ಕಲಬುರಗಿ: ಕಲಬುರಗಿ ಜಿಲ್ಲೆ ಚಿಂಚೋಳಿ ತಾಲೂಕಿನ ಪೋತಂಗಲ್ ಗ್ರಾಮದಲ್ಲಿ ಸಾಲ ಬಾಧೆ ತಾಳಲಾರದೇ ಪೆಟ್ರೋಲ್ ಸುರಿದುಕೊಂಡು ರೈತ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಪಾಂಡಪ್ಪ ಕೋರ್ವನ್ (45) ಮೃತ ದುರ್ಧೈವಿಯಾಗಿದ್ದು, ಬೆಳೆ ಬೆಳೆಯಲು ಬ್ಯಾಂಕ್ ಹಾಗೂ ಖಾಸಗಿ ಆಗಿ ಲಕ್ಷಾಂತರ ರೂ ಸಾಲ ಮಾಡಿಕೊಂಡಿದ್ದರು.
Ghee Test: ನೀವು ಖರೀದಿಸುವ ತುಪ್ಪ ಅಸಲಿಯೋ, ನಕಲಿಯೋ..? ಹೀಗೆ ಪರೀಕ್ಷಿಸಿ ನೋಡಿ
ಅದಲ್ಲದೆ ನಿರಂತರವಾಗಿ ಸುರಿದ ಮಳೆಯಿಂದ ಜಮೀನಿನಲ್ಲಿದ್ದ ತೊಗರಿ ಸಂಪೂರ್ಣ ನಾಶವಾಗಿತ್ತು. ಇತ್ತ ಬ್ಯಾಂಕ್ ಅಧಿಕಾರಿಗಳ ಸಾಲದ ಕಿರುಕುಳ ತಾಳಲಾರದೇ ಮನೆಯಲ್ಲಿಯೇ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಘಟನೆ ಸಂಬಂಧ ಸುಲೇಪೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.