ಟೀಮ್ ಇಂಡಿಯಾಗೆ ದೊಡ್ಡ ಆಘಾತ ಎದುರಾಗಿದ್ದು, ಕೊಹ್ಲಿ, ರೋಹಿತ್ ನಿವೃತ್ತಿಗೆ ಒತ್ತಡ ಹೆಚ್ಚಾಗಿದೆ. ಇನ್ನೂ ಇದಕ್ಕೆ ಕಾರಣವೇನು ಎನ್ನುವುದನ್ನು ತಿಳಿಯಲು ಈ ಸುದ್ದಿ ಪೂರ್ತಿ ಓದಿ.
ಮಹಿಳಾ ಆಟೋ ಚಾಲಕಿಯರ ಸಂಘದ ವತಿಯಿಂದ 69ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ
ಟೀಮ್ ಇಂಡಿಯಾ ಟಿ20 ವಿಶ್ವಕಪ್ ಗೆದ್ದ ಬೆನ್ನಲ್ಲೇ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಶಾರ್ಟೆಸ್ಟ್ ಫಾರ್ಮೇಟ್ ಕ್ರಿಕೆಟ್ನಿಂದ ನಿವೃತ್ತಿಯಾದ್ರು. ಈಗ ಕೇವಲ ಏಕದಿನ ಮತ್ತು ಟೆಸ್ಟ್ ಕ್ರಿಕೆಟ್ ತಂಡದ ಭಾಗವಾಗಿದ್ದಾರೆ. ಈ ಮಧ್ಯೆ ಕೊಹ್ಲಿ, ರೋಹಿತ್ ನಿವೃತ್ತಿ ಆಗಲಿದ್ದಾರೆ ಅನ್ನೋ ಚರ್ಚೆ ಜೋರಾಗಿದೆ.
ಇತ್ತೀಚೆಗೆ ನಡೆದ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾ ನ್ಯೂಜಿಲೆಂಡ್ ವಿರುದ್ಧ ಹೀನಾಯ ಸೋಲು ಕಂಡಿದೆ. ಮಹತ್ವದ ಟೆಸ್ಟ್ ಸರಣಿ ಸೋಲಿನ ಬೆನ್ನಲ್ಲೇ ಭಾರತ ತಂಡದ ಸೂಪರ್ ಸ್ಟಾರ್ಸ್ ನಿವೃತ್ತಿ ಆಗಬಹುದು ಅನ್ನೋ ಮಾತುಗಳು ಕೇಳಿ ಬಂದಿವೆ. ಅಭಿಮಾನಿಗಳು ಕೂಡ ಇಬ್ಬರು ನಿವೃತ್ತಿ ಆಗಲೇಬೇಕು ಎಂದು ಒತ್ತಡ ಹಾಕುತ್ತಿದ್ದಾರೆ.
ತವರಿನಲ್ಲಿ ಟೀಮ್ ಇಂಡಿಯಾದ ಹೀನಾಯ ಸೋಲಿಗೆ ತಂಡದ ಬ್ಯಾಟಿಂಗ್ ವೈಫಲ್ಯವೇ ಕಾರಣ. ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಟೆಸ್ಟ್ ಸೀರೀಸ್ನಲ್ಲಿ ಕಳಪೆ ಪ್ರದರ್ಶನ ನೀಡಿದ್ರು. ಇದರ ಪರಿಣಾಮ ಟೀಮ್ ಇಂಡಿಯಾ ಸೋಲಬೇಕಾಯ್ತು. ಇಬ್ಬರು ಸೂಪರ್ ಸ್ಟಾರ್ಸ್ ತಮ್ಮ ಬ್ಯಾಟಿಂಗ್ ಜವಾಬ್ದಾರಿ ಮರೆತರು.
ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಸ್ಪಿನ್ ಬೌಲರ್ಗಳ ವಿರುದ್ಧ ಹೆಣಗಾಡಿದ್ರು. ಕ್ಯಾಪ್ಟನ್ ರೋಹಿತ್ ಕಳೆದ 10 ಇನ್ನಿಂಗ್ಸ್ನಲ್ಲಿ ಕೇವಲ 133 ರನ್ ಗಳಿಸಿದ್ದು, ಕೊಹ್ಲಿ ತಮ್ಮ ಕೊನೆಯ 10 ಟೆಸ್ಟ್ ಇನ್ನಿಂಗ್ಸ್ಗಳಲ್ಲಿ 192 ರನ್ ಕಲೆ ಹಾಕಿದ್ರು. ಭಾರತದಲ್ಲೇ ನಡೆದ ಟೆಸ್ಟ್ ಪಂದ್ಯಗಳಲ್ಲಿ ರನ್ ಕಲೆ ಹಾಕುವಲ್ಲಿ ವಿಫಲರಾಗುತ್ತಿದ್ದಾರೆ.
ನ್ಯೂಜಿಲೆಂಡ್ ವಿರುದ್ಧದ ಮಹತ್ವದ ಟೆಸ್ಟ್ ಸೀರೀಸ್ನಲ್ಲಿ ಟೀಮ್ ಇಂಡಿಯಾದ ಸ್ಟಾರ್ ಜೋಡಿ ಕೊಹ್ಲಿ, ರೋಹಿತ್ ಕಳಪೆ ಪ್ರದರ್ಶನ ನೀಡಿದೆ. ಹೀಗಾಗಿ ಇಬ್ಬರು ನಿವೃತ್ತಿ ಆಗಲಿ ಎಂದು ಟೀಮ್ ಇಂಡಿಯಾದ ಅಭಿಮಾನಿಗಳು ಒತ್ತಡ ಹಾಕಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಭಾರೀ ಟ್ರೆಂಡ್ ಮಾಡುತ್ತಿದ್ದಾರೆ