ಬಳ್ಳಾರಿ ಸಂಡೂರು ಕಾಂಗ್ರೆಸ್ನ ಭದ್ರಕೋಟೆ ಎನ್ನುವುದು ಮತ್ತೆ ಸಾಭೀತಾಗಿದೆ. ಆದರೆ ಗೆಲುವಿನ ಅಂತರ(9649)ದ ಪ್ರಮಾಣ ತಗ್ಗಿರುವುದು ಗೆಲುವಿನಲ್ಲೂ ಕಾಂಗ್ರೆಸ್ ನಾಯಕರು ಚಿಂತಿಗೀಡಾಗಿದ್ದರೆ, ಬಿಜೆಪಿಗೆ ಹೊಸ ಹುಮ್ಮಸ್ಸು ನೀಡಿದೆ.
ನ.13ರಂದು ನಡೆದಿದ್ದ ಸಂಡೂರು ಮತ ಕ್ಷೇತ್ರದ ಉಪಚುನಾವಣೆಯ ಫಲಿತಾಂಶ ಹೊರ ಬಿದ್ದ ಬಳಿಕದ ವಿಶ್ಲೇಷಣೆ ಇದು. ಅಖಂಡ ಬಳ್ಳಾರಿ ಜಿಲ್ಲೆಯಲ್ಲೇ ಸಂಡೂರು ಮೊದಲಿಂದಲೂ ಕಾಂಗ್ರೆಸ್ ಹಿಡಿತಕ್ಕೆ ಒಳಪಟ್ಟಿದೆ. ಲಾಡ್-ಘೋರ್ಪಡೆ ಕುಟುಂಬಗಳ ಪ್ರಾಬಲ್ಯ ಹೊಂದಿರುವ ಕ್ಷೇತ್ರ.
ಮತ್ತೊಮ್ಮೆ ಕಾಂಗ್ರೆಸ್ನ ಅಭ್ಯರ್ಥಿ ಅನ್ನಪೂರ್ಣ ತುಕಾರಂ ಗೆಲುವಿನ ಮೂಲಕ ಎರಡು ಐತಿಹ್ಯ ಘಟನೆಗಳಿಗೆ ಸಾಕ್ಷಿಯಾಗಿದೆ. ಪತಿ ತುಕಾರಂ ಸಂಸದರಿರುವಾಗಲೇ ಪತ್ನಿಯನ್ನು ವಿಧಾನಸಭೆಗೆ ಕಳುಹಿಸಿ ಹೊಸ ಘಟನೆಗೆ ಸಾಕ್ಷಿಯಾಗಿದರೆ, ಸಂಡೂರು ವಿಧಾನ ಸಭೆ ಅಸ್ತಿತ್ವದ ಬಳಿಕ ಇದುವರೆಗೂ ಘೋರ್ಪಡೆಯವರೇ ಅತ್ಯಧಿಕ ಬಾರಿ ಗೆದ್ದು ಇತಿಹಾಸ ನಿರ್ಮಿಸಿದ್ದರು. ಆದರೆ ತುಕಾರಂ ಕುಟುಂಬ ಈ ದಾಖಲೆಯ ಹತ್ತಿರ ದಾಪುಗಾಲಿಟ್ಟಿರುವುದು ಎರಡನೇ ಇತಿಹಾಸವಾಗಿದೆ.
ರೈತರೇ ಗಮನಿಸಿ: ಮಿನಿ ಪವರ್ ಟಿಲ್ಲರ್ ಖರೀದಿಗೆ ಸರ್ಕಾರ ನೀಡುತ್ತಿದೆ ಶೇ.90ರಷ್ಟು ಸಹಾಯಧನ.! ಇಂದೇ ಅರ್ಜಿ ಸಲ್ಲಿಸಿ
ಭದ್ರ ಕೋಟೆ: 1957ರಲ್ಲಿ ಅಸ್ತಿತ್ವಕ್ಕೆ ಬಂದ ಸಂಡೂರಿನಲ್ಲಿ ಎಂ.ವೈ ಘೋರ್ಪಡೆ ಅವರು 30 ವರ್ಷ ಇಲ್ಲಿ ಶಾಸಕರು. ಅವರನ್ನು ಬಿಟ್ಟರೇ ಈಗಿನ ತುಕಾರಂ 20 ವರ್ಷ ಅವಧಿಗೆ ಆಯ್ಕೆಯಾಗಿದ್ದರು. ಅವರ ರಾಜೀನಾಮೆ ಬಳಿಕ ಅವರ ಪತ್ನಿ ಅನ್ನಪೂರ್ಣ ಇ.ತುಕಾರಂ ಗೆದ್ದಿದ್ದು, ಐದನೇ ಬಾರಿ ಸಂಡೂರಲ್ಲಿ ತುಕಾರಂ ಕುಟುಂಬ ಗೆದ್ದಂತಾಗಿದೆ. 1985ರಲ್ಲಿ ಜನತಾಪಾರ್ಟಿ, 2004ರಲ್ಲಿ ಜೆಡಿಎಸ್ ಬಿಟ್ಟರೇ ಉಳಿದೆಲ್ಲ ಅವಧಿಗೂ ಕಾಂಗ್ರೆಸ್ ಅಭ್ಯರ್ಥಿ ಇಲ್ಲಿ ಗೆದ್ದಿದ್ದಾರೆ. ಕಳೆದ 2008ರಿಂದಲೂ ತುಕಾರಂ ಇಲ್ಲಿ ಗೆಲುವು ದಾಖಲಿಸಿದ್ದು, ಈ ಬಾರಿ ಅವರ ಪತ್ನಿಯ ಗೆಲುವಿನಿಂದ ಸಂಡೂರು ಮತದಾರರು ಒಂದೇ ಕುಟುಂಬಕ್ಕೆ ಮತ್ತೆ ಆಶಿರ್ವಾದ ಮಾಡುವ ಮೂಲಕ ಪುನಃ ಸಂಡೂರನ್ನು ಕಾಂಗ್ರೆಸ್ ಭದ್ರಕೋಟೆಯಾಗಿಸಿದ್ದಾರೆ.
ಮೋಡಿ ಮಾಡದ ಜೋಡಿ: ಸಂಡೂರು 2024ರ ಉಪಚುನಾವಣೆ ಸೇರಿ ಒಟ್ಟು 16 ಬಾರಿ ಚುನಾವಣೆಗಳನ್ನು ಕಂಡಿದ್ದು, ಇದುವರೆಗೂ ಬಿಜೆಪಿ ಅಭ್ಯರ್ಥಿ ಇಲ್ಲಿ ಗೆದ್ದಿಲ್ಲ. ಈಗ ಪರಾಜಿತ ಅಭ್ಯರ್ಥಿಯಾದ ಬಂಗಾರಿ ಹನುಮಂತು ಮೂಲಕ ಕೇಸರಿ ಬಾವುಟ ಹಾರಿಸುವ ವಿಶ್ವಾಸದಲ್ಲಿ ಬಿಜೆಪಿ ನಾಯಕರಿದ್ದರು. ಆದರೆ ಇದು ನಿರಾಸೆಯಾಗಿದೆ. ಬಂಗಾರಿ ಹನುಮಂತು ಹಿಂದೆ ಬಿ.ಶ್ರೀರಾಮುಲು, ಜಿ.ಜನಾರ್ದನರೆಡ್ಡಿ ಇದ್ದಾರೆ ಅವರ ಜೋಡಿ ಸಂಡೂರಲ್ಲಿ ಮೋಡಿ ಮಾಡಲಿದೆ ಎನ್ನುವ ಅಶಾಭಾವ ಕೇವಲ ಮತದಾರರಲ್ಲಿ ಮಾತ್ರವಲ್ಲದೇ ರಾಷ್ಟç-ರಾಜ್ಯ ನಾಯರಲ್ಲೂ ಇತ್ತು. ಆದರೆ ಈ ಜೋಡಿಯ ಆಟ ಸಂಡೂರಲ್ಲಿ ನಡೆಯದೇ ಇರುವುದು ಫಲಿತಾಂಶದಿAದ ಹೊರ ಬಿದ್ದಿದೆ.
ಹೆಚ್ಚಿದ ಲಾಡ್ ವರ್ಚಸ್ಸು: ಇನ್ನು ಸಂಡೂರು ಮತ ಕ್ಷೇತ್ರದಲ್ಲಿ ಸಿಎಂ ಸಿದ್ದರಾಮಯ್ಯ ನಡೆಸಿದ ಪ್ರಚಾರದ ಬಿರುಗಾಳಿ ಇಲ್ಲಿ ಕೆಲಸ ಮಾಡಿದೆ. ಹಲವು ಜನ ಸಚಿವರು ದಂಡು ವಾಸ್ತವ್ಯ ಹೂಡಿದ್ದು, ಸ್ವತಃ ಸಚಿವ ಸಂತೋಷ ಲಾಡ್ ತಾವೇ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ ರೀತಿಯಲ್ಲಿಯೇ ಸಂಡೂರಲ್ಲಿ ನಡೆಸಿದ ತಂತ್ರಗಾರಿಕೆ ಇಲ್ಲಿ ಕೈ ಹಿಡಿದಿದೆ. ಚುನಾವಣೆಯ ಫಲಿತಾಂಶದಿAದ ಸಚಿವ ಸಂತೋಷ ಲಾಡ್ ಅವರ ವರ್ಚಸ್ಸು ಹೆಚ್ಚಾದಂತಾಗಿದೆ.