ಗಾಜಾದಲ್ಲಿನ ಯುದ್ಧ ಹಾಗೂ 2023 ರ ಅಕ್ಟೋಬರ್ ನಲ್ಲಿ ನಡೆದ ಘರ್ಷಣೆಗಳಲ್ಲಿ ಯುದ್ಧಾಪರಾಧ ಹಾಗೂ ಮಾನವಕುಲ ಮೇಲೆ ಅಪರಾಧ ನಡೆದಿದೆ ಎಂಬ ಆರೋಪದ ಮೇಲೆ ನೆತನ್ಯಾಹು ಅವರಿಗೆ ಅಂತಾರಾಷ್ಟ್ರೀಯ ಕ್ರಿಮಿನಲ್ ಕೋರ್ಟ್ ಬಂಧನ ವಾರೆಂಟ್ ಹೊರಡಿಸಿದೆ.ಈ ಬಗ್ಗೆ ಪ್ರತಿಕ್ರಿಯಿಸಿರುವ ನೆತನ್ಯಾಹು ಇಸ್ರೇಲ್ ಅನ್ನು ರಕ್ಷಿಸುವ ತನ್ನ ಪ್ರಯತ್ನವನ್ನು ತಡೆಯಲಾರದು ಎಂದಿದ್ದಾರೆ. ಅಲ್ಲದೆ ಅಂತರರಾಷ್ಟ್ರೀಯ ನ್ಯಾಯಾಲಯದ ಈ ನಿರ್ಧಾರವು, ರಾಷ್ಟ್ರಗಳ ಇತಿಹಾಸದಲ್ಲೇ ಅತ್ಯಂತ ಕರಾಳದಿನವಾಗಿದೆ ಎಂದಿದ್ದಾರೆ.
‘‘ಹೇಗ್ನಲ್ಲಿರುವ ಅಂತರರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯವನ್ನು ಮಾನವೀಯತೆಯನ್ನು ರಕ್ಷಿಸುವ ಉದ್ದೇಶದಿಂದ ಸ್ಥಾಪಿಸಲಾಗಿತ್ತು. ಆದರೆ ಇಂದು ಅದು ಮಾನವೀಯತೆಯ ಶತ್ರುವಾಗಿದೆ’’ ಎಂದು ನೆತನ್ಯಾಹು ಹೇಳಿದ್ದಾಋಎ. ತನ್ನ ವಿರುದ್ಧ ಐಸಿಸಿ ಹೊರಿಸಿರುವ ಆರೋಪಗಳು ಸಂಪೂರ್ಣ ಆಧಾರರಹಿತವಾಗಿವೆ ಎಂದವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹಾಗೂ ತನಗೆ, ಅಂತರರಾಷ್ಟ್ರೀಯ ನ್ಯಾಯಾಲಯವು ಬಂಧನ ವಾರಂಟ್ ಜಾರಿಗೊಳಿಸಿರುವುದು ನೈತಿಕತೆಗೆ ಹಚ್ಚಿರುವ ಕಳಂಕವೆಂದು ಇಸ್ರೇಲ್ನ ರಕ್ಷಣಾ ಸಚಿವ ಇಸ್ರಾಯೇಲ್ ಕಾಯೆಟ್ಜ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಐಸಿಸಿಯ ಈ ನಡೆಯುವ ಇರಾನ್ ಹಾಗೂ ಅದು ಪೋಷಿಸುತ್ತಿರುವ ಸಂಘಟನೆಗಳಿಗೆ ನೆರವಾಗುತ್ತದೆ ಎಂದವರು ಆಪಾದಿಸಿದ್ದಾರೆ.