ಕೆಲವರಿಗೆ ತಿನ್ನುವುದನ್ನು ಕಡಿಮೆ ಮಾಡಲು ಸಾಧ್ಯವಿರುವುದಿಲ್ಲ, ಆದರೆ ಅತಿಯಾದ ದೇಹದ ತೂಕ ಕಡಿಮೆ ಮಾಡಿಕೊಳ್ಳುವ ಹಂಬಲ ಮಾತ್ರ ಹಾಗೆಯೇ ಇರುತ್ತದೆ. ಅದಕ್ಕೂ ವಿಧಾನವಿದೆ.
Dates: ಚಳಿಗಾಲದಲ್ಲಿ ನಿತ್ಯ ಖರ್ಜೂರ ತಿನ್ನುವುದರಿಂದ ಎಷ್ಟೆಲ್ಲಾ ಲಾಭ ಸಿಗುತ್ತೆ ಗೊತ್ತಾ!?
ಆಹಾರ ಸೇವನೆ ಹೇಗೆ ತೂಕ ಏರಿಕೆಗೆ ಕಾರಣವಾಗುವುದೋ ಅದೇ ರೀತಿ ಆಹಾರದಲ್ಲಿಯೇ ಬದಲಾವಣೆ ಮಾಡಿಕೊಂಡರೆ ಹೆಚ್ಚಿದ ದೇಹದ ತೂಕವನ್ನು ಕಡಿಮೆ ಮಾಡಬಹುದು. ಅದು ಹೇಗೆ ಅಂತೀರಾ ಇಲ್ಲಿದೆ ನೋಡಿ ಮಾಹಿತಿ.
ಅಧಿಕ ತೂಕದಿಂದಾಗಿ ಅನೇಕ ಮಂದಿ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಹೀಗಾಗಿ ತೂಕ ಇಳಿಸಿಕೊಳ್ಳಲು ಬಹುತೇಕ ಮಂದಿ ನಾನಾ ಪ್ರಯತ್ನಗಳನ್ನು ಮಾಡುತ್ತಿರುತ್ತಾರೆ. ಮೇಲ್ನೋಟಕ್ಕೆ ಇದು ಸುಲಭವಾಗಿ ಕಂಡರೂ ಬಹಳ ಮಂದಿಗೆ ಇದು ಸಾಹಸವಿದ್ದಂತೆ. ಕೆಲವರು ಜಿಮ್, ಯೋಗ, ಡಯೆಟ್, ವರ್ಕೌಟ್ ಹೀಗೆ ಹಲವಾರು ಸರ್ಕಸ್ಗಳನ್ನು ಮಾಡುವ ಮೂಲಕ ಬೆವರಿಳಿಸುತ್ತಾರೆ. ಮತ್ತೆ ಕೆಲವರು ಆಹಾರ ಪದ್ಧತಿಯನ್ನು ಅನುಸರಿಸುತ್ತಾರೆ. ಹೀಗಿದ್ದರೂ ಈ ಪ್ರಯತ್ನಗಳ ನಂತರವೂ ಕೇವಲ ಒಂದೆರಡು ಕೆಜಿಗಳಷ್ಟು ಮಾತ್ರವೇ ಇಳಿದು ನಿರಾಸೆಗೊಳ್ಳುತ್ತಾರೆ.
ಆದರೆ ಇವೆಲ್ಲವನ್ನು ಮಾಡುವ ಬದಲು ನೀವು ಹೊಟ್ಟೆ ತುಂಬಾ ಆಹಾರಗಳನ್ನು ಸೇವಿಸಿಯೇ ತೂಕ ಇಳಿಸಿಕೊಳ್ಳಬಹುದು ಎನ್ನುತ್ತಾರೆ ತಜ್ಞರು. ಹೌದು ಇನ್ಮುಂದೆ ತೂಕವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಕಟ್ಟುನಿಟ್ಟಾದ ಆಹಾರ ಪದ್ಧತಿಯನ್ನು ಅನುಸರಿಸುವ ಅವಶ್ಯಕತೆ ಇಲ್ಲ. ಹೊಟ್ಟೆ ತುಂಬಾ ಆರಾಮವಾಗಿಯೇ ತಿನ್ನಬಹುದು. ಆದರೆ ಕೆಲವೊಂದಷ್ಟು ಪದಾರ್ಥಗಳ ಸೇವನೆಯನ್ನು ಕಡಿಮೆ ಮಾಡಬೇಕು
ಸಾಮಾನ್ಯವಾಗಿ ಎಣ್ಣೆಯುಕ್ತ ಮಸಾಲೆಯುಕ್ತ ಆಹಾರಗಳು ಮತ್ತು ಜಂಕ್ ಫುಡ್ ತಿನ್ನಲು ಬಹಳ ರುಚಿಕರವಾಗಿರುತ್ತದೆ. ಆದರೆ ಇವುಗಳ ಸೇವನೆಯಿಂದ ಬೊಜ್ಜಿನ ಸಮಸ್ಯೆ ಹೆಚ್ಚಾಗುತ್ತದೆ ಎಂದು ಅನೇಕ ಮಂದಿ ಆತಂಕ ವ್ಯಕ್ತಪಡಿಸುತ್ತಾರೆ. ವಾಸ್ತವವಾಗಿ ಇವುಗಳನ್ನು ಸೇವನೆ ಸಂಪೂರ್ಣ ಆರೋಗ್ಯಕ್ಕೂ ಉತ್ತಮವಲ್ಲ. ಹಾಗಾಗಿ ಇವುಗಳ ಬದಲಿಗೆ ತರಕಾರಿಗಳು, ಧಾನ್ಯಗಳು, ಹಣ್ಣುಗಳು ಇತ್ಯಾದಿಗಳನ್ನು ತಿನ್ನುವ ಮೂಲಕ ನೀವು ಸುಲಭವಾಗಿ ತೂಕ ಇಳಿಸಿಕೊಳ್ಳಬಹುದು
ಇವುಗಳ ಜೊತೆಗೆ ನಿಯಮಿತವಾಗಿ ವ್ಯಾಯಾಮ ಸಹ ಮಾಡಬೇಕು. ಅದರಲ್ಲೂ ಪ್ರಮುಖವಾಗಿ ಈ ಕೆಳಗೆ ನೀಡಲಾದ 5 ತರಕಾರಿಗಳನ್ನು ಪ್ರತಿದಿನ ಸೇವಿಸಿದರೆ ನೀವು ಸುಲಭವಾಗಿ ತೂಕ ಇಳಿಸಿಕೊಳ್ಳಬಹುದು. ಹಾಗಾದ್ರೆ ಅವು ಯಾವುವು ಅಂತೀರಾ? ಈ ಸ್ಟೋರಿ ಓದಿ.
ಸೌತೆಕಾಯಿ: ಸೌತೆಕಾಯಿ ತೂಕ ಇಳಿಕೆಗೆ ಬಹಳ ಸಹಕಾರಿ ಆಗಿದೆ. ಈ ತರಕಾರಿಗಳಲ್ಲಿ ನೀರು ಮತ್ತು ಫೈಬರ್ ಅಂಶ ಸಮೃದ್ಧವಾಗಿದೆ. ಇದು ಹೊಟ್ಟೆಯನ್ನು ಬೇಗ ತುಂಬಿಸುತ್ತವೆ. ಇದರಲ್ಲಿ ಕಡಿಮೆ ಕ್ಯಾಲೋರಿ ಇರುವುದರಿಂದ ತೂಕ ಹೆಚ್ಚಾಗುತ್ತದೆ ಎಂಬ ಆತಂಕವೂ ಇಲ್ಲ.
ಹೂಕೋಸು: ಹೂಕೋಸು ಕಡಿಮೆ ಕ್ಯಾಲೋರಿ ಮತ್ತು ಹೆಚ್ಚಿನ ಫೈಬರ್ ಹೊಂದಿರುವ ಆಹಾರಗಳಲ್ಲಿ ಈ ತರಕಾರಿ ಕೂಡ ಒಂದಾಗಿದೆ. ಇದು ದೇಹದಲ್ಲಿನ ಹಾರ್ಮೋನುಗಳನ್ನು ಸಮತೋಲನಗೊಳಿಸುತ್ತದೆ ಮತ್ತು ತೂಕವನ್ನು ಕಡಿಮೆ ಮಾಡುತ್ತದೆ.
ಕ್ಯಾರೆಟ್: ನಿಮ್ಮ ದೈನಂದಿನ ಆಹಾರದಲ್ಲಿ ಕ್ಯಾರೆಟ್ ಸೇರಿಸುವುದರಿಂದಲೂ ನೀವು ಸುಲಭವಾಗಿ ತೂಕ ಇಳಿಸಿಕೊಳ್ಳಬಹುದು. ವಿಟಮಿನ್ ಗಳಲ್ಲಿ ಸಮೃದ್ಧವಾಗಿರುವ ಕ್ಯಾರೆಟ್ನಲ್ಲಿ ಫೈಬರ್ ಕೂಡ ಇರುತ್ತದೆ. ಅಲ್ಲದೇ ಕ್ಯಾರೆಟ್ನಲ್ಲಿ ಕ್ಯಾಲೋರಿಗಳು ಕೂಡ ಕಡಿಮೆ. ಹೀಗಾಗಿ ಕ್ಯಾರೆಟ್ ತಿನ್ನುವುದರಿಂದ ತೂಕವನ್ನು ಸಲೀಸಾಗಿ ತೂಕ ಇಳಿಸಿಕೊಳ್ಳಬಹುದು.
ಹಾಗಲಕಾಯಿ: ಹಾಗಲಕಾಯಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ. ಇದಷ್ಟೇ ಅಲ್ಲದೇ, ಹಾಗಲಕಾಯಿ ಹೊಟ್ಟೆಯ ಬೊಜ್ಜನ್ನು ಸುಲಭವಾಗಿ ಕರಗಿಸುತ್ತದೆ. ನಿಮ್ಮ ದೈನಂದಿನ ಆಹಾರದಲ್ಲಿ ಹಾಗಲಕಾಯಿ ಸೇವಿಸುವುದನ್ನು ಬಿಡಬೇಡಿ. ಹಾಗಲಕಾಯಿಯಲ್ಲಿ ನೀರು ಮತ್ತು ನಾರಿನಂಶ ಅಧಿಕವಾಗಿದೆ.