ಬೆಂಗಳೂರು:- ಭೋವಿ ನಿಗಮದ ಅಕ್ರಮ ಕೇಸ್ ಗೆ ಸಂಬಧಪಟ್ಟಂತೆ ತನಿಖೆ ಎದುರಿಸಿದ್ದ ಯುವತಿ ನೇಣಿಗೆ ಶರಣಾಗಿದ್ದಾರೆ. ಜೀವಾ ಆತ್ಮಹತ್ಯೆ ಮಾಡಿಕೊಂಡ ಯುವತಿ.
ಕಾಂಗ್ರೆಸ್ ನೋಡಿ ನಾವು ಕಲಿಯಬೇಕಾದದ್ದು ಏನಿಲ್ಲ: ಸಿದ್ಧುಗೆ ಕುಮಾರಸ್ವಾಮಿ ಟಾಂಗ್!
ಜೀವಾ, ಭೋವಿ ನಿಗಮದಲ್ಲಿ ನಡೆದಿದೆ ಎನ್ನಲಾದ ಅಕ್ರಮದಲ್ಲಿ ಕಳೆದ 3 ತಿಂಗಳ ಹಿಂದೆ ಒಮ್ಮೆ ವಿಚಾರಣೆ ಎದುರಿಸಿದ್ದರು. ಅಕ್ರಮದ ತನಿಖೆ ಮಾಡುತ್ತಿರುವ ಅಧಿಕಾರಿಗಳು ಜೀವಾಗೆ ನೋಟಿಸ್ ಕೊಟ್ಟು ವಿಚಾರಣೆ ಮಾಡಿದ್ದರು. ಅಲ್ಲದೇ ಕಳೆದ ನಾಲ್ಕು ದಿನಗಳಿಂದ ಸತತವಾಗಿ ವಿಚಾರಣೆಗೆ ಹಾಜರಾಗಿದ್ದರು.
ಮೊನೆ ವಿಚಾರಣೆ ಎದುರಿಸಿ ಬಂದ ನಂತರ, ಪ್ರಕರಣದ ತನಿಖಾಧಿಕಾರಿಗಳು ವಿಚಾರಣೆ ವೇಳೆ ನನಗೆ ಕಿರುಕುಳ ನೀಡಿದ್ದಾರೆಂದು ಆರೋಪಿಸಿ 11 ಪುಟಗಳ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ
11 ಪುಟಗಳ ಡೆತ್ ನೋಟ್ನಲ್ಲಿ ಅಕ್ರಮದ ತನಿಖೆ ನಡೆಸುತ್ತಿರೋ ತನಿಖಾಧಿಕಾರಿ ಡಿವೈಎಸ್ಪಿ ಹೆಸರು ಬರೆದಿಟ್ಟಿದ್ದಾರೆ ಎನ್ನಲಾಗಿದೆ. ಇನ್ನೂ ಘಟನೆ ಸಂಬಂಧ ಬನಶಂಕರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಎಫ್ಐಆರ್ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ