ಚಿಕ್ಕೋಡಿ: ವಿಜಯೇಂದ್ರ ಅವರಿಗೆ ಸ್ವಾಭಿಮಾನ ಇದ್ದರೆ ಅವರೇ ರಾಜೀನಾಮೆ ನೀಡಬೇಕು. ವಿಜಯೇಂದ್ರ ನಾಚಿಕೆಗೇಡಾಗಿದ್ದರೆ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಮುಂದುವರೆಯಲಿ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹರಿಹಾಯ್ದರು.
ಚನ್ನಪಟ್ಟಣದಲ್ಲಿ ಸೈನಿಕನ ಕಮಾಲ್: ಮೈತ್ರಿ ಪ್ಲ್ಯಾನ್ ಪ್ಲಾಫ್ ಆಗಿದ್ದೆಲ್ಲಿ!? CPY ತಂತ್ರ ಹೇಗಿತ್ತು!?
ಯಡಿಯೂರಪ್ಪ ಮತ್ತು ಪುತ್ರ ವ್ಯಾಮೋಹದಿಂದ ಬಿಜೆಪಿ ಸೋತಿದೆ. ಇನ್ನಾದರೂ ಹೈಕಮಾಂಡ್ ಈ ಬಗ್ಗೆ ಗಂಭೀರ ಚರ್ಚೆ ಮಾಡಬೇಕು ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಉಪಚುನಾವಣೆ ಸೋಲಿಗೆ ಬೇಸರ ವ್ಯಕ್ತಪಡಿಸಿದರು. ಯಡಿಯೂರಪ್ಪ ಮತ್ತು ಪುತ್ರ ವ್ಯಾಮೋಹದಿಂದ ಬಿಜೆಪಿ ಸೋತಿದೆ. ಇನ್ನಾದರೂ ಹೈಕಮಾಂಡ್ ಗಂಭೀರ ಚರ್ಚೆ ಮಾಡಬೇಕು. ಹೈಕಮಾಂಡ್ಗೆ ಸರಿಯಾದ ಮಾಹಿತಿ ನೀಡುವ ಉಸ್ತುವಾರಿಗಳನ್ನ ಕಳಿಸಬೇಕು ಎಂದು ಸಲಹೆ ನೀಡಿದರು.
ವಿಜಯೇಂದ್ರ ನಾಯಕತ್ವವನ್ನ ಜನ ತಿರಸ್ಕಾರ ಮಾಡಿದ್ದಾರೆ. ವಿಜಯೇಂದ್ರ ಅವರಿಗೆ ಸ್ವಾಭಿಮಾನ ಇದ್ದರೆ ಅವರೇ ರಾಜೀನಾಮೆ ನೀಡಬೇಕು. ವಿಜಯೇಂದ್ರ ನಾಚಿಕೆಗೇಡಾಗಿದ್ದರೆ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಮುಂದುವರೆಯಲಿ ಎಂದು ಹರಿಹಾಯ್ದರು.
ನಿಖಿಲ್ ಕುಮಾರಸ್ವಾಮಿ ಸೋಲು ದುರ್ದೈವ. ಯೋಗೇಶ್ವರ ಅವರಿಗೆ ಟಿಕೆಟ್ ಕೊಡುವಂತೆ ನಾನು ಹೇಳಿದ್ದೆ. ಪಾಪ ಕೊನೆಯ ವರೆಗೂ ಯೋಗೇಶ್ವರ್ ಬಿಜೆಪಿ ಪರ ಒಲವು ತೋರಿದ್ದರು. ಜನ ಯೋಗೇಶ್ವರ್ ಕೆಲಸ ಮಾಡಿದ್ದನ್ನ ನೋಡಿ ಗೆಲ್ಲಿಸಿದ್ದಾರೆ. ಕುಮಾರಸ್ವಾಮಿ ಅವರು ಮುಂದೆ ಯೋಚನೆ ಮಾಡಿ ಪಕ್ಷ ಸಂಘಟನೆ ಮಾಡಬೇಕು. ಇನ್ನಾದರೂ ಬಿಜೆಪಿ, ಜೆ.ಪಿ.ನಡ್ಡಾ ಅವರು ಕಣ್ಣು ತೆರೆಯಬೇಕು ಎಂದು ಹೇಳಿದರು.