ಬೆಂಗಳೂರು: ಕರ್ನಾಟಕದ ಮೂರು ಕ್ಷೇತ್ರಗಳಲ್ಲೂ ಆಡಳಿತರೂಢ ಕಾಂಗ್ರೆಸ್ ಗೆಲುವು ಸಾಧಿಸಿದೆ. ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳ ಉಪ-ಚುನಾವಣೆಯಲ್ಲಿ ಎನ್ಡಿಗೆ ಹಿನ್ನಡೆಯಾಗಿದೆ. ಇದಕ್ಕೆ ಕಾರಣವಾದ ಪ್ರಮುಖ ಅಂಶಗಲ ಮಾಹಿತ ಇಲ್ಲಿದೆ ನೋಡಿ.
1. ಅಭ್ಯರ್ಥಿಗಳ ಆಯ್ಕೆಯಲ್ಲಿ ನಿಗದಿತವಾದ ನಿರ್ಧಾರವಿಲ್ಲದೇ ಇರುವುದು.
2. ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದಲ್ಲಿ ಅತಿಯಾದ ಆತ್ಮವಿಶ್ವಾಸ.
3. ಸಂಡೂರು ವಿಧಾನಸಭಾ ಕ್ಷೇತ್ರದಲ್ಲಿ ಗಾಲಿ ಜನಾರ್ದನ ರೆಡ್ಡಿ ಮೇಲೆ ನಂಬಿಕೆಯಿಟ್ಟು ಅವರು ಹೇಳಿದ ಅಭ್ಯರ್ಥಿಗೆ ಟಿಕೆಟ್ ಕೊಟ್ಟಿದ್ದು.
4. ಅದೇ ಸಂಡೂರು ಕ್ಷೇತ್ರದಲ್ಲಿ ರಾಮುಲು ಕಡೆಗಣಿಸಿ, ಗಾಲಿ ಜನಾರ್ದನ ರೆಡ್ಡಿ ಮಾತಿಗೆ ಮನ್ನಣೆ ಕೊಟ್ಟಿದ್ದು, ಸ್ಥಳೀಯ ನಾಯಕರು ಸರಿಯಾಗಿ ಕಾರ್ಯನಿರ್ವಹಣೆ ಮಾಡದೇ ಇರುವುದು.
5. ಇತ್ತ ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶಾಸಕರಾಗಿದ್ದಾಗ ಅಭಿವೃದ್ಧಿ ಮಾಡಿಲ್ಲ ಎಂಬ ವಿಚಾರ ದೊಡ್ಡ ಪ್ರಮಾಣದಲ್ಲಿ ಸದ್ದು ಮಾಡಿದ್ದು.
6. ಬಸವರಾಜ ಬೊಮ್ಮಾಯಿ ನಮ್ಮ ಕುಟುಂಬಕ್ಕೆ ಟಿಕೆಟ್ ಬೇಡ ಬೇಡ ಎಂದು ಕಡೆ ಘಳಿಗೆಯಲ್ಲಿ ಗಿಟ್ಟಿಸಿಕೊಂಡಿದ್ದು, ಕೊನೆ ಹಂತದಲ್ಲಿ ಅತಿಯಾದ ಆತ್ಮವಿಶ್ವಾಸ ಮೆರೆದಿದ್ದು.
7. ಸರ್ಕಾರದ ಗ್ಯಾರೆಂಟಿಗಳ ಮುಂದೆ ಅದನ್ನು ಸರಿಯಾಗಿ ಎದುರಿಸದೇ ಇದ್ದದ್ದು.
8. ಇನ್ನು 2024ರ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಧಾರವಾಡ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದಲ್ಲಿ, ಕಾಂಗ್ರೆಸ್ಗೆ ಲೀಡ್ ಬಂದಿದ್ದು, ಬಿಜೆಪಿಗೆ ಹಿನ್ನಡೆಯಾಗಿತ್ತು. ಈ ಅಂಶವನ್ನು ಉಪ- ಚುನಾವಣೆಯ ಸಂದರ್ಭದಲ್ಲಿ ಪರಿಗಣಿಸದೇ ಹೋದದ್ದು.
9. ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದಲ್ಲಿ ಅಲ್ಪಸಂಖ್ಯಾತ ಮತಗಳನ್ನು ಸಮರ್ಪಕವಾಗಿ ಕ್ರೂಢಿಕರಿಸದೇ ಹೋದದ್ದು.
10. ಬಸವರಾಜ ಬೊಮ್ಮಾಯಿ ವೀರಶೈವ-ಲಿಂಗಾಯತ ಸಮುದಾಯದ ಮತಗಳನ್ನು ಕ್ರೂಢಿಕರಣ ಮಾಡಲು ಶಕ್ತರಾದ್ರೆ ಹೊರತು, ಸ್ಥಳೀಯ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಲ್ಲಿ ಎಡವಿದ್ದು.
11. ರಾಜ್ಯದ ನಾಯಕರುಗಳು ಶ್ರಮವಹಿಸಿ ಕಾರ್ಯನಿರ್ವಹಣೆ ಮಾಡದೇ ಇರುವುದು.
12. ಇದೆಲ್ಲದರ ಜೊತೆಗೆ ಪ್ರಮುಖವಾಗಿ ರಾಜ್ಯದಲ್ಲಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರದಲ್ಲಿರುವ ಕಾಂಗ್ರೆಸ್ ಹಣಬಲ, ತೋಳ್ಬಲ ಎರಡನ್ನು ಪ್ರದರ್ಶಿಸಿ, ಗಟ್ಟಿಯಾದ ತಂಡವನ್ನು ಕಟ್ಟಿಕೊಂಡು ಕೆಲಸ ಮಾಡಿದ್ದು.
ಮೂರು ವಿಧಾನಸಭಾ ಕ್ಷೇತ್ರಗಳ ಉಪ-ಚುನಾವಣೆಯ ಫಲಿತಾಂಶದ ಮೇಲೆ ಪರಿಣಾಮ ಬೀರಿದೆ.ಇಷ್ಟು ಮಾತ್ರವಲ್ಲದೇ, ಅಧಿಕಾರದಲ್ಲಿರುವ ಪಕ್ಷ ಅಂತಾ ಹೇಳಿದಾಗ ಗೆಲ್ಲುವ ಅವಕಾಶಗಳು ಸಹಜವಾಗಿಯೇ ಹೆಚ್ಚಾಗಿರುತ್ತದೆ. ಈ ಅಂಶಗಳು ಬಿಜೆಪಿಗೆ ಶಾಪವಾಗಿ ಪರಿಣಮಿಸಿ, ಕಾಂಗ್ರೆಸ್ ಮೂರು ಕ್ಷೇತ್ರಗಳಲ್ಲೂ ಗೆಲುವು ಸಾಧಿಸಿದೆ.