ರಾತ್ರಿ ಏನೇ ಮಾಡಿದರೂ ಕಣ್ಣಿಗೆ ನಿದ್ರೆನೇ ಹತ್ತಲ್ಲ ಎನ್ನುವ ಮಾತನ್ನು ನಾವು ಹಲವರು ಬಾಯಿಯಿಂದ ಕೇಳಿರುತ್ತೇವೆ. ಇಂತಹ ಸಮಸ್ಯೆಯು ನಮ್ಮನ್ನು ಕೂಡ ಕೆಲವೊಂದು ಸಂದರ್ಭದಲ್ಲಿ ಕಾಡಿರಬಹುದು
IPL 2025 Mega Auction: ಎರಡು ದಿನಗಳಲ್ಲಿ ನಡೆಯಲಿದೆ ಮೆಗಾ ಹರಾಜು; ದಿನಾಂಕ, ಸ್ಥಳದ ಕಂಪ್ಲೀಟ್ ಡೀಟೈಲ್ಸ್!
ಅತಿಯಾಗಿ ಆಲೋಚನೆ, ಕೆಲಸದ ಒತ್ತಡ ಹಾಗೂ ಮಾನಸಿಕ ತುಮುಲದಿಂದಾಗಿ ಕೆಲವೊಂದು ಸಲ ಎಷ್ಟೇ ಪ್ರಯತ್ನ ಮಾಡಿದರೂ ನಿದ್ರೆಯು ಕಣ್ಣಿಗೆ ಹತ್ತದು, ಮಗ್ಗುಲ ಬದಲಾಯಿಸುತ್ತಲೇ ರಾತ್ರಿ ಕಳೆಯಬೇಕಾಗುತ್ತದೆ.
ನೀವು ರಾತ್ರಿಯಲ್ಲಿ ಉತ್ತಮ ನಿದ್ರೆ ಬಯಸಿದರೆ ಮತ್ತು ಸಮಯಕ್ಕೆ ಸರಿಯಾಗಿ ಮಲಗಲು ಬಯಸಿದರೆ, ಮಲಗುವ ಕೆಲವು ಗಂಟೆಗಳ ಮೊದಲು ನೀವು ತಿನ್ನುವುದು ಮತ್ತು ಕುಡಿಯುವುದನ್ನು ನಿಲ್ಲಿಸಬೇಕು. ನಿರ್ದಿಷ್ಟವಾಗಿ ಹೇಳುವುದಾದರೆ, ರಾತ್ರಿಯಲ್ಲಿ ತಿನ್ನಬಾರದು ಅಥವಾ ಕುಡಿಯಬಾರದು ಎಂಬ 7 ಆಹಾರಗಳಿವೆ.
ಮಲಗುವ ಮುನ್ನ ಈ ವಸ್ತುಗಳನ್ನು ಸೇವಿಸಿದರೆ ನಿದ್ರೆಗೆ ತೊಂದರೆಯಾಗುತ್ತದೆ. ಆದ್ದರಿಂದ ಮಲಗುವ ಮೊದಲು ಯಾವ ಆಹಾರಗಳನ್ನು ತಪ್ಪಿಸಬೇಕು ಎಂಬುದನ್ನು ಇಲ್ಲಿ ತಿಳಿಯೋಣ.
ಕಾಫಿ: ಹೆಲ್ತ್ ಲೈನ್ ನ ವರದಿಯ ಪ್ರಕಾರ, ಕಾಫಿಯಲ್ಲಿ ಹೆಚ್ಚಿನ ಪ್ರಮಾಣದ ಕೆಫೀನ್ ಇದೆ. ರಾತ್ರಿ ಕಾಫಿ ಸೇವಿಸಿದರೆ ನಿದ್ರೆಗೆ ತೊಂದರೆಯಾಗುತ್ತದೆ. ಕೆಫೀನ್ ನ ಪರಿಣಾಮವು ಆರರಿಂದ ಎಂಟು ಗಂಟೆಗಳವರೆಗೆ ಇರುತ್ತದೆ. ಆದ್ದರಿಂದ ಸಂಜೆ ಮೇಲೆ ಕಾಫಿ ಕುಡಿಯುವುದನ್ನು ತಪ್ಪಿಸಬೇಕು
ಚಾಕೊಲೇಟ್: ಇದರಲ್ಲಿ ಥಿಯೋಬ್ರೊಮಿನ್ ಎಂಬ ಉತ್ತೇಜಕವೂ ಇದೆ. ಇದು ಹೃದಯ ಬಡಿತವನ್ನು ಹೆಚ್ಚಿಸುತ್ತದೆ ಮತ್ತು ವಿಶ್ರಾಂತಿ ಪಡೆಯುವುದನ್ನು ತಡೆಯುತ್ತದೆ. ಆದ್ದರಿಂದ, ರಾತ್ರಿಯಲ್ಲಿ ಚಾಕೊಲೇಟ್ ತಿನ್ನಲು ನಿಮಗೆ ಅನಿಸಿದರೂ, ಚಾಕೊಲೇಟ್ ತಿನ್ನುವುದನ್ನು ತಪ್ಪಿಸಿ.
ಮಸಾಲೆಯುಕ್ತ ಆಹಾರ: ಸಂಜೆಯ ಊಟದಲ್ಲಿ ಮಸಾಲೆಯುಕ್ತ ಅಥವಾ ಕರಿದ ಆಹಾರವನ್ನು ಸೇವಿಸುವುದರಿಂದ ಹೊಟ್ಟೆಯಲ್ಲಿ ಆಮ್ಲವು ಹೆಚ್ಚಾಗುತ್ತದೆ. ರಾತ್ರಿ ಊಟದ ಹೊರತಾಗಿ, ಮಲಗುವ ಮುನ್ನ ಮಸಾಲೆಯುಕ್ತ ಆಹಾರವನ್ನು ಸೇವಿಸಿದರೆ ಆಸಿಡ್ ರಿಫ್ಲಕ್ಸ್ ಸಮಸ್ಯೆ ಉಂಟಾಗುತ್ತದೆ. ಇದರಿಂದಾಗಿ ನಿದ್ರೆಗೆ ತೊಂದರೆಯಾಗುತ್ತದೆ ಮತ್ತು ರಾತ್ರಿಯಿಡೀ ಚಡಪಡಿಕೆ ಇರುತ್ತದೆ. ಆದ್ದರಿಂದ, ರಾತ್ರಿ ಮಲಗುವ ಮೂರರಿಂದ ನಾಲ್ಕು ಗಂಟೆಗಳ ಮೊದಲು ಹುರಿದ ಮತ್ತು ಮಸಾಲೆಯುಕ್ತ ಆಹಾರವನ್ನು ಸೇವಿಸುವುದನ್ನು ತಪ್ಪಿಸಬೇಕು.
ಜಂಕ್ ಫುಡ್: ರಾತ್ರಿ ವೇಳೆಯೂ ಬರ್ಗರ್, ಫ್ರೆಂಚ್ ಫ್ರೈಸ್ ಮುಂತಾದವುಗಳನ್ನು ತಿನ್ನುವುದರಿಂದ ಹೊಟ್ಟೆ ಭಾರವಾಗುತ್ತದೆ, ಅಜೀರ್ಣ ಉಂಟಾಗುತ್ತದೆ. ಇವುಗಳನ್ನು ಅರಗಿಸಿಕೊಳ್ಳಲು ಜೀರ್ಣಾಂಗ ವ್ಯವಸ್ಥೆಯು ಹೆಚ್ಚು ಕೆಲಸ ಮಾಡಬೇಕು, ಇದು ನಿದ್ರೆಯ ಮೇಲೆ ಪರಿಣಾಮ ಬೀರುತ್ತದೆ
ಕೋಲ್ಡ್ ಡ್ರಿಂಕ್ಸ್: ರಾತ್ರಿಯಲ್ಲಿ ಸೋಡಾ ಅಥವಾ ಇತರ ಕಾರ್ಬೊನೇಟೆಡ್ ಪಾನೀಯಗಳನ್ನು ಕುಡಿಯುವುದರಿಂದ ನಿದ್ರೆಗೆ ತೊಂದರೆಯಾಗುತ್ತದೆ. ಅಂತಹ ಪಾನೀಯಗಳಲ್ಲಿ ಹೆಚ್ಚಿನ ಪ್ರಮಾಣದ ಸಕ್ಕರೆ ಮತ್ತು ಕೆಫೀನ್ ಇರುತ್ತದೆ. ಮಲಗುವ ಮುನ್ನ ಇವುಗಳನ್ನು ಕುಡಿದರೆ ನಿಮ್ಮ ನಿದ್ದೆ ಕೆಡುತ್ತದೆ
ಹುಳಿ ಹಣ್ಣುಗಳು: ನಿಂಬೆ ಅಥವಾ ಇತರ ಸಿಟ್ರಸ್ ಹಣ್ಣುಗಳು ಆಮ್ಲೀಯವಾಗಿರುತ್ತವೆ. ಇಂತಹ ಹಣ್ಣುಗಳನ್ನು ರಾತ್ರಿ ತಿಂದರೆ ಅಸಿಡಿಟಿ ಹೆಚ್ಚುತ್ತದೆ. ಆದ್ದರಿಂದ, ರಾತ್ರಿ ಮಲಗುವ ಮೊದಲು ಹುಳಿ ಹಣ್ಣುಗಳನ್ನು ತಿನ್ನುವುದನ್ನು ತಪ್ಪಿಸಿ.