೆ ಆಗಲಿವೆ. ಇದರಲ್ಲಿ ಹೆಚ್ಚು ಮೊನೊಸ್ಯಾಚುರೆಟೆಡ್ ಫ್ಯಾಟ್ ಹಾಗೂ ಪ್ರಮುಖವಾಗಿ ಇದರಲ್ಲಿ ಒಲೈಕ್ ಆ್ಯಸಿಡ್ ಇರುವುದರಿಂದ ದೇಹದಲ್ಲಿರುವ ಕೆಟ್ಟ ಕೊಬ್ಬನ್ನು ಕರಗಿಸುವಲ್ಲಿ ಇದು ಬಹುದೊಡ್ಡ ಪಾತ್ರವನ್ನು ವಹಿಸುತ್ತದೆ. ಬೆಣ್ಣೆ ಹಣ್ಣಿನಿಂದ ಆಗುವ ಪ್ರಮುಖ 8 ಪ್ರಯೋಜನಗಳನ್ನು ನೋಡುವುದಾದ್ರೆ.
ಬೆಣ್ಣೆ ಹಣ್ಣಿನಲ್ಲಿ ಅತಿಹೆಚ್ಚು ಫೈಬರ್ ಅಂಶ ಇರುವುದರಿಂದ ಇದು ಜೀರ್ಣಕ್ರಿಯೆಗೆ ತುಂಬಾ ಸಹಾಯಕಾರಿ. ಅದು ಮಾತ್ರವಲ್ಲ ಇದನ್ನು ತಿನ್ನುವುದರಿಂದ ಹೆಚ್ಚು ಕಾಲದವರೆಗೆ ಹೊಟ್ಟೆ ತುಂಬಿದ ಅನುಭವ ಬರುವುದರಿಂದ ಬೇಕಾಬಿಟ್ಟಿ ಸ್ನ್ಯಾಕ್ಸ್ ತಿನ್ನುವುದರಿಂದ ನಾವು ದೂರ ಉಳಿಯಬಹುದು. ಒಂದು ಸಾಧಾರಣ ಗಾತ್ರದ ಬೆಣ್ಣೆ ಹಣ್ಣಿನಲ್ಲಿ 10 ಗ್ರಾಂ ಫೈಬರ್ ಅಂಶ ಇರುತ್ತದೆ. ಇದರಿಂದ ಪಚನಕ್ರಿಯೆಯು ಸರಳಗೊಂಡು ಸಣ್ಣ ಕರುಳಿನಲ್ಲಿ ಸೃಷ್ಟಿಯಾಗುವ ಸೂಕ್ಷ್ಮಜೀವಿಗಳಿಂದ ಕಾಪಾಡುತ್ತದೆ.ಅದರ ಜೊತೆಗೆ ಹೆಚ್ಚು ಉತ್ತಮ ಕೊಬ್ಬಿನಂಶವನ್ನು ಇದು ಹೊಂದಿರುವುದರಿಂದ ಅದನ್ನು ದೇಹವು ಸರಳವಾಗಿ ಹೀರಿಕೊಳ್ಳಲು ಸಹಾಯಕವಾಗುತ್ತದೆ.
ಬೆಣ್ಣೆ ಹಣ್ಣನ್ನು ಸೌಂದರ್ಯವರ್ಧಕ ಹಣ್ಣು ಎಂದರೆ ತಪ್ಪಾಗಲಿಕ್ಕಿಲ್ಲ. ಯಾಕಂದ್ರೆ ದೇಹದ ಸೌಂದರ್ಯವನ್ನು ಕೂಡ ಅದು ವೃದ್ಧಿಸುತ್ತದೆ. ಇದರಲ್ಲಿ ಆ್ಯಂಟಿ ಆಕ್ಸಿಡೆಂಟ್ಗಳು ಜಾಸ್ತಿ ಇರುವುದರಿಂದ ಹಾಗೂ ಈ ಹಣ್ಣು ಹೆಚ್ಚು ವಿಟಮಿನ್ ಇ ಮತ್ತು ಸಿ ಇರುವುದರಿಂದ ಈ ಜೀವಪೋಷಕಗಳು ತ್ವಚೆ ಯಲ್ಲಿ ತೇವಾಂಶವನ್ನು ಹೆಚ್ಚಿಸಿ ಅದರ ಸೌಂದರ್ಯವನ್ನು ಇಮ್ಮಡಿಗೊಳಿಸುತ್ತದೆ ಇದರ ಜೊತೆಗೆ ತ್ವಚೆಗಳಿಗೆ ಉಂಟಾಗುವ ಸಾಮಾನ್ಯ ಹಾನಿಗಳನ್ನು ನಿವಾರಸುತ್ತದೆ. ಅದು ಮಾತ್ರವಲ್ಲ. ಇದರಲ್ಲಿರುವ ಬಯೋಟಿನ್ ಕೂದಲಿನ ಬೇರನ್ನು ಗಟ್ಟಿಗೊಳಿಸಿ ಅವುಗಳಿಗೆ ಹೊಳಪು ಬರುವಂತೆ ಹಾಗೂ ಸಿಲ್ಕಿ ಆಗುವಂತೆ ಮಾಡುತ್ತದೆ.
ಬೆಣ್ಣೆ ಹಣ್ಣಿನಲ್ಲಿ ಲ್ಯೂಟೈನ್ ಮತ್ತು ಜಿಯಾಕ್ಸಾತಿನ್ ಎಂಬ ಎರಡು ಆ್ಯಂಟಿಆಕ್ಸಿಡೆಂಟ್ಸ್ಗಳು ಇರುವುದರಿಂದ ಇವು ಕಣ್ಣಿನ ಆರೋಗ್ಯಕ್ಕೆ ತುಂಬಾ ಸಹಾಯಕಾರಿ. ಇವು ಕಣ್ಣನ್ನು ಬ್ಲ್ಯೂ ಲೈಟ್ಗಳಿಂದ ಆಗುವ ಹಾನಿಗಳಿಂದ ತಪ್ಪಿಸಿ ಕಣ್ಣಿನ ಆರೋಗ್ಯವನ್ನು ವೃದ್ಧಿಸುತ್ತವೆ. ಪ್ರಮುಖವಾಗಿ ಹಿರಿಯ ನಾಗರಿಕರು ಇದನ್ನು ಸೇವಿಸುವುದರಿಂದ ಕಣ್ಣಿನ ಪೊರೆಯಂತ ಸಮಸ್ಯೆಗಳಿಂದ ದೂರ ಇರಬಹುದು.
ಸಕ್ಕರೆ ಕಾಯಿಲೆಯನ್ನು ನಿಯಂತ್ರಿಸುವಲ್ಲಿ ಈ ಬೆಣ್ಣೆ ಹಣ್ಣು ದೊಡ್ಡ ಪಾತ್ರವಹಿಸುತ್ತದೆ. ಇದರಲ್ಲಿ ಇಗಾಗಲೇ ಹೇಳಿದಂತೆ ಹೇರಳವಾಗಿ ಫೈಬರ್ ಹಾಗೂ ಆರೋಗ್ಯಕರ ಕೊಬ್ಬಿನ ಅಂಶವಿರುವುದರಿಂದ ರಕ್ತದಲ್ಲಿ ಬೇಗ ಗ್ಲೂಕೋಸ್ ಅಂಶ ಬಿಡುಗಡೆಯಾಗದಂತೆ ತಡೆಯುತ್ತದೆ. ಇದರಲ್ಲಿ ಮ್ಯಾಗ್ನೆಶಿಯಂ ಹಾಗೂ ಪೋಟ್ಯಾಶಿಯಂನಂತಹ ಖನಿಜಾಂಶಗಳು ಇರುವುದರಿಂದ ಇದು ಇನ್ಸುಲಿನ್ ಫಂಕ್ಷನ್ಗೆ ಸಪೋರ್ಟ್ ಮಾಡುತ್ತದೆ.
ದಿನಕ್ಕೆ ಒಂದು ಬೆಣ್ಣೆ ಹಣ್ಣನ್ನು ತಿನ್ನುವುದರಿಂದ ನಮ್ಮ ದೇಹದ ಎಲುಬುಗಳು ಶಕ್ತಿಯನ್ನು ಹೆಚ್ಚಿಸುತ್ತವೆ. ಇದು ವಿಟಮಿನ್ ಕೆ ಆಗರ ಆಗಿರುವುದರಿಂದ ಮ್ಯಾಗ್ನೆಶಿಯಂ ಪೋಟ್ಯಾಶಿಯಂನಂತಹ ಖನಿಜಾಂಶಗಳು ಇದರಲ್ಲಿ ಇರುವುದರಿಂದ ಇದು ಹೆಚ್ಚು ಹೆಚ್ಚು ದೇಹಕ್ಕೆ ಕ್ಯಾಲ್ಸಿಯಂನ್ನು ನೀಡುತ್ತದೆ ಇದರಿಂದ ನಮ್ಮ ದೇಹದ ಎಲುಬುಗಳು ಗಟ್ಟಿಯಾಗುತ್ತವೆ ಹಾಗೂ ಶಕ್ತಿಶಾಲಿ ಆಗುತ್ತವೆ.
ಬೆಣ್ಣೆ ಹಣ್ಣನ್ನು ಮೆದುಳಿನ ಕಾರ್ಯಕ್ಷಮತೆಯನ್ನು ಹೆಚ್ಚಿಸುವ ಶಕ್ತಿಕೇಂದ್ರ ಎಂದು ಹೇಳಲಾಗುತ್ತದೆ. ಈಗಾಗಲೇ ಹೇಳಿದಂತೆ ಆ್ಯಂಟಿಆಕ್ಸಿಡಂಟ್ಸ್, ಆರೋಗ್ಯಕರ ಕೊಬ್ಬು ಮತ್ತು ಫೊಲ್ಯಾಟ್ ಅಂಶ ಇದರಲ್ಲಿ ಇರುವುದರಿಂದ ಈ ಎಲ್ಲಾ ಅಂಶಗಳು ದೇಹದಲ್ಲಿ ಸರಿಯಾಗಿ ರಕ್ತಪರಿಚಲನೆ ಆಗುವಂತೆ ನೋಡಿಕೊಳ್ಳುತ್ತದೆ. ಇದು ನೇರವಾಗಿ ಮೆದುಳಿ ಆರೋಗ್ಯದ ಮೇಲೆ ಹಾಗೂ ಅದರ ಕಾರ್ಯಕ್ಷಮತೆಯ ಮೇಲೆ ಧನಾತ್ಮಕ ಪರಿಣಾಮ ಬೀರುತ್ತದೆ. ಇದು ಮೆದುಳಿನ ಕಾರ್ಯಕ್ಷಮತೆಗೆ ಹೆಚ್ಚು ಶಕ್ತಿ ತುಂಬುತ್ತದೆ. ಇದರಲ್ಲಿ ಫೊಲ್ಯಾಟ್ ಅಂಶ ಹೆಚ್ಚು ಇರುವುದರಿಂದ ಡಿಪ್ರೆಶನ್ನಂತಹ ಸಮಸ್ಯೆಗಳಿಂದ ಕಾಪಾಡುತ್ತದೆ.
ವಿಪರೀತ ಉರಿಯೂತ ಅನೇಕ ಆರೋಗ್ಯ ಸಮಸ್ಯೆಗಳಿಗೆ ನಾಂದಿ ಹಾಡುತ್ತದೆ. ಹೃದಯ ಸಂಬಂಧಿ ಕಾಯಿಲೆ, ಸಂಧಿವಾತ ಹಾಗೂ ಕ್ಯಾನ್ಸರ್ನಂತಹ ಸಮಸ್ಯೆಗಳು ಬರುತ್ತವೆ. ಬಟರ್ ಫ್ರೂಟ್ನಲ್ಲಿರುವಂತಹ ಆಂಟಿಆಕ್ಸಿಡೆಂಟ್ ಅಂಶಗಳು ದೇಹದಲ್ಲಿ ಉರಿಯೂತ ಸೃಷ್ಟಿಯಾಗದಂತೆ ಕಾಪಾಡುತ್ತದೆ.