ಬೆಂಗಳೂರು:- ಮುಡಾ ಮಾಜಿ ಆಯುಕ್ತರ ಮನೆ ಮೇಲೆ ಇಡಿ ದಾಳಿ ಮಾಡಿದೆ. ಹೀಗಾಗಿ ಪ್ರಕರಣ ಎ1 ಆರೋಪಿಯಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯಗೂ ಸಹ ಯಾವಾಗ ಇಡಿ ದಾಳಿ ಆಗುತ್ತೋ ಎನ್ನುವ ಆತಂಕದಲ್ಲಿದ್ದಾರೆ.
HC Balakrishna: ಕುಮಾರಸ್ವಾಮಿ ಯಾರನ್ನೂ ಬೆಳೆಸುವ ಕೆಲಸ ಅಂತೂ ಮಾಡಿಲ್ಲ: ಹೆಚ್.ಸಿ ಬಾಲಕೃಷ್ಣ
ಬೆಂಗಳೂರಿನ ಜೆ.ಪಿ.ನಗರದಲ್ಲಿರುವ ಬಿಲ್ಡರ್ ಎನ್. ಮಂಜುನಾಥ್ ಮನೆ ಮೇಲೆ ಇಡಿ ದಾಳಿ ಮಾಡಿದೆ. ಇದರ ಜೊತೆಗೆ ಈಗ ಬೆಂಗಳೂರಿನ ಮಲ್ಲೇಶ್ವರಂನ 10ನೇ ಕ್ರಾಸ್ನಲ್ಲಿರುವ ಮುಡಾ ಮಾಜಿ ಆಯುಕ್ತ ನಟೇಶ್ ನಿವಾಸದ ಮೇಲೂ ಸಹ ಇಡಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ನಟೇಶ್ ಮನೆಯಲ್ಲೇ ಇದ್ದ ಸಂದರ್ಭದಲ್ಲಿ ಐವರು ಇಡಿ ಅಧಿಕಾರಿಗಳು ದಾಳಿ ಮಾಡಿದ್ದು, ಪರಿಶೀಲನೆ ನಡೆಸಿದ್ದಾರೆ
ಮುಡಾ ಪ್ರಕರಣದಲ್ಲಿ ಇಡಿ ಅಧಿಕಾರಿಗಳು ದೂರುದಾರರಿಗೆ ನೋಟಿಸ್ ನೀಡಿ ಮಾಹಿತಿ ಕಲೆಹಾಕುವುದರ ಜೊತೆಗೆ ಅಧಿಕಾರಿಗಳ ಜನ್ಮಜಾಲಾಡುತ್ತಿದ್ದಾರೆ. ಮುಡಾದಲ್ಲಿ ಕಾರ್ಯನಿರ್ವಹಿಸಿದ ಎಲ್ಲಾ ಅಧಿಕಾರಿಗಳ ಮೇಲೆ ಹದ್ದಿನ ಕಣ್ಣಿಟ್ಟಿದ್ದು, ದಾಳಿ ಮಾಡಿ ದಾಖಲೆ ಪರಿಶೀಲನೆಗೆ ಮುಂದಾಗಿದೆ. ಇದರಿಂದ ಮುಡಾ ಹಗರಣ ಪ್ರಕರಣದ ಎ1 ಆರೋಪಿಯಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯಗೂ ಸಹ ಯಾವ ಸಂದರ್ಭದಲ್ಲಿ ಇಡಿ ದಾಳಿ ಮಾಡುತ್ತೋ ಎನ್ನುವ ಆತಂಕ ಶುರುವಾಗಿದೆ.