ರಾಂಚಿ: ಮುಂಬರುವ ಜಾರ್ಖಂಡ್ ವಿಧಾನಸಭಾ ಚುನಾವಣೆಗೆ ಬಿಜೆಪಿ ಪ್ರಣಾಳಿಕೆಯನ್ನು ಕೇಂದ್ರ ಗೃಹಸಚಿವ ಅಮಿತ್ ಶಾ ಭಾನುವಾರ ಬಿಡುಗಡೆಗೊಳಿಸಿದರು.
Mutual Fund: ಜಸ್ಟ್ 1 ಲಕ್ಷ ಹೂಡಿಕೆ ಮಾಡಿದ್ರೆ ಸಾಕು 1 ಕೋಟಿ ರೂ. ನಿಮ್ಮದಾಗುತ್ತೆ! ಹೇಗೆ ಗೊತ್ತಾ..?
ಬಿಜೆಪಿ ಜಾರ್ಖಂಡ್ನಲ್ಲಿ ಅಧಿಕಾರಕ್ಕೆ ಬಂದರೆ ರಾಜ್ಯದ ಪ್ರತಿಯೊಬ್ಬ ಮಹಿಳೆಗೆ ತಿಂಗಳಿಗೆ 2,100 ರೂ. ನೀಡುವುದು ಸೇರಿದಂತೆ ಹಲವು ಗ್ಯಾರಂಟಿಗಳನ್ನು ಘೋಷಣೆ ಮಾಡಿದರು.
ಬಿಜೆಪಿ ಪ್ರಣಾಳಿಕೆ ಏನು?
* ಪ್ರತಿ ಮನೆಗೆ 500 ರೂ.ಗೆ ಎಲ್ಪಿಜಿ ಸಿಲಿಂಡರ್ ಮತ್ತು ವಾರ್ಷಿಕ 2 ಉಚಿತ ಸಿಲಿಂಡರ್
* ನುಸುಳುಕೋರರು ಆಕ್ರಮಿಸಿಕೊಂಡಿರುವ ಆದಿವಾಸಿಗಳ ಭೂಮಿಯನ್ನು ಆದಿವಾಸಿಗಳಿಗೆ ಹಿಂದಿರುಗಿಸುವುದಾಗಿ ಪ್ರತಿಜ್ಞೆ
* ಬುಡಕಟ್ಟು ಜನಾಂಗದವರನ್ನು ಮದುವೆಯಾಗುವ ನುಸುಳುಕೋರರ ಮಕ್ಕಳಿಗೆ ಬುಡಕಟ್ಟು ಸ್ಥಾನಮಾನ ರದ್ದು
* ಆದಿವಾಸಿಗಳನ್ನು ಏಕರೂಪ ನಾಗರಿಕ ಸಂಹಿತೆಯ (ಯುಸಿಸಿ) ವ್ಯಾಪ್ತಿಯಿಂದ ಹೊರಗಿಡಲಾಗುವುದು
* ಪ್ರಶ್ನೆ ಪತ್ರಕೆ ಸೋರಿಕೆಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಂಡು ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸುವುದಾಗಿ ಭರವಸೆ
* 5 ವರ್ಷಗಳಲ್ಲಿ ಯುವಕರಿಗೆ ಸ್ವಯಂ ಉದ್ಯೋಗಕ್ಕಾಗಿ 5 ಲಕ್ಷ ಅವಕಾಶಗಳನ್ನು ಖಾತರಿಪಡಿಸುತ್ತೇವೆ
* 2,87,500 ಸರ್ಕಾರಿ ಹುದ್ದೆಗಳ ನೇಮಕಾತಿ ಪಾರದರ್ಶಕವಾಗಿ ನಡೆಯಲಿದ್ದು, ಮೊದಲ ಕ್ಯಾಬಿನೆಟ್ನಲ್ಲೇ ಪ್ರಕ್ರಿಯೆ ಶುರುವಾಗಲಿದೆ.
* 2025ರ ನವೆಂಬರ್ ಒಳಗೆ 1.5 ಲಕ್ಷ ಹುದ್ದೆಗಳನ್ನು ಭರ್ತಿ ಮಾಡಲಾಗುವುದು.
81 ಸದಸ್ಯ ಬಲದ ಕ್ಷೇತ್ರಗಳಿಗೆ ನ.13 ಮತ್ತು 20 ರಂದು ಚುನಾವಣೆ ನಡೆಯಲಿದೆ. ನ.23 ರಂದು ಮತ ಎಣಿಕೆ ನಡೆಯಲಿದೆ.