ನವದೆಹಲಿ: ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೆ ಬುಧವಾರ ಒಂದೇ ಹಂತದಲ್ಲಿ ಮತದಾನ ಮಾಡಲಾಗಿದ್ದು, ಇಂದುಫಲಿತಾಂಶ ಹೊರಬೀಳಲಿದೆ. ಭಾರತೀಯ ಜನತಾ ಪಕ್ಷನೇತೃತ್ವದ ಮಹಾಯುತಿ ಮೈತ್ರಿಕೂಟವು ಅಧಿಕಾರವನ್ನು ಉಳಿಸಿಕೊಳ್ಳುವ ಗುರಿಯನ್ನು ಹೊಂದಿದೆ. ಆದರೆ ಮಹಾ ವಿಕಾಸ್ ಅಘಾಡಿ ಮತ್ತೆ ಅಧಿಕಾರಕ್ಕೇರುವ ನಿರೀಕ್ಷೆಯಲ್ಲಿದೆ.
ಮಹಾರಾಷ್ಟ್ರದಲ್ಲಿ ಎಂಎನ್ಎಸ್ ಸ್ಥಾಪಕ ರಾಜ್ಠಾಕ್ರೆ ಪುತ್ರ ಅಮಿತ್ಗೆ ಹಿನ್ನಡೆಯಾಗಿದೆ. ಮಾಹಿಮ್ – ಮಹಾಯುತಿ ಅಭ್ಯರ್ಥಿ ಅಮಿತ್ ಠಾಕ್ರೆ ಅವರಿಗೆ ಹಿನ್ನಡೆಯಾಗಿದೆ. ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆಗೆ 5447 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ.
PM Kisan tractor: ಟ್ರಾಕ್ಟರ್ ಖರೀದಿಸುವ ರೈತರಿಗೆ ಪಿಎಂ ಕಿಸಾನ್ ಯೋಜನೆಯಡಿ ಭರ್ಜರಿ ಸಬ್ಸಡಿ! ಇಂದೇ ಅರ್ಜಿ ಸಲ್ಲಿಸಿ
ಬಾರಮತಿ ಕ್ಷೇತ್ರ- ಮಹಾಯುತಿ ಅಭ್ಯರ್ಥಿ ಅಜಿತ್ ಪವಾರ್ಗೆ ಹಿನ್ನಡೆಯಾಗಿದೆ. ಮುಂಬೈನ ವರ್ಲಿ ಕ್ಷೇತ್ರ-ಶಿವಸೇನೆ ಅಭ್ಯರ್ಥಿ ಆದಿತ್ಯ ಠಾಕ್ರೆ ಮುನ್ನಡೆ ಸಾಧಿಸಿದ್ದಾರೆ. ಮುಂಬಾದೇವಿ ಕ್ಷೇತ್ರ-ಕಾಂಗ್ರೆಸ್ ಅಭ್ಯರ್ಥಿ ಅಮಿತ್ ಪಟೇಲ್ ಮುನ್ನಡೆ ಸಾಧಿಸಿದ್ದಾರೆ. ಸಾಕೋಲಿ ಕ್ಷೇತ್ರ-ಕಾಂಗ್ರೆಸ್ ಅಭ್ಯರ್ಥಿ ನಾನಾಪಟೋಲೆಗೆ ಹಿನ್ನಡೆಯಾಗಿದೆ.