ಬಿಗ್ ಬಾಸ್ ಸೀಸನ್ 11’ರ ಸ್ಪರ್ಧಿ ಆಗಿ ತುಕಾಲಿ ಹೆಂಡತಿ ಮಾನಸ ಹೋಗಿದ್ದಾರೆ.
ಕೇಂದ್ರ ಸಚಿವರನ್ನು ಹಂದಿಗೆ ಹೋಲಿಸಿದ ಲೋಕಾಯುಕ್ತ ಎಡಿಜಿಪಿ ಬೆಲೆ ತೆರಬೇಕಾಗುತ್ತೆ – ಪ್ರಹ್ಲಾದ್ ಜೋಶಿ ಗರಂ!
ಬಿಗ್ ಬಾಸ್ ಕನ್ನಡ ಸೀಸನ್ 11’ ಎಂದಮೇಲೆ ಎಂಟರ್ಟೇನ್ಮೆಂಟ್ ಬೇಕೆ ಬೇಕು. ದೊಡ್ಮನೆಗೆ ಬಂದಿರೋ ಮಾನಸಾ ಕಾಮಿಡಿ ಮಾಡೋದು ಪಕ್ಕಾ. ಕಳೆದ ಸೀಸನ್ನಲ್ಲಿ ತುಕಾಲಿ ಸಂತೋಷ್ ಅವರನ್ನು ಕಳುಹಿಸಿಕೊಡೋಕೆ ಮಾನಸಾ ಬಂದಿದ್ದರು. ಈ ಬಾರಿ ಪತ್ನಿನ ಕಳುಹಿಸಿಕೊಡೋಕೆ ತುಕಾಲಿ ಸಂತೋಷ್ ಬಂದಿದ್ದಾರೆ. ಕನ್ನಡ ಬಿಗ್ ಬಾಸ್ ಇತಿಹಾಸದಲ್ಲಿ ನಡೆದಿದ್ದು ಇದೇ ಮೊದಲು ಎನ್ನಬಹುದು.
ತುಕಾಲಿ ಸಂತೋಷ್ ಅವರು ಅಲ್ಲಿ ಆಗಮಿಸಿದ್ದರು. ಈ ವೇಳೆ, ‘ನಾನು ಹಾಗೂ ನನ್ನ ಪತ್ನಿ ಬಿಗ್ ಬಾಸ್ ಮನೆಯಲ್ಲಿ ಮಾತ್ರ ಒಟ್ಟಾಗಿ ಮಲಗಿಲ್ಲ’ ಎಂದರು ಸಂತೋಷ್. ಈ ಮಾತಿಗೆ ಸುದೀಪ್ ನಕ್ಕರು.
ಪತಿ ಹಾಗೂ ಪತ್ನಿ ಬಿಗ್ ಬಾಸ್ ಮನೆಗೆ ಒಟ್ಟಿಗೆ ಹೋಗಿದ್ದು ಈವರೆಗೆ ನಡೆದಿಲ್ಲ. ಆದರೆ, ಒಂದು ವರ್ಷ ಪತಿ ಮತ್ತೊಂದು ವರ್ಷ ಪತ್ನಿ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದು ಇದೇ ಮೊದಲು. ಈ ಮೂಲಕ ಇವರು ದಾಖಲೆ ಬರೆದಿದ್ದಾರೆ ಎನ್ನಬಹುದು.