IPL ಮೆಗಾ ಹರಾಜಿಗೆ ಕೌಂಟ್ ಡೌನ್ ಶುರುವಾಗಿದ್ದು, ಎಲ್ಲಾ ಪ್ರಾಂಚೈಸಿಗಳು ಸ್ಟಾರ್ ಆಟಗಾರರ ಮೇಲೆ ಕಣ್ಣಿಟ್ಟಿದೆ.
ಇದರಲ್ಲಿ RCB ಕೂಡ ದೊಡ್ಡ ದೊಡ್ಡ ಸ್ಟಾರ್ ಆಟಗಾರರ ಮೇಲೆ ಕಣ್ಣಿಟ್ಟಿದೆ. ಆರ್ಸಿಬಿಯ ಮೊದಲ ಆಯ್ಕೆಯಾಗಿ ಕೆಎಲ್ ರಾಹುಲ್ ಹೆಸರಿರುವುದು ಖಚಿತ ಎಂದು ಹೇಳಲಾಗುತ್ತಿದೆ. ಹೇಳಿ ಕೇಳಿ ಕನ್ನಡದ ಹುಡುಗನಾಗಿರುವ ರಾಹುಲ್ ಖರೀದಿಗೆ ಆರ್ಸಿಬಿ ಮುಂದಾಗಬಹುದು.
ರಾಹುಲ್ಗಿಂತ ಮುಂಚಿತವಾಗಿ ರಿಷಬ್ ಪಂತ್ ಹರಾಜಿಗೆ ಬರುವ ಕಾರಣ ಆರ್ಸಿಬಿ, ಪಂತ್ ಮೇಲು ಕಣ್ಣಿಟ್ಟಿದೆ. ಪಂತ್ ಆಗಮನದಿಂದ ತಂಡಕ್ಕೆ ಮೂರು ಉಪಯೋಗಗಳಾಗಲಿದ್ದು, ವಿಕೆಟ್ ಕೀಪರ್ ಜೊತೆಗೆ ನಾಯಕನ ಆಯ್ಕೆಯೂ ಸಿಗಲಿದೆ.
ಆರ್ಸಿಬಿಯ ಮಾಜಿ ನಾಯಕ ಫಾಫ್ ಡು ಪ್ಲೆಸಿಸ್ ಕೂಡ ಮತ್ತೆ ಆರ್ಸಿಬಿಗೆ ಸೇರುವ ಸಾಧ್ಯತೆಗಳಿವೆ. ನಾಯನಾಗಿ ಫಾಫ್ ಫೇಲ್ ಆಗಿದ್ದರೂ ಆಟಗಾರನಾಗಿ ಅವರ ಪ್ರದರ್ಶನ ಅಮೋಘವಾಗಿದೆ.
ಡು ಪ್ಲೆಸಿಸ್ನಂತೆ, ಜ್ಯಾಕ್ಸ್ ಕೂಡ ಈ ಮೊದಲ ಆರ್ಸಿಬಿ ಪರ ಆಡಿದ್ದಾರೆ. ಅಲ್ಲದೆ ಅವರು ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ಸ್ಫೋಟಕ ಶತಕ ಬಾರಿಸುವ ಮೂಲಕ ಎಲ್ಲರನ್ನು ಬೆರಗುಗೊಳಿಸಿದ್ದರು. ಇದರ ಜೊತೆಗೆ ಆಫ್-ಸ್ಪಿನ್ ಬೌಲಿಂಗ್ ಮಾಡುವ ಸಾಮರ್ಥ್ಯವನ್ನು ಹೊಂದಿರುವ ಜ್ಯಾಕ್ಸ್, ಆರ್ಸಿಬಿಯಲ್ಲಿ ಮ್ಯಾಕ್ಸ್ವೆಲ್ ಸ್ಥಾನವನ್ನು ತುಂಬಬಹುದು.
ಪಂಜಾಬ್ ಪರ ಐಪಿಎಲ್ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಅರ್ಷದೀಪ್ ಸಿಂಗ್ ಈ ಬಾರಿ ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಭಾರತ ಟಿ20 ತಂಡದ ಪ್ರಮುಖ ಬೌಲರ್ ಆಗಿ ಗುರುತಿಸಿಕೊಂಡಿರುವ ಅರ್ಷದೀಪ್, ಆರ್ಸಿಬಿಗೆ ಬಂದರೆ ತಂಡದ ಬೌಲಿಂಗ್ ವಿಭಾಗ ಮತ್ತಷ್ಟು ಉತ್ತಮವಾಗಲಿದೆ.
ಕಳೆದ ಆವೃತ್ತಿಯಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ಪರ ಆಡಿದ್ದ ಆಸೀಸ್ ಆಲ್ರೌಂಡರ್ ಮಾರ್ಕಸ್ ಸ್ಟೊಯಿನಿಸ್ ಮೇಲು ಆರ್ಸಿಬಿ ಕಣ್ಣಿಟ್ಟಿದೆ. ಸ್ಟೊಯಿನಿಸ್ ಆಗಮನದಿಂದ ತಂಡದ ಕೆಳ ಕ್ರಮಾಂಕ ಬಲಿಷ್ಠವಾಗುವುದಲ್ಲದೆ ಬೌಲಿಂಗ್ ಆಯ್ಕೆಯೂ ಸಿಗಲಿದೆ. ಅಲ್ಲದೆ ಈ ಹಿಂದೆ ಆರ್ಸಿಬಿ ಪರ ಆಡಿರುವ ಸ್ಟೊಯಿನಿಸ್ ಖರೀದಿಗೆ ಆರ್ಸಿಬಿ ಮುಂದಾಗಬಹುದು.
ಕಳೆದ ಕೆಲವು ಆವೃತ್ತಿಗಳಲ್ಲಿ ಆರ್ಸಿಬಿಗೆ ಪ್ರಮುಖವಾಗಿ ಕಾಡಿದ್ದು, ಒಬ್ಬ ಉತ್ತಮ ಸ್ಪಿನ್ನರ್ನ ಕೊರತೆ. 2022 ರ ಮೆಗಾ ಹರಾಜಿನಲ್ಲಿ ಆರ್ಸಿಬಿಯಿಂದ ರಾಜಸ್ಥಾನ ತಂಡಕ್ಕೆ ಯುಜ್ವೇಂದ್ರ ಚಹಾಲ್ ಹೋದ ಬಳಿಕ ಆ ಸ್ಥಾನವನ್ನು ತುಂಬಲು ಇದುವರೆಗು ಯಾರಿಗೂ ಸಾಧ್ಯವಾಗಿಲ್ಲ. ಹೀಗಾಗಿ ಚಹಾಲ್ ಮತ್ತೊಮ್ಮೆ ಆರ್ಸಿಬಿ ಪಾಳಯವನ್ನು ಸೇರಬಹುದು ಎನ್ನಲಾಗುತ್ತಿದೆ.
ಒಟ್ಟಾರೆ ಈ ಆಟಗಾರರ ಖರೀದಿಗೆ ಬೇರೆ ಪ್ರಾಂಚೈಸಿಗಳು ಕೂಡ ಮುಗಿ ಬೀಳಬಹುದು. ಹೀಗಾಗಿ ಮೆಗಾ ಹರಾಜಿನಲ್ಲಿ ಕಾದು ನೋಡಬೇಕಾಗಿದೆ.