ಹಾವೇರಿ: ಪ್ರತಿಯೊಂದು ಇಲಾಖೆಯಲ್ಲಿ ಕಲೆಕ್ಷನ್ ಸೆಂಟರ್ʼಗಳು ಆಗಿದೆ ಎಂದು ಮಾಜಿ ಸಿಎಂ ಹಾಗೂ ಸಂಸದ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ. ಹಾವೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಒಬ್ಬ ರಾಜಕಾರಣಿ ತನ್ನ ಅಸ್ತಿತ್ವಕ್ಕೆ ಧಕ್ಕೆ ಬಂದಾಗ, ಆಧಾರ ರಹಿತ ಆರೋಪ ಮಾಡುತ್ತಿದ್ದಾರೆ. ಆಪಾದನೆಯ ದಿಕ್ಕನ್ನ ಬೇರೆ ಕಡೆ ತಿರುಗಿಸಲು ಹೀಗೆ ಹೇಳುತ್ತಿದ್ದಾರೆ. ಅವರು ಬಹಳ ಗೊಂದಲದಿಂದ ಹತಾಶೆರಾಗಿದ್ದಾರೆ ಎಂದು ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ್ದಾರೆ.
ಸಿದ್ದರಾಮಯ್ಯ ಮೂರುವರೆ ವರ್ಷ ನಾನೇ ಸಿ.ಎಂ ಅಂತಾರೆ. ಮತ್ತೊಂದು ಕಡೆ ನನಗೆ ಶಕ್ತಿ ಕೊಡಿ ಐದು ವರ್ಷ ಅಧಿಕಾರ ಪೂರ್ಣ ಮಾಡಬೇಕು ಅಂತಾರೆ. ಮಳೆ ಹಾನಿಗೆ ಸಾಕಷ್ಟು ಬೆಳೆಗಳು ಹಾನಿಯಾಗಿದೆ. ಒಂದೇ ಒಂದು ಪರಿಹಾರ ಬರುತ್ತಿಲ್ಲ, ಸರ್ಕಾರ ಗೊಂದಲದಲ್ಲಿದೆ. ಮುಸ್ಲಿಂ ಗುತ್ತಿಗೆದಾರರಿಗೆ ನಾಲ್ಕು ರಿಯಾಯಿತಿ ನೀಡುತ್ತೇವೆ ಎನ್ನುತ್ತಿದ್ದಾರೆ. ಆದರೆ ವಾಲ್ಮೀಕಿ ಹಗರಣ ಮತ್ತು ಮುಡಾ ಹಗರಣದಲ್ಲಿ ಕೂಡ ಸೈಟ್ ತೆಗೆದುಕೊಂಡಿಲ್ಲ ಎಂದು ಹೇಳಿ ವಾಪಸ್ ಕೊಡುತ್ತೇವೆ ಎನ್ನುತ್ತಾರೆ ಇದು ಯೂಟರ್ನ್ ಸರ್ಕಾರ ಎಂದು ಗುಡುಗಿದರು.
ರೈತರೇ ಗಮನಿಸಿ.. ಕಡಿಮೆ ಬಂಡವಾಳ, ಅಧಿಕ ಲಾಭ! ಈ ಬೆಳೆಯಿಂದ ಲಕ್ಷಗಟ್ಟಲೆ ಲಾಭ ಪಡೆಯಬಹುದು!
ಅಧಿಕಾರಿಗಳು ಬೇಸತ್ತು ಹೋಗಿದ್ದಾರೆ. ಅಧಿಕಾರಿ ಮೇಲೆ ದೊಡ್ಡ ಪ್ರಮಾಣದ ರಾಜಕೀಯ ಒತ್ತಡ ಹಾಕುತ್ತಾರೆ. ಪ್ರತಿಯೊಂದು ಇಲಾಖೆಯಲ್ಲಿ ಕಲೆಕ್ಷನ್ ಸೆಂಟರ್ಗಳು ಆಗಿದೆ. ಮುಖ್ಯಮಂತ್ರಿಗಳು ಇವತ್ತು ನನ್ನ ಮುಟ್ಟಿದರೆ ಜನರು ಸುಮ್ಮನೆ ಇರಲ್ಲ ಅಂದಿದ್ದಾರೆ. ಮುಖ್ಯಮಂತ್ರಿ ಹೇಳಿದಾಗ ಜನರು ಸುಮ್ಮನೆ ಇರುವುದಿಲ್ಲ ನಿಜ. ಜನರು ಪರವಾನಗಿ ಕೆಲಸ ಮಾಡಿದಾಗ ಮಾತ್ರ ಸುಮ್ಮನೆ ಇರಲ್ಲ. ಸರ್ಕಾರದ ದುರಾಡಳಿತ ವಿರುದ್ಧವು ಸಹ ಜನರು ಸುಮ್ಮನೆ ಇರಲ್ಲ ಎಂದು ಹೇಳಿದರು.