ನವದೆಹಲಿ: ಚೀನಾದ ನಿರ್ದೇಶನದ ಮೇರೆಗೆ ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಮತ್ತು ರಾಂಬನ್ ಜಿಲ್ಲೆಗಳನ್ನು ಸಂಪರ್ಕಿಸುವ ಚೆನಾಬ್ ರೈಲ್ವೆ ಸೇತುವೆ ಬಗ್ಗೆ ಪಾಕಿಸ್ತಾನ ಮತ್ತು ಚೀನಾದ ಗುಪ್ತಚರ ಸಂಸ್ಥೆ ಐಎಸ್ಐ ಮಾಹಿತಿ ಸಂಗ್ರಹ ಮಾಡುತ್ತಿದೆ ಎಂದು ವರದಿಯಾಗಿದೆ.
ವಿಶ್ವದ ಅತಿ ಎತ್ತರದ ರೈಲ್ವೆ ಸೇತುವೆಯಾದ ಚೆನಾಬ್ ಸೇತುವೆಯು ಇತ್ತೀಚೆಗೆ ಪ್ರಾಯೋಗಿಕ ಕಾರ್ಯಾಚರಣೆ ಪ್ರಾರಂಭಿಸಿತು. ಈ ಸೇತುವೆ ಜಮ್ಮು ಮತ್ತು ಕಾಶ್ಮೀರ ಹಾಗೂ ದೇಶದ ಇತರ ಭಾಗಗಳ ನಡುವಿನ ಸಂಪರ್ಕವನ್ನು ಹೆಚ್ಚಿಸುತ್ತದೆ. ಮೂಲಗಳ ಪ್ರಕಾರ ಪಾಕಿಸ್ತಾನ ಮತ್ತು ಚೀನಾದ ಗುಪ್ತಚರ ಸಂಸ್ಥೆಗಳು ಈ ಸೇತುವೆಯ ಬಗ್ಗೆ ಪ್ರಮುಖ ಮಾಹಿತಿಯನ್ನು ಸಂಗ್ರಹಿಸಿವೆ.
Marigold: ಈ ವಿಧಾನ ಅನುಸರಿಸಿ ಚೆಂಡು ಹೂ ಬೆಳೆದರೆ 1 ಎಕರೆಯಲ್ಲಿ ಲಕ್ಷಗಟ್ಟಲೆ ಹಣ ಗಳಿಸಬಹುದು!
ಜಮ್ಮುವಿನ ರಿಯಾಸಿ ಜಿಲ್ಲೆಯಲ್ಲಿ ಈ ಸೇತುವೆಯ ನಿರ್ಮಾಣ ಪೂರ್ಣಗೊಳಿಸಲು ಸರ್ಕಾರಕ್ಕೆ 20 ವರ್ಷಗಳು ಬೇಕಾಯಿತು. ಇದರ ನಿರ್ಮಾಣಕ್ಕೆ ಸಮಯದ ಮಿತಿ ಹೇರಿರಲಿಲ್ಲ. ಜಮ್ಮುವಿನ ಮೂಲಕ ಹಾದುಹೋಗುವ 272 ಕಿಮೀ ಉದ್ದದ ಸೇತುವೆ ಆಲ್-ವೆದರ್ ರೈಲ್ವೆ ವಿಭಾಗದ ಒಂದು ಭಾಗವಾಗಿದೆ, ಇದು ಅಂತಿಮವಾಗಿ ಕಾಶ್ಮೀರವನ್ನು ಸಂಪರ್ಕಿಸಲಿದೆ.
ಭಾರಿ ಹಿಮಪಾತದಿಂದ ಚಳಿಗಾಲದಲ್ಲಿ ರಸ್ತೆಗಳ ಬ್ಲಾಕ್ ಆಗಲಿದ್ದು, ರಸ್ತೆ ಮಾರ್ಗವಾಗಿ ಕಾಶ್ಮೀರ ಸಂಪರ್ಕಕ್ಕೆ ಸಮಸ್ಯೆಯಾ ಗಲಿದೆ. ಈ ಸೇತುವೆಯಿಂದ ಸರ್ವ ಕಾಲದಲ್ಲೂ ಕಾಶ್ಮೀರವನ್ನು ಸಂಪರ್ಕಿಸಬಹುದು. ಚೆನಾಬ್ ಸೇತುವೆಯೊಂದಿಗೆ, ತೊಂದರೆಗೊಳಗಾದ ಗಡಿ ಪ್ರದೇಶದಲ್ಲಿ ಭಾರತವು ಕಾರ್ಯತಂತ್ರದ ಪ್ರಯೋಜನವನ್ನು ಪಡೆಯುತ್ತದೆ.