ಬಳ್ಳಾರಿ:- ಕರ್ನಾಟಕದ ಶಿಗ್ಗಾವಿ, ಸಂಡೂರು, ಮತ್ತು ಚನ್ನಪಟ್ಟಣ ಮೂರು ವಿಧಾನಸಭೆ ಕ್ಷೇತ್ರಗಳಿಗೆ ನಡೆದ ಉಪಚುನಾವಣೆ ಫಲಿತಾಂಶ ಕೆಲವೇ ಗಂಟೆಗಳಲ್ಲಿ ಹೊರಬೀಳಲಿದೆ.
ಹೀಗಾಗಲೇ ಮೂರು ಕ್ಷೇತ್ರಗಳಲ್ಲಿ ಮತ ಎಣಿಕೆ ಆರಂಭವಾಗಿದ್ದು, ಬಳ್ಳಾರಿಯಲ್ಲಿ ಮೊದಲ ಎರಡು ಸುತ್ತಿನಲ್ಲಿ ಬಿಜೆಪಿಗೆ ಬಿಗ್ ಶಾಕ್ ಎದುರಾಗಿದ್ದು, ಕೈ ಅಭ್ಯರ್ಥಿ ಮುನ್ನಡೆ ಸಾಧಿಸಿದ್ದಾರೆ.
By Election Result: ಅಂಚೆ ಮತ ಎಣಿಕೆಯಲ್ಲಿ ಮುನ್ನಡೆ ಯಾರಿಗೆ!? ಇಲ್ಲಿದೆ ಕಂಪ್ಲೀಟ್ ರಿಪೋರ್ಟ್!
ಮೊದಲ ಸುತ್ತಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ 2586 ಮತಗಳ ಮುನ್ನಡೆ ಸಾಧಿಸಿದ್ದು, ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತು ಹಿನ್ನಡೆ ಆಗಿದೆ.
ಕಾಂಗ್ರೆಸ್ – 6959
ಬಿಜೆಪಿ -4373
ಎರಡನೇ ಸುತ್ತು:
2ನೇ ಸುತ್ತಿನಲ್ಲಿ ಕಾಂಗ್ರೆದ್ ಅಭ್ಯರ್ಥಿ 2715 ಮತಗಳ ಮುನ್ನಡೆ ಸಾಧಿಸಿದ್ದಾರೆ.
ಕಾಂಗ್ರೆಸ್ – 11770
ಬಿಜೆಪಿ -9055.
3ನೇ ಸುತ್ತು:
3ನೇ ಸುತ್ತಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ 1973 ಮತಗಳ ಮುನ್ನಡೆ
ಕಾಂಗ್ರೆಸ್ – 15874
ಬಿಜೆಪಿ -13901
4ನೇ ಸುತ್ತು:
4ನೇ ಸುತ್ತಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ 1001 ಮತಗಳ ಮುನ್ನಡೆ
ಕಾಂಗ್ರೆಸ್ – 20128
ಬಿಜೆಪಿ -19127
5ನೇ ಸುತ್ತು:
5ನೇ ಸುತ್ತಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ 205 ಮತಗಳ ಮುನ್ನಡೆ
ಕಾಂಗ್ರೆಸ್ – 23877
ಬಿಜೆಪಿ -23672
ಸಂಡೂರು ಮತ ಕ್ಷೇತ್ರದ ಆರನೇ ಸುತ್ತಿನ ಮತ ಎಣಿಕೆ ಮುಕ್ತಾಯವಾಗಿದ್ದು, ಬಿಜೆಪಿ ಲೀಡ್ ಪಡೆದುಕೊಂಡಿದೆ.
ಕಳೆದ ಐದು ಸುತ್ತುಗಳಲ್ಲಿ ಮುನ್ನಡೆ ಸಾಧಿಸಿದ್ದ ಕಾಂಗ್ರೆಸ್ಗೆ ಹಿನ್ನಡೆ ಆಗಿದೆ. 6 ಸುತ್ತಿನಲ್ಲಿ ಬಿಜೆಪಿ ಅಭ್ಯರ್ಥಿ ಕೇವಲ 200 ಮತಗಳ ಮುನ್ನಡೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ತುಕಾರಾಂ ಅವರನ್ನು ಬಿಜೆಪಿ ಅಭ್ಯರ್ಥಿ ಬಂಗಾರಿ ಹನುಮಂತು200 ಮತಗಳ ಅಂತರದಿಂದ ಹಿಂದಿಕ್ಕಿದ್ದಾರೆ.
ಒಟ್ಟಾರೆ ಗೆಲುವು ಯಾರ ಪಾಲಾಗುತ್ತದೆ ಎಂದು ಇನ್ನೂ ಕೆಲವೇ ಗಂಟೆಗಳಲ್ಲಿ ತಿಳಿದು ಬರಲಿದೆ.