ರಾಜಧಾನಿ ಬೆಂಗಳೂರಿನಲ್ಲಿ ಕಳೆದ ನಾಲ್ಕೈದು ದಿನಗಳಿಂದ ಬೆಳಿಗ್ಗೆ, ಸಂಜೆಯಾದ್ರೆ ಸಾಕು ಚುಮು ಚುಮು ಚಳಿ ಹೆಚ್ಚಾಗಿದ್ದು. ಎಲ್ಲಿ ನೋಡಿದ್ರು ಸ್ವೆಟರ್ ಹಾಕಿಕೊಂಡು ಓಡಾಡುವ ಪರಿಸ್ಥಿತಿ ಎದುರಾಗಿದೆ. ಹಾಗಾದರೆ, ಈ ಬಾರಿಯ ಚಳಿಗಾಲ ಹೇಗಿರುತ್ತೆ ಅಂತೀರಾ ಈ ಸ್ಟೋರಿ ನೋಡಿ.
IPL Auction: ನಾಳೆ ಮೆಗಾ ಹರಾಜು: ಸಮಯ, ತಂಡಗಳ ಪರ್ಸ್, ನೇರಪ್ರಸಾರ ಮಾಹಿತಿ!
ರಾಜಧಾನಿಯಲ್ಲಿ ಚುಮು ಚುಮು ಚಳಿ ಆರಂಭವಾಗಿದ್ದು, ರಾತ್ರಿ ಆಗುತ್ತಿದ್ದಂತೆಯೇ ಶುರುವಾಗುವ ಚಳಿ ಸೂರ್ಯೋದಯದವರೆಗೂ ಹಾಗೆಯೇ ಇರುತ್ತದೆ. ಈ ಮುಂದಿನ ವಾರದಿಂದ ಚಳಿ ಇನ್ನಷ್ಟು ಹೆಚ್ಚಾಗುಚ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಸಾಧಾರಣವಾಗಿ ಬೆಂಗಳೂರಿನಲ್ಲಿ ಡಿಸೆಂಬರ್ನಿಂದ ಫೆಬ್ರವರಿವರೆಗೆ ಚಳಿಗಾಲ ಇರಲಿದ್ದು, ಈಗಾಗಲೇ ಚಳಿ ಆರಂಭವಾಗಿದೆ. ಸಾಮಾನ್ಯವಾಗಿ ನಗರದಲ್ಲಿ ಡಿಸೆಂಬರ್ ಮೂರನೇ ವಾರದ ವೇಳೆಗೆ ತಾಪಮಾನ ಕಡಿಮೆಯಾಗುತ್ತದೆ.
ಈ ವರ್ಷವೂ ಇದೇ ಅವಧಿಯಲ್ಲಿ ತಾಪಮಾನ ಕಡಿಮೆಯಾಗಿದೆ. ಈ ವರ್ಷ ಲಾ-ನಿನಾ ವಾತಾವರಣ ಇರುವುದರಿಂದ, ಚಳಿಯ ಪ್ರಮಾಣ ಹೆಚ್ಚಾಗಿದ್ದು, ಕರ್ನಾಟಕದಲ್ಲಿ ಇನ್ನೂ ಎರಡು ತಿಂಗಳ ಕಾಲ ಕನಿಷ್ಠ ಮತ್ತು ಗರಿಷ್ಠ ತಾಪಮಾನದಲ್ಲಿ ಸರಾಸರಿ 3 ರಿಂದ 4 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಕಡಿಮೆಯಾಗುವ ಸಾಧ್ಯತೆ ಇದೆ
ಕಳೆದ ನಾಲ್ಕು ದಿನಗಳಿಂದ ರಾಜಧಾನಿಯಲ್ಲಿ ಹವಾಮಾನ ಗರಿಷ್ಠ ತಾಪಮಾನ ಸರಾಸರಿ 27 ಡಿ.ಸೆ. ಹಾಗೂ ಕನಿಷ್ಠ ತಾಪಮಾನ 19 ಡಿ.ಸೆ. ದಾಖಲಾಗುತ್ತಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಚಳಿಗಾಲ ತುಸು ಹೆಚ್ಚಾಗಿದೆ. ಇದಕ್ಕೆಲ್ಲಾ ಕಾರಣ ಅಂದ್ರೆ ಈ ವರ್ಷ ಸಾಕಷ್ಟು ಮಳೆಯಾಗಿರುವುದು. ಈ ವರ್ಷ ಹೆಚ್ಚು ಮಳೆಯಾಗಿರುವ ಹಿನ್ನಲೆ ಕೆರೆ, ನದಿ, ಅಣೆಕಟ್ಟೆಗಳು ತುಂಬಿವೆ. ಮರ-ಗಿಡಗಳು ಹಸಿರಿನಿಂದ ಕೂಡಿವೆ. ಅಷ್ಟೇ ಅಲ್ಲದೆ, ಈ ವರ್ಷ ಲಾ ನಿನಾ ವಾತಾವರಣ ಇರುವುದರಿಂದ ಚಳಿಗಾಲಕ್ಕೆ ಪೂರಕ ವಾತಾವರಣವಿದೆ
ಈ ಎಲ್ಲದರ ಹಿನ್ನೆಲೆಯಲ್ಲಿ ಈ ವರ್ಷ ಚಳಿಯ ಪ್ರಮಾಣ ಹೆಚ್ಚಿರಲಿದೆ ಎನ್ನಲಾಗುತ್ತಿದೆ. ಹೀಗಾಗಿ ರಾಜ್ಯದ ಉತ್ತರ ಒಳನಾಡಿನಲ್ಲಿ ಕನಿಷ್ಟ ಉಣ್ಣಾಂಶ 12 – 14 ಡಿಗ್ರಿ ಸೆಲ್ಸಿಯಸ್, ದಕ್ಷಿಣ ಒಳನಾಡಿನಲ್ಲಿ 17-19 ಡಿಗ್ರಿ, ಕಾರವಳಿಯಲ್ಲಿ 21-22, ಬೆಂಗಳೂರಿಗೆ ಕನಿಷ್ಟ ಉಷ್ಣಾಂಶ 17- 28 ಡಿಗ್ರಿ ಇದ್ದು ಈ ವರ್ಷ ಹೆಚ್ಚು ಚಳಿ ಇರುವ ಸಾಧ್ಯತೆ ಇದೆ.
ಬೆಂಗಳೂರಿನಲ್ಲಿ ಚಳಿಯ ವಾತಾವರಣವಿದೆ ಅಷ್ಟೇ, ಚಳಿಗಾಲ ಇನ್ನೂ ಆರಂಭವಾಗಿಲ್ಲ. ಗರಿಷ್ಠ ತಾಪಮಾನ 23-24 ಡಿಗ್ರಿ ಸೆಲ್ಸಿಯಸ್ಗೆ ಹಾಗೂ ಹಾಗೂ ಕನಿಷ್ಠ ತಾಪಮಾನ 16 ಡಿ.ಸೆ.ಗಿಂತ ಕಡಿಮೆ ಬಂದರೆ ಚಳಿಗಾಲವೆಂದು ಹೇಳಬಹುದು. ಇನ್ನೂ ಒಂದು ಚಂಡಮಾರುತ ಬರುವ ಸಾಧ್ಯತೆ ಇದ್ದು, ಈ ತಿಂಗಳ ಅಂತ್ಯಕ್ಕೆ ಅದು ಬರಬಹುದು. ಇಲ್ಲವೇ ಬೇರೆ ದಿಕ್ಕಿನ ಕಡೆ ಚಲಿಸಬಹುದು. ಈ ಚಂಡಮಾರುತದ ಸ್ಥಿತಿಗತಿ ನಂತರವಷ್ಟೇ ಚಳಿಗಾಲ ಆರಂಭವಾಗಲಿದೆ. ಆದರೆ ಸದ್ಯ ಚಳಿಯ ಪ್ರಮಾಣ ಜಾಸ್ತಿಯಾಗಿದ್ದು, ಇನ್ನು ಮೂರು ದಿನಗಳ ಕಾಲ ಚಳಿ ಹೆಚ್ಚಾಗಿಯೇ ಇರಲಿದೆ. ಜನರು ಆರೋಗ್ಯದ ಮೇಲೂ ಗಮನ ಹರಿಸಬೇಕು ಅಂತ ಹವಮಾನ ಇಲಾಖೆ ತಜ್ಞರು ಹೇಳಿದ್ದಾರೆ.