ಹುಬ್ಬಳ್ಳಿ: ಭಾರತ ನವೀಕರಿಸಬಹುದಾದ ಇಂಧನ ವಲಯದಲ್ಲಿ ಗಮನಾರ್ಹ ಬೆಳವಣಿಗೆ ಸಾಧಿಸಿದ್ದು, ಒಂದೇ ವರ್ಷದಲ್ಲಿ 24.2 GW (13.5%) ರಷ್ಟು ಸಾಮರ್ಥ್ಯ ವೃದ್ಧಿಸಿದೆ ಎಂದು ಕೇಂದ್ರ ನವೀಕರಿಸಬಹುದಾದ ಇಂಧನ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದ್ದಾರೆ. ನವೀಕರಿಸಬಹುದಾದ ಇಂಧನ ಸಾಮರ್ಥ್ಯವು 24 GW, ಸೌರಶಕ್ತಿ 20 GW ಹೆಚ್ಚಿದೆ. 2023ರ ಅಕ್ಟೋಬರ್ ನಿಂದ 2024ರ ಅಕ್ಟೋಬರ್ ವರೆಗೆ ಭಾರತ ಗಣನೀಯ ಬೆಳವಣಿಗೆ ಕಂಡಿದೆ ಎಂದು ಹೇಳಿದ್ದಾರೆ.
ರೈತರೇ ಗಮನಿಸಿ.. ಕಡಿಮೆ ಬಂಡವಾಳ, ಅಧಿಕ ಲಾಭ! ಈ ಬೆಳೆಯಿಂದ ಲಕ್ಷಗಟ್ಟಲೆ ಲಾಭ ಪಡೆಯಬಹುದು!
2023ರ ಅಕ್ಟೋಬರ್ನಲ್ಲಿ 178.98 GW ಇದ್ದ ಸೌರಶಕ್ತಿ ಸಾಮರ್ಥ್ಯ ಪ್ರಸ್ತುತ 203.18 GW ತಲುಪಿದೆ. ಈ ಗಮನಾರ್ಹ ಏರಿಕೆ RE ವಲಯದ ಕ್ಷೇತ್ರದಲ್ಲಿ ಭಾರತದ ಮಹತ್ವಾಕಾಂಕ್ಷೆಯ ಗುರಿ ಸಾಧನೆಗೆ ಪೂರಕವಾಗಿದೆ ಎಂದು ಹೇಳಿದ್ದಾರೆ.ಪರಮಾಣು ಶಕ್ತಿ ಒಳಗೊಂಡಂತೆ ಪಳೆಯುಳಿಕೆಯೇತರ ಇಂಧನ ಸಾಮರ್ಥ್ಯ 2023 ರಲ್ಲಿ 186.46 GW ಇತ್ತು. ಅದೀಗ 211.36 GWಗೆ ಏರಿದೆ ಎಂದಿದ್ದಾರೆ.
ಸೌರ ಮತ್ತು ಪವನ ವಿದ್ಯುತ್ ಹೆಚ್ಚಳ: ಸೌರಶಕ್ತಿ ವಲಯ 20.1 GW ( 27.9%) ಗಮನಾರ್ಹ ಏರಿಕೆ ಕಂಡಿದೆ. 2023ರ ಅಕ್ಟೋಬರ್ ನಲ್ಲಿ 72.02 GW ಇದ್ದದ್ದು ನಿಂದ 2024ರ ಅಕ್ಟೋಬರ್ಗೆ 92.12 GW ಗೆ ವಿಸ್ತರಣೆ ಕಂಡಿದೆ. ಪ್ರಸ್ತುತದಲ್ಲಿ ಅನುಷ್ಠಾನದಲ್ಲಿರುವ ಮತ್ತು ಟೆಂಡರ್ ಮಾಡಲಾದ ಯೋಜನೆ ಸೇರಿದಂತೆ ಒಟ್ಟು ಸೌರ ಸಾಮರ್ಥ್ಯವು ಈಗ 250.57 GW (ಕಳೆದ ವರ್ಷ 166.49 GW) ಗಮನಾರ್ಹ ಹೆಚ್ಚಳ ಕಂಡಿದೆ ಎಂದಿದ್ದಾರೆ.