ಪ್ರತಿದಿನ ವಾಕಿಂಗ್ ಮಾಡುವುದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎನ್ನಲಾಗುತ್ತದೆ. ನೀವು ವ್ಯಾಯಾಮ ಮಾಡದಿದ್ದರೂ ವಾಕಿಂಗ್ ಮಾಡಿದರೂ ಪ್ರಯೋಜನಗಳನ್ನು ಪಡೆಯಬಹುದು. ಚಳಿಗಾಲದಲ್ಲಿ ತಣ್ಣನೆಯ ಗಾಳಿಯಿಂದ ವ್ಯಾಯಾಮ ಅಥವಾ ಯೋಗ ಮಾಡಲು ಸ್ವಲ್ಪ ತೊಂದರೆಯಾಗುತ್ತದೆ, ಹಾಗಾಗಿ ಹೆಚ್ಚಿನವರು ಮನೆಯಿಂದ ಹೊರಬರಲು ಇಷ್ಟಪಡುವುದಿಲ್ಲ. ಆದರೆ ನೀವು ಚಳಿಗಾಲದ ಬಟ್ಟೆಗಳನ್ನು ಧರಿಸಿ ಸರಿಯಾಗಿ ನಡೆದರೆ, ಅದು ನಿಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ.
ಬೆಳಗಿನ ನಡಿಗೆ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಇದು ನಿಮ್ಮ ಚಯಾಪಚಯವನ್ನು ಹೆಚ್ಚಿಸುತ್ತದೆ. ಇದು ಹೃದಯ-ಮೆದುಳಿನ ಆರೋಗ್ಯವನ್ನು ಸುಧಾರಿಸುತ್ತದೆ. ಇದು ನಿಮ್ಮ ದೇಹದ ತೂಕವನ್ನು ನಿಯಂತ್ರಣದಲ್ಲಿಡುತ್ತದೆ. ಆದರೆ, ಚಳಿಗಾಲದ ಚಳಿಯು ಅನೇಕ ಆರೋಗ್ಯ ಸಮಸ್ಯೆಗಳನ್ನು ಕೂಡ ಹೆಚ್ಚಿಸುವುದರಿಂದ ವಯಸ್ಸಾದವರು, ಮಕ್ಕಳು, ರೋಗಿಗಳು ಬೆಳಗಿನ ಚಳಿಯಲ್ಲಿ ವಾಕಿಂಗ್ ಮಾಡುವಾಗ ಎಚ್ಚರ ವಹಿಸುವುದು ಅಗತ್ಯ.
ಅಧ್ಯಯನದ ಪ್ರಕಾರ, ಚಳಿಗಾಲದ ಶೀತ ತಿಂಗಳು ACSನ ಅಪಾಯವನ್ನು ಹೆಚ್ಚಿಸುತ್ತದೆ. ವಿಶೇಷವಾಗಿ ವಯಸ್ಸಾದ ರೋಗಿಗಳಲ್ಲಿ ಚಳಿಗಾಲದಲ್ಲಿ ಹೃದಯಾಘಾತದ ಅಪಾಯ ಹೆಚ್ಚು. ಚಳಿಗಾಲದಲ್ಲಿ ಹೆಚ್ಚು ಹೃದಯ ವೈಫಲ್ಯ ಮತ್ತು ಎಸಿಎಸ್ನಿಂದ ಸಾವುಗಳು ಸಂಭವಿಸುತ್ತವೆ. ಆದ್ದರಿಂದ, ಬೆಳಿಗ್ಗೆ ವಾಕಿಂಗ್ ಮಾಡುವುದರಿಂದ ಹೃದಯಾಘಾತದ ಸಾಧ್ಯತೆಗಳು ಕಡಿಮೆಯಾಗುತ್ತವೆ. ಚಳಿಗಾಲದಲ್ಲಿ ನೀವು ಯಾವಾಗ ಮತ್ತು ಎಷ್ಟು ಸಮಯದವರೆಗೆ ವಾಕ್ ಮಾಡಬೇಕು ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ.
ಚಳಿಗಾಲದಲ್ಲಿ ವಾಕಿಂಗ್ ಹೋಗುವಾಗ ಈ ವಿಷಯಗಳನ್ನು ನೆನಪಿನಲ್ಲಿಡಿ:
– ಸರಿಯಾದ ಬಟ್ಟೆಗಳನ್ನು ಧರಿಸಿಕೊಂಡು, ಮೈಯನ್ನು ಬೆಚ್ಚಗಾಗಿಸಿಕೊಂಡು ಮನೆಯ ಹೊರಗೆ ವಾಕಿಂಗ್ ಹೋಗಿ.
– ದೇಹವನ್ನು ಸಂಪೂರ್ಣವಾಗಿ ಮುಚ್ಚಿಕೊಂಡು ನಡೆಯಲು ಮನೆಯಿಂದ ಹೊರಗೆ ಹೋಗಬೇಕು.
– ಬೆಚ್ಚಗಿನ ಬಟ್ಟೆಗಳನ್ನು ಧರಿಸಿಕೊಂಡು ಹೊರಗೆ ಹೋಗಿ.
– ಆರಂಭದಲ್ಲಿ ವೇಗವಾಗಿ ನಡೆಯಬೇಡಿ.
– ನಿಮಗೆ ಹೃದಯ ಸಂಬಂಧಿ ಸಮಸ್ಯೆಗಳು, ಅಸ್ತಮಾ ಅಥವಾ ನ್ಯುಮೋನಿಯಾ ಇದ್ದರೆ ಬೆಳಿಗ್ಗೆ ವಾಕಿಂಗ್ ಮಾಡಲು ಹೋಗಬೇಡಿ.
– ವಯಸ್ಸಾದವರು ಚಳಿಗಾಲದಲ್ಲಿ ವಾಕಿಂಗ್ ಮಾಡುವುದನ್ನು ಅವಾಯ್ಡ್ ಮಾಡಿ.
– ನಿಧಾನವಾಗಿ ನಡೆಯಲು ಪ್ರಾರಂಭಿಸಿ ಮತ್ತು ನಂತರ ವೇಗವನ್ನು ಹೆಚ್ಚಿಸಿ.
– ತಂಪಾದ ವಾತಾವರಣದಲ್ಲಿ ವಾಕಿಂಗ್ ಬದಲು ನೀವು ಬೆಳಿಗ್ಗೆ 8.30ರಿಂದ 9.30ರವರೆಗೆ ಮತ್ತು ಸಂಜೆ 5ರಿಂದ 6ರವರೆಗೆ ವಾಕ್ ಮಾಡಲು ಹೋಗಬಹುದು.
ತಜ್ಞರ ಪ್ರಕಾರ ಪ್ರತಿದಿನ 10,000 ಹೆಜ್ಜೆ ನಡೆಯುವುದು ಆರೋಗ್ಯಕ್ಕೆ ಪ್ರಯೋಜನಕಾರಿ. ಚಳಿಗಾಲದಲ್ಲಿ ವಾರದಲ್ಲಿ ಕನಿಷ್ಠ 5 ದಿನಗಳು 30 ನಿಮಿಷದವರೆಗೆ ನಡೆಯಿರಿ. ಇದು ನಿಮ್ಮನ್ನು ಅನೇಕ ರೋಗಗಳಿಂದ ರಕ್ಷಿಸುತ್ತದೆ.