ಹಣದ ವಿಚಾರ ಸಾಕಷ್ಟು ಗೊಂದಲಗಳನ್ನು ಮೂಡಿಸುತ್ತದೆ. ಯಾವ ಸಮಯದಲ್ಲಿ ಯಾವ ನಿರ್ಧಾರ ತೆಗೆದುಕೊಳ್ಳುವುದು ಗೊತ್ತಾಗದೇ ಹೋಗಬಹುದು. ಇವತ್ತು ಹಣಕಾಸು ಸ್ಥಿತಿ ಸುಭದ್ರವಾಗಿರಬೇಕೆಂದರೆ ಹೂಡಿಕೆ ಬಹಳ ಮುಖ್ಯ. ಸಾಲ ತೀರಿಸುವುದೂ ಮುಖ್ಯ, ಹೂಡಿಕೆ ಮಾಡುವುದೂ ಮುಖ್ಯ. ಸಾಲ ಮುಕ್ತವಾಗಿರಬೇಕು. ಹೂಡಿಕೆಗಳು ಆದಷ್ಟೂ ಹೆಚ್ಚಿರಬೇಕು. ಹಣ ಸಂಪಾದನೆ ಹೆಚ್ಚುತ್ತಿರಬೇಕು. ಈ ಮೂರು ಅಂಶಗಳನ್ನು ನೀವು ಪಾಲಿಸುತ್ತಿದ್ದರೆ ಹಣಕಾಸು ಭವಿಷ್ಯದ ಸ್ಥಿತಿ ಸುದೃಢವಾಗಿರುತ್ತದೆ.
ಇನ್ನೂ ಟಾಟಾ ಮಿಡ್ ಕ್ಯಾಪ್ ಗ್ರೋಥ್ ಫಂಡ್ ಸುಮಾರು 20.32% ಲಾಭ ನೀಡಿದೆ, ಇದರ ಪರಿಣಾಮವಾಗಿ 25 ವರ್ಷಗಳ ಹಿಂದೆ 1 ಲಕ್ಷ ರೂಪಾಯಿ ಹೂಡಿಕೆ ಮಾಡಿದ್ದರೆ ಇಂದು ಅದು 1.02 ಕೋಟಿ ರೂಪಾಯಿಗೆ ತಲುಪುತ್ತಿತ್ತು. 1 ಲಕ್ಷ ರೂಪಾಯಿ ಹಣ ಹೊಂದಿಸಿ ಹೂಡಿಕೆ ಮಾಡಿದ್ದವರು ಇದೀಗ ಕೋಟ್ಯಾಧಿಪತಿಗಳಾಗಿದ್ದಾರೆ. ಗರಿಷ್ಠ ಲಾಭದ ಮೂಲಕ ಆರ್ಥಿಕತೆಯಲ್ಲಿ ಸದೃಢತೆಯನ್ನು ಸಾಧಿಸಲು ಸಾಧ್ಯವಿದೆ.
ಹೂಡಿಕೆಯನ್ನು ನಾಲ್ಕು ಪಟ್ಟು ಹೆಚ್ಚಿಸಬಹುದಾದ ಮ್ಯೂಚುಯಲ್ ಫಂಡ್ ಯೋಜನೆಗಳಲ್ಲಿ ಹೂಡಿಕೆದಾರರು ಆಸಕ್ತಿ ಹೊಂದಿದ್ದಾರೆ. ಈ ರೀತಿಯ ಮ್ಯೂಚುಯಲ್ ಫಂಡ್ಗಳನ್ನು ಟ್ರ್ಯಾಕ್ ಮಾಡುವುದು ಸುಲಭದ ಕೆಲಸವಲ್ಲ. ಮ್ಯೂಚ್ಯುವಲ್ ಫಂಡ್ ಯೋಜನೆಗಳಲ್ಲಿ ನಿಮ್ಮ ಸಾಮರ್ಥ್ಯ, ಹೂಡಿಕೆ, ಅವಧಿ ಸೇರಿದಂತೆ ಇತರ ಷರತ್ತುಗಳನ್ನು ಕೂಲಂಕುಷವಾಗಿ ಅರ್ಥಮಾಡಿಕೊಂಡು ಬಳಿಕ ಹೂಡಿಕೆ ಮಾಡಿದರೆ ಅಪಾಯದ ಪ್ರಮಾಣ ಕಡಿಮೆ.
ಈ ಯೋಜನೆಗಳ ಬಗ್ಗೆ ಗಮನ ಹರಿಸದಿದ್ದರೆ ಹೂಡಿಕೆಯಲ್ಲಿ ಹೆಚ್ಚಿನ ಅಪಾಯವನ್ನು ಎದುರಿಸಬೇಕಾಗುತ್ತದೆ. ಕಡಿಮೆ ಹಣ ಹೂಡಿಕೆ ಮಾಡಿ ಹೆಚ್ಚಿನ ರಿಟರ್ನ್ಸ್ ಪಡೆಯುವ ಯೋಜನೆಗಳ ಕುರಿತು ಹೆಚ್ಚಿನ ಅಧ್ಯಯನ ಮಾಡಿ ಹೂಡಿಕೆ ಮಾಡಿದರೆ ಒಳೀತು. ಆದರೆ ಈ ಮ್ಯೂಚುಯಲ್ ಫಂಡ್ಗಳ ಕಾರ್ಯಕ್ಷಮತೆಯೂ ಗಮನಾರ್ಹವಾಗಿದೆ. ಈ ಫಂಡ್ಗಳಲ್ಲಿ ಭಾರಿ ಲಾಭ ಗಳಿಸಬಹುದು.
ಫ್ರಾಂಕ್ಲಿನ್ ಇಂಡಿಯಾ ಪ್ರೈಮಾ ಫಂಡ್ ಅತ್ಯಂತ ಹಳೆಯ ಮಿಡ್ ಕ್ಯಾಪ್ ಫಂಡ್ಗಳಲ್ಲಿ ಒಂದಾಗಿದೆ. ಫ್ರಾಂಕ್ಲಿನ್ ಇಂಡಿಯಾ ಪ್ರೈಮಾ ಫಂಡ್ನಲ್ಲಿ 25 ವರ್ಷಗಳ ಹಿಂದೆ 1 ಲಕ್ಷ ರೂಪಾಯಿ ಹೂಡಿಕೆ ಮಾಡಿದ್ದರೆ ಇಂದು 1.15 ಕೋಟಿ ರೂಪಾಯಿ ಲಾಭ ಪಡೆಯಬಹುದಿತ್ತು. ಈಗಲೂ ಸರಿಯಾದ ಯೋಜನೆ ಆಯ್ಕೆ ಮಾಡಿಕೊಂಡು ಹೂಡಿಕೆ ಮಾಡಿದರೆ ಕೆಲವೇ ವರ್ಷಗಳಲ್ಲಿ ಕೋಟಿ ಕೋಟಿ ರೂಪಾಯಿ ಆದಾಯಗಳಿಸಲು ಸಾಧ್ಯವಿದೆ.
ಮತ್ತೊಂದೆಡೆ, ನಿಪ್ಪಾನ್ ಇಂಡಿಯಾ ಗ್ರೋಥ್ ಫಂಡ್ನಲ್ಲಿ 25 ವರ್ಷಗಳ ಹಿಂದೆ 1 ಲಕ್ಷ ರೂಪಾಯಿ ಹೂಡಿಕೆ ಮಾಡಿದ್ದರೆ 1.72 ಕೋಟಿ ರೂಪಾಯಿ ಪಡೆಯಬಹುದಿತ್ತು. ಈ ರೀತಿ ಹಲವು ಮ್ಯುಚಲ್ ಫಂಡ್ ಯೋಜನೆಗಳು ಚಾಲ್ತಿಯಲ್ಲಿದೆ. ಹೂಡಿಕೆ ಮಾಡಿ ಲಾಭಗಳಿಸುವ ಮೊದಲು ಫಂಡ್ಗಳ ಕುರಿತು ತಿಳಿದುಕೊಳ್ಳಿ, ಒಂದು ಸಣ್ಣ ತಪ್ಪು ಅತೀ ದೊಡ್ಡ ಅಪಾಯಕ್ಕೂ ನಾಂದಿ ಹಾಡಲಿದೆ.
ಇವತ್ತಿನ ಸಂದರ್ಭದಲ್ಲಿ ಸಾಲ ಮಾಡದೇ ವಿಧಿ ಇಲ್ಲ ಎನ್ನವ ಸ್ಥಿತಿ ಇದೆ. ಸಾವಿಲ್ಲದ ಮನೆಯಿಂದ ಸಾಸಿವೆ ಕಾಳು ತೆಗೆದುಕೊಂಡು ಬರಲು ಸಾಧ್ಯವಿಲ್ಲವೋ, ಹಾಗೆಯೇ ಸಾಲವಿಲ್ಲದ ಮನೆಯಿಂದ ಸಾಂಬಾರು ತರಲು ಸಾಧ್ಯವಿಲ್ಲ. ಅದೇನೇ ಇರಲಿ, ಕ್ರೆಡಿಟ್ ಕಾರ್ಡ್ ರೂಪದಲ್ಲಾದರೂ ಸಾಲ ಮಾಡುವವರೇ ಎಲ್ಲಾ.