ಲಾಹೋರ್: ಪಾಕಿಸ್ತಾನದ ಎರಡನೇ ಅತೀ ದೊಡ್ಡ ನಗರವಾದ ಲಾಹೋರ್ ಮತ್ತೊಮ್ಮೆ ವಿಶ್ವದ ಅತ್ಯಂತ ಕಲುಷಿತ ನಗರ ಎಂದು ಹೆಸರಿಸಲ್ಪಟ್ಟಿದೆ. ವಾಯುಮಾಲಿನ್ಯ ಮತ್ತಷ್ಟು ಹದಗೆಡದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಸರಕಾರಕ್ಕೆ ಸೂಚಿಸಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸಿದ ಹೈಕೋರ್ಟ್, ಎಲ್ಲಾ ಮಾರುಕಟ್ಟೆ, ಅಂಗಡಿ, ಉಪಾಹಾರ ಗೃಹ ಹಾಗೂ ಇತರ ಸಂಸ್ಥೆಗಳನ್ನು ರಾತ್ರಿ 10ರೊಳಗೆ ಮುಚ್ಚುವಂತೆ ಸೂಚಿಸಿದೆ.
ನಿಮಗೆ ರಾತ್ರಿ ವೇಳೆ ನಿದ್ರೆ ಬರುತ್ತಿಲ್ವಾ!? ಹಾಗಿದ್ರೆ ಈ ಫುಡ್ ಗಳನ್ನು ಇಂದೇ ನಿಲ್ಲಿಸಿ!
ಇನ್ನೂ ವಾಯುಮಾಲಿನ್ಯದ ಮಟ್ಟದ ಹಠಾತ್ ಹೆಚ್ಚಳಕ್ಕೆ ಪಾಕಿಸ್ತಾನದ ಸಚಿವರು ಭಾರತವನ್ನು ದೂಷಿಸಲು ಪ್ರಾರಂಭಿಸಿದ್ದಾರೆ. ಹಿರಿಯ ಸಚಿವ ಮರಿಯುಮ್ ಔರಂಗಜೇಬ್ ಭಾರತದಿಂದ ಪಾಕಿಸ್ತಾನಕ್ಕೆ ಬರುತ್ತಿರುವ ಹೊಗೆಯ ಬಗ್ಗೆ ತಮ್ಮ ದೇಶದ ಜನರಿಗೆ ಎಚ್ಚರಿಕೆ ನೀಡಿದ್ದಾರೆ. ಇನ್ನೂ ಕನಿಷ್ಠ ಒಂದು ವಾರದವರೆಗೆ ಗಾಳಿಯು ಲಾಹೋರ್ ಕಡೆಗೆ ಬೀಸಲಿದೆ ಎಂದು ಹೇಳಿದ್ದಾರೆ.
ಇನ್ನೂ ಪಾಕಿಸ್ತಾನದ ಎರಡನೇ ಅತಿದೊಡ್ಡ ನಗರವಾದ ಲಾಹೋರ್ ಭಾನುವಾರ ದಟ್ಟವಾದ ಹೊಗೆಯಿಂದ ಆವೃತವಾಗಿತ್ತು. ಏಕೆಂದರೆ ವಾಯು ಗುಣಮಟ್ಟ ಸೂಚ್ಯಂಕವು 1,067ಕ್ಕೆ ತಲುಪಿತ್ತು. ಸ್ವಿಜರ್ಲೆಂಡ್ ಮೂಲದ ವಾಯು ಗುಣಮಟ್ಟದ ವಾಚ್ಡಾಗ್ IQAir ಈ ಗಾಳಿಯ ಗುಣಮಟ್ಟವನ್ನು “ಅಪಾಯಕಾರಿ” ಎಂದು ವರ್ಗೀಕರಿಸಿದೆ.
ನಾಗರಿಕರು ಮನೆಯೊಳಗೆ ಇರಲು, ಬಾಗಿಲು ಮತ್ತು ಕಿಟಕಿಗಳನ್ನು ಮುಚ್ಚಿ ಮತ್ತು ಅನಗತ್ಯ ಪ್ರಯಾಣವನ್ನು ತಪ್ಪಿಸಲು ಸೂಚಿಸಲಾಗಿದೆ. ಆಸ್ಪತ್ರೆಗಳಿಗೆ ಸ್ಮಾಗ್ ಕೌಂಟರ್ಗಳನ್ನು ನೀಡಲಾಗಿದೆ. ವಾಹನ ಮಾಲಿನ್ಯವನ್ನು ಕಡಿಮೆ ಮಾಡಲು, 50% ಕಚೇರಿ ನೌಕರರು ಮನೆಯಿಂದಲೇ ಕೆಲಸ ಮಾಡಲಿದ್ದಾರೆ.